ತ್ರಿಪುರ: ತ್ರಿಪುರಾದ ಭಾರತ-ಬಾಂಗ್ಲಾದೇಶ ಗಡಿಯ ಸಮೀಪದಲ್ಲಿ ಶಂಕಿತ ಉಗ್ರಗಾಮಿ ಗುಂಪಿನೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಅರೆಸೇನಾ ಯೋಧನೊಬ್ಬ ಹುತಾತ್ಮನಾಗಿದ್ದಾರೆ. ಉತ್ತರ ತ್ರಿಪುರಾದ ಕಾಂಚನ್‌ಪುರ ಉಪ ವಿಭಾಗದ ಆನಂದ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಡಿಯ ಸಮೀಪವಿರುವ ತ್ರಿಪುರ-ಮಿಜೋರಾಂ-ಬಾಂಗ್ಲಾದೇಶ ಟ್ರೈಜಂಕ್ಷನ್ ಬಳಿ ಶಂಕಿತ ಎನ್‌ಎಲ್‌ಎಫ್‌ಟಿ ಉಗ್ರರು ಗುಂಡಿನ ದಾಳಿ ನಡೆಸಿದಾಗ ಓರ್ವ ಯೋಧನಿಗೆ ಗಾಯಗಳಾಗಿವೆ.
ಉತ್ತರ ತ್ರಿಪುರಾ ಜಿಲ್ಲೆಯ ಆನಂದಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಎಸ್‌ಎಫ್‌ನ 145 ಬೆಟಾಲಿಯನ್ ಅಡಿಯಲ್ಲಿ ಸಿಮನಾಪುರ 2 ರಲ್ಲಿ ಯೋಧರನ್ನು ನಿಯೋಜಿಸಲಾಗಿತ್ತು. ಗಡಿಯಾಚೆಯಿಂದ ಬಂದ ಉಗ್ರರು ಯೋಧನ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ನಾಲ್ಕು ಗುಂಡುಗಳು ಯೋಧನ ದೇಹಕ್ಕೆ ತಗುಲಿವೆ ಎಂದು ಪೊಲೀಸ್ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.
ಕಳೆದ ವರ್ಷ ತ್ರಿಪುರಾದಲ್ಲಿ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಎನ್‌ಎಲ್‌ಎಫ್‌ಟಿ ಭಯೋತ್ಪಾದಕರು ಗಸ್ತು ತಿರುಗುತ್ತಿದ್ದಾಗ ಇಬ್ಬರು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಗಳು ಸಾವನ್ನಪ್ಪಿದಾಗ ಇದೇ ರೀತಿಯ ದಾಳಿ ನಡೆದಿತ್ತು.
Published On - 3:21 pm, Fri, 19 August 22