AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿದುಳು ಸರ್ಜರಿ ವೇಳೆ ಗಾಯತ್ರಿ ಮಂತ್ರ ಪಠಿಸಿದ ರೋಗಿ; ನಂತರ ನಡೆಯಿತು ವೈದ್ಯಕೀಯ ಲೋಕ ಅಚ್ಚರಿ ಪಡುವಂಥ ಪವಾಡ

ಈ ಗಡ್ಡೆ ತುಂಬ ಸೂಕ್ಷ್ಮ ಪ್ರದೇಶದಲ್ಲಿ ಆಗಿತ್ತು. ಅದರ ನಿಖರ ಸ್ಥಳದ ಮೇಲೆ ಗಮನ ಕೇಂದ್ರೀಕರಿಸಲು ಹೆಚ್ಚಿನ ಸಾಮರ್ಥ್ಯವಿರುವ ಮೈಕ್ರೋಸ್ಕೋಪ್​ ಬಳಸಬೇಕಾಯಿತು ಎಂದು ಆಸ್ಪತ್ರೆ ನಿರ್ದೇಶಕರಾದ ಡಾ. ಮಾಲಾ ಅರೋನ್​ ತಿಳಿಸಿದ್ದಾರೆ.

ಮಿದುಳು ಸರ್ಜರಿ ವೇಳೆ ಗಾಯತ್ರಿ ಮಂತ್ರ ಪಠಿಸಿದ ರೋಗಿ; ನಂತರ ನಡೆಯಿತು ವೈದ್ಯಕೀಯ ಲೋಕ ಅಚ್ಚರಿ ಪಡುವಂಥ ಪವಾಡ
ಶಸ್ತ್ರಚಿಕಿತ್ಸೆ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Aug 11, 2021 | 1:22 PM

Share

ವೈದ್ಯಕೀಯ ಲೋಕವೇ  ಅಚ್ಚರಿಪಡುವಂತಹ ಪವಾಡಗಳು ಅದೆಷ್ಟೋ ನಡೆದುಹೋಗಿವೆ. ಹಾಗೇ ಈಗೊಂದು ಘಟನೆ ನಡೆದಿದ್ದು ಜೈಪುರದ ನಾರಾಯಣ ಆಸ್ಪತ್ರೆಯಲ್ಲಿ. ಇಲ್ಲಿ ನಿವೃತ್ತ ಪೊಲೀಸ್​ ಕಾನ್​ಸ್ಟೆಬಲ್​ ಒಬ್ಬರಿಗೆ ಮಿದುಳು ಸರ್ಜರಿ (Brain Surgery) ನಡೆದಿತ್ತು. ಮಿದುಳಿನಲ್ಲಿ ಗಡ್ಡೆಯಾಗಿ ತುಂಬ ಸಂಕಷ್ಟದಲ್ಲಿದ್ದ ಇವರಿಗೆ ಸರ್ಜರಿ ಮಾಡುವುದಾಗಿ ನಿಶ್ಚಯವೇನೋ ಆಗಿತ್ತು. ಆದರೆ ಆ ಶಸ್ತ್ರಚಿಕಿತ್ಸೆಯಲ್ಲಿ ಸ್ವಲ್ಪ ಏರುಪೇರಾದರೂ ಆ ರೋಗಿಯ ಆರೋಗ್ಯ (Health) ಇನ್ನಷ್ಟು ಹದಗೆಡುವ ಸಾಧ್ಯತೆ ಇತ್ತು. ಅದೆಲ್ಲಕ್ಕಿಂತ ಮಿಗಿಲಾಗಿ, ವೈದ್ಯರುಗಳಿಗೇ ಪೂರ್ತಿಯಾಗಿ ನಂಬಿಕೆ ಇರಲಿಲ್ಲ, ಸರ್ಜರಿ ಯಶಸ್ವಿಯಾಗಬಹುದು ಎಂದು.

ಆದರೆ ಪವಾಡವೆಂಬಂತೆ ರೋಗಿಗೆ ಮಾಡಲಾದ ಸರ್ಜರಿ ಯಶಸ್ವಿಯಾಗಿದೆ. ಅದಕ್ಕೆ ಕಾರಣ ಆ ಪೊಲೀಸ್​ ಕಾನ್​ಸ್ಟೆಬಲ್​ ತಮ್ಮ ಸರ್ಜರಿ ವೇಳೆ ಪಠಿಸುತ್ತಿದ್ದ ಗಾಯತ್ರಿ ಮಂತ್ರ ಎಂದೇ ಹೇಳಲಾಗುತ್ತಿದೆ. ಪೊಲೀಸ್ ಕಾನ್​ಸ್ಟೆಬಲ್​ ಹೆಸರು ರಿದಂಲಾಲ್​ ರಾಮ್​. 57ವರ್ಷದ ಇವರಿಗೆ ತೀವ್ರವಾಗಿ ಅಪಸ್ಮಾರ ಕಾಣಿಸಿಕೊಂಡಿತ್ತು. ರೋಗ ವಿಕಾರದಿಂದ ಮಾತಾಡಲೂ ಸಾಧ್ಯವಾಗುತ್ತಿರಲಿಲ್ಲ. ತಪಾಸಣೆ ಮಾಡಿದಾಗ ಅವರ ಮಿದುಳಿನಲ್ಲಿ ಗಡ್ಡೆ ಇರುವುದು ಗೊತ್ತಾಗಿತ್ತು. ಸರ್ಜರಿ ಮಾಡುವಾಗ ಚೂರೇಚೂರು ಹೆಚ್ಚು ಕಡಿಮೆಯಾದರೂ ಪೂರ್ತಿಯಾಗಿ ಮಾತು ನಿಲ್ಲುತ್ತಿತ್ತು ಅಥವಾ ಪ್ಯಾರಾಲಿಸಿಸ್​ ಉಂಟಾಗುತ್ತಿತ್ತು. ಮಿದುಳಿನ ತುಂಬ ಸೂಕ್ಷ್ಮವಾದ ಜಾಗದಲ್ಲಿ ಈ ಗಡ್ಡೆ ಇದ್ದಿದ್ದರಿಂದ ಅಪಾಯ ಜಾಸ್ತಿಯಾಗಿಯೇ ಇತ್ತು. ಆದರೂ ಆಸ್ಪತ್ರೆಯ ಡಾ.ಕೆ.ಕೆ.ಬನ್ಸಾಲ್​ ನೇತೃತ್ವದ ತಂಡ ಈ ಸಂಕೀರ್ಣ ಸರ್ಜರಿಯನ್ನು ನಡೆಸಿತ್ತು. ಸುಮಾರು ನಾಲ್ಕು ತಾಸುಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ವೇಳೆ ಪೊಲೀಸ್​ ಕಾನ್​ಸ್ಟೆಬಲ್​ ಒಂದೇ ಸಮನೆ ಗಾಯತ್ರಿ ಮಂತ್ರ ಪಠಣ ಮಾಡುತ್ತಲೇ ಇದ್ದರು.

ಈ ಗಡ್ಡೆ ತುಂಬ ಸೂಕ್ಷ್ಮ ಪ್ರದೇಶದಲ್ಲಿ ಆಗಿತ್ತು. ಅದರ ನಿಖರ ಸ್ಥಳದ ಮೇಲೆ ಗಮನ ಕೇಂದ್ರೀಕರಿಸಲು ಹೆಚ್ಚಿನ ಸಾಮರ್ಥ್ಯವಿರುವ ಮೈಕ್ರೋಸ್ಕೋಪ್​ ಬಳಸಬೇಕಾಯಿತು ಎಂದು ಆಸ್ಪತ್ರೆ ನಿರ್ದೇಶಕರಾದ ಡಾ. ಮಾಲಾ ಅರೋನ್​ ತಿಳಿಸಿದ್ದಾರೆ. ಇನ್ನು ಸರ್ಜರಿ ವೇಳೆ ರಾಮ್​ ಅವರು ಎಚ್ಚರವಾಗಿರುವಂತೆಯೇ ನೋಡಿಕೊಳ್ಳಲಾಗಿತ್ತು. ತಲೆಭಾಗಕ್ಕೆ ಅನಸ್ತೇಶಿಯಾ ಕೊಡಲಾಗಿತ್ತು. ರಾಮ್​ ತಮ್ಮ ಮನಸಿನ ಭಯ ಹೋಗಲಾಡಿಸಿಕೊಳ್ಳಲು ಗಾಯತ್ರಿ ಮಂತ್ರ ಪಠಣೆ ಮಾಡುತ್ತಿದ್ದರೂ ಎಂದೂ ಮಾಲಾ ಹೇಳಿದ್ದಾರೆ. 2018ರಲ್ಲೂ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. 30 ವರ್ಷದ ಅಕೌಂಟಂಟ್​ ಒಬ್ಬರು ತಮ್ಮ ಮಿದುಳು ಸರ್ಜರಿ ವೇಳೆ ಹನುಮಾನ್​ ಚಾಲೀಸಾ ಪಠಿಸುತ್ತಿದ್ದರು.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಗಲಭೆಯೆಬ್ಬಿಸಿದವರ ವಿರುದ್ಧ ಕ್ರಮ, ನಿಮ್ಮ ವರ್ತನೆಯಿಂದ ರಾತ್ರಿ ನಿದ್ರೆಯೇ ಮಾಡಿಲ್ಲ; ಭಾವುಕರಾದ ವೆಂಕಯ್ಯ ನಾಯ್ಡು

ಭಾರತದ ಹೊರಗೆ ಕೊವಿಡ್ ಲಸಿಕೆ ಪಡೆದವರಿಗೆ ಶೀಘ್ರದಲ್ಲೇ ಪ್ರಮಾಣಪತ್ರ ನೀಡಲಿದೆ ಕೇಂದ್ರ ಸರ್ಕಾರ

ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ