Crime News: ಪ್ರೀತಿಸಿದ ಹುಡುಗಿಯ ಮನೆಯಿಂದ ಕರೆಬಂತು ಎಂದು ಹೋದ ಯುವಕ; ಮುಂದಾಗಿದ್ದೆಲ್ಲ ದುರಂತ, ಯುವತಿ ಹೇಳಿದ್ದೇ ಬೇರೆ

| Updated By: Lakshmi Hegde

Updated on: Sep 18, 2021 | 1:29 PM

Madhya Pradesh: ಯುವತಿಯ ಕುಟುಂಬದ ನಾಲ್ವರನ್ನು ಪೊಲೀಸರು ಬಂಧಿಸಿ, ಕೊಲೆ ಕೇಸ್​ ದಾಖಲಿಸಿದ್ದಾರೆ.  ಇತ್ತ ಯುವಕನ ಕುಟುಂಬದವರು ಸಾಗರ್​-ಬಿನಾ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

Crime News: ಪ್ರೀತಿಸಿದ ಹುಡುಗಿಯ ಮನೆಯಿಂದ ಕರೆಬಂತು ಎಂದು ಹೋದ ಯುವಕ; ಮುಂದಾಗಿದ್ದೆಲ್ಲ ದುರಂತ, ಯುವತಿ ಹೇಳಿದ್ದೇ ಬೇರೆ
ಸಾಂಕೇತಿಕ ಚಿತ್ರ
Follow us on

ಸಾಗರ: ಯುವತಿಯೊಬ್ಬಳನ್ನು ಪ್ರೀತಿಸಿದ್ದ 25ವರ್ಷದ ಯುವಕ ದುರಂತ ಅಂತ್ಯ ಕಂಡಿದ್ದಾನೆ. ಯುವತಿಯ ಕುಟುಂಬದವರೇ ಆ ವ್ಯಕ್ತಿಗೆ ಬೆಂಕಿ ಹಚ್ಚಿ ಕೊಂದಿದ್ದಾರೆ. ದುರ್ಘಟನೆ ನಡೆದದ್ದು ಮಧ್ಯಪ್ರದೇಶದ ಸಾಗರ್​ ಜಿಲ್ಲೆಯ ಸೇಮ್ರಾ ಲಹರಿಯಾ ಎಂಬ ಗ್ರಾಮದಲ್ಲಿ. ಮೃತ ಯುವಕನ ಕುಟುಂಬದವರ ದೂರಿನ ಅನ್ವಯ ಸದ್ಯ ನರಿಯೋಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ಕುಟುಂಬದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.  

ಇನ್ನು ಯುವಕನ ಪ್ರೇಯಸಿ, 23ವರ್ಷದ ಯುವತಿಗೂ ಸುಟ್ಟ ಗಾಯಗಳಾಗಿವೆ. ಆದರೆ ಪೊಲೀಸರ ಎದುರು ಆಕೆ ಬೇರೆಯದ್ದೇ ರೀತಿಯ ಹೇಳಿಕೆ ನೀಡಿದ್ದಾಲೆ. ‘ನನ್ನ ಕುಟುಂಬದವರದ್ದು ತಪ್ಪಿಲ್ಲ. ಆತನೇ ನಮ್ಮ ಮನೆಗೆ ಬಂದಿದ್ದ. ಜಗಳವಾಡಿ ನಂತರ ನಮ್ಮ ಮನೆಯಲ್ಲೇ ನನಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ. ಸೀಮೆ ಎಣ್ಣೆಯನ್ನೂ ಸುರಿದಿದ್ದ. ಆದರೆ ಬೆಂಕಿ ಹಾಕುವ ವೇಳೆ ಆತನಿಗೇ ತಗುಲಿದೆ. ಅಷ್ಟಕ್ಕೂ ನನ್ನ ಕುಟುಂಬದವರು ನಮ್ಮಿಬ್ಬರನ್ನೂ ಪ್ರಯತ್ನಿಸಲು ತುಂಬ ಪ್ರಯತ್ನ ಪಟ್ಟರು’ ಎಂದು ಹೇಳಿಕೆ ನೀಡಿದ್ದಾಳೆ.

ಬೆಂಕಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹೀಗೆ ಸಾವಿಗೂ ಮೊದಲು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ನನಗೆ ಗುರುವಾರ ರಾತ್ರಿ ತಮ್ಮ ಮನೆಗೆ ಬರುವಂತೆ ಯುವತಿಯ ಮನೆಯಿಂದ ಕರೆ ಬಂತು. ಯಾಕೆಂದು ಕೇಳಿದ್ದಕ್ಕೆ ಮಾತುಕತೆ ನಡೆಸುವುದು ಇದೆ ಎಂದು ಹೇಳಿದರು. ಆದರೆ ಅಲ್ಲಿಗೆ ಹೋದರೆ ಸೀಮೆ ಎಣ್ಣೆ ಹಾಕಿ, ಬೆಂಕಿ ಹಾಕಿದರು ಎಂದು ಹೇಳಿದ್ದಾನೆ. ಯುವಕನ ಹೇಳಿಕೆಯನ್ನು ಪಡೆದ ಪೊಲೀಸರು, ಯುವತಿಯ ಕುಟುಂಬದ ನಾಲ್ವರನ್ನು ಪೊಲೀಸರು ಬಂಧಿಸಿ, ಕೊಲೆ ಕೇಸ್​ ದಾಖಲಿಸಿದ್ದಾರೆ.  ಇತ್ತ ಯುವಕನ ಕುಟುಂಬದವರು ಸಾಗರ್​-ಬಿನಾ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಯುವತಿಯ ಮನೆ ಧ್ವಂಸವಾಗಬೇಕು ಎಂದು ಆಗ್ರಹಿಸಿದ್ದಾರೆ. ನಂತರ ಮಧ್ಯಪ್ರದೇಶದ ನಗರಾಭಿವೃದ್ಧಿ ಸಚಿವ ಭೂಪೇಂದ್ರ ಪಟೇಲ್​ ಮಧ್ಯಪ್ರವೇಶಿಸಿ, ಪ್ರತಿಭಟನೆ ನಿಲ್ಲಿಸಿದ್ದಾರೆ.

ಇದನ್ನೂ ಓದಿ: Chintamani: ಟೊಮ್ಯಾಟೊ ಬೆಳೆ ನಷ್ಟದಿಂದ ನೊಂದು ರೈತ ದಂಪತಿ ಆತ್ಮಹತ್ಯೆ

ಗೋವಾದ ಎಲ್ಲ ಅರ್ಹ ವ್ಯಕ್ತಿಗಳಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿಕೆ; ಆರೋಗ್ಯ ಕಾರ್ಯಕರ್ತರ ಶ್ರಮಕ್ಕೆ ಪ್ರಧಾನಿ ಮೆಚ್ಚುಗೆ

Published On - 1:20 pm, Sat, 18 September 21