AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದನೇ ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಸೇರಿದಂತೆ 74 ಮಂದಿ ತಪ್ಪಿತಸ್ಥರು :ಸಿಬಿಐ ಕೋರ್ಟ್ ತೀರ್ಪು

ವಿಶೇಷ ನ್ಯಾಯಾಧೀಶ ಎಸ್ ಕೆ ಶಶಿ ಅವರು 1995-1996ರ ಅವಧಿಯಲ್ಲಿ ರಾಂಚಿಯ ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ.ಗಳನ್ನು ಹಿಂತೆಗೆದುಕೊಂಡ ಪ್ರಕರಣದಲ್ಲಿ 24 ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸೆಪ್ಟೆಂಬರ್ 26, 2005 ರಂದು ಆರೋಪ ಹೊರಿಸಲಾಯಿತು.

ಐದನೇ ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಸೇರಿದಂತೆ 74 ಮಂದಿ ತಪ್ಪಿತಸ್ಥರು :ಸಿಬಿಐ ಕೋರ್ಟ್ ತೀರ್ಪು
ಲಾಲೂ ಪ್ರಸಾದ್ ಯಾದವ್
TV9 Web
| Edited By: |

Updated on: Feb 15, 2022 | 4:37 PM

Share

ದೆಹಲಿ: ಡೊರಾಂಡಾ ಖಜಾನೆಯಿಂದ ಅಕ್ರಮವಾಗಿ ಹಣ ವಿತ್ ಡ್ರಾ ಮಾಡಿದ ಐದನೇ ಮೇವು ಹಗರಣದಲ್ಲಿ ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಮತ್ತು ಇತರ 74 ಆರೋಪಿಗಳನ್ನು ರಾಂಚಿಯ (Ranchi) ವಿಶೇಷ ಸಿಬಿಐ ನ್ಯಾಯಾಲಯ ಮಂಗಳವಾರ ದೋಷಿ ಎಂದು ತೀರ್ಪು ನೀಡಿದೆ. ವಿಶೇಷ ನ್ಯಾಯಾಧೀಶ ಎಸ್ ಕೆ ಶಶಿ ಅವರು 1995-1996ರ ಅವಧಿಯಲ್ಲಿ ರಾಂಚಿಯ ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ.ಗಳನ್ನು ಹಿಂತೆಗೆದುಕೊಂಡ ಪ್ರಕರಣದಲ್ಲಿ 24 ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸೆಪ್ಟೆಂಬರ್ 26, 2005 ರಂದು ಆರೋಪ ಹೊರಿಸಲಾಯಿತು. ಪ್ರಾಸಿಕ್ಯೂಷನ್ ಸಾಕ್ಷ್ಯವನ್ನು ಮೇ 16, 2019 ರಂದು ಮುಚ್ಚಲಾಯಿತು. ಆರೋಪಿಗಳ ಹೇಳಿಕೆಗಳನ್ನು ಜನವರಿ 16, 2020 ರಂದು ದಾಖಲಿಸಲಾಗಿದೆ. ಮೇವು ಹಗರಣದ ಐದನೇ ಪ್ರಕರಣ ಇದಾಗಿದೆ. ಲಾಲು ಪ್ರಸಾದ್ ಅವರು ಈಗಾಗಲೇ ಹಿಂದಿನ ನಾಲ್ಕು ಪ್ರಕರಣಗಳಲ್ಲಿ ದೋಷಿಯಾಗಿದ್ದು ಮುಖ್ಯವಾಗಿ ಅವರು ಅರ್ಧದಷ್ಟು ಶಿಕ್ಷೆಯನ್ನು ಅನುಭವಿಸಿದ್ದಾರೆ ಎಂಬ ಕಾರಣಕ್ಕಾಗಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ, ಬಂಕಾ-ಭಾಗಲ್‌ಪುರ ಖಜಾನೆಯಿಂದ ಅಕ್ರಮವಾಗಿ ಹಣ ಹಿಂತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪಾಟ್ನಾ ಮುಂದೆ ಮತ್ತೊಂದು ಪ್ರಕರಣ ಬಾಕಿ ಇದೆ. ನ್ಯಾಯಾಲಯದ ಒಳಗೆ ಹಾಜರಿದ್ದ ಇತರ 13 ಆರೋಪಿ ಸಂಜಯ್ ಕುಮಾರ್ ಪರ ವಕೀಲರು, “ಲಾಲು ಪ್ರಸಾದ್‌ಗೆ ಶಿಕ್ಷೆ ವಿಧಿಸಲಾಗಿದೆ. 99 ಆರೋಪಿಗಳ ಪೈಕಿ 24 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. 75ರಲ್ಲಿ 34 ಆರೋಪಿಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಲಾಲು ಪ್ರಸಾದ್ ಸೇರಿದಂತೆ ಉಳಿದ ಆರೋಪಿಗಳಿಗೆ ಶಿಕ್ಷೆಯನ್ನು ನಿರೀಕ್ಷಿಸಲಾಗುತ್ತಿದೆ. ಮಂಗಳವಾರ 41 ಆರೋಪಿಗಳು ಜೈಲಿಗೆ ಹೋಗಲಿದ್ದಾರೆ ಎಂದಿದ್ದಾರೆ.

ಆರ್​​ಜೆಡಿ ಮುಖ್ಯಸ್ಥರು 2013 ರಲ್ಲಿ ಮೊದಲ ಮೇವು ಹಗರಣ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದ್ದು ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಶಿಕ್ಷೆಯ ಅವಧಿ ಮುಗಿದ ನಂತರ ಆರು ವರ್ಷಗಳ ಕಾಲ ಸ್ಪರ್ಧಿಸದಂತೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸುವ ಅಪರಾಧಿಗಳನ್ನು ಅನರ್ಹಗೊಳಿಸುವ ಸುಪ್ರೀಂಕೋರ್ಟ್ ಆದೇಶಕ್ಕೆ ಅನುಗುಣವಾಗಿ ಅವರನ್ನು 11 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಶಿಕ್ಷೆ ವಿಧಿಸಿದೆ.

ನಂತರ ಈ ಪ್ರಕರಣದಲ್ಲಿ ಜಾಮೀನು ಪಡೆದಿದ್ದರು. ಡಿಸೆಂಬರ್ 23, 2017 ರಂದು ಎರಡನೇ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಲಾಲು ಅವರನ್ನು ದೋಷಿ ಎಂದು ಘೋಷಿಸಿತು ಮತ್ತು ಮೂರೂವರೆ ವರ್ಷಗಳ ಜೈಲು ಶಿಕ್ಷೆಯನ್ನು ನೀಡಿತು. ಜನವರಿ 24, 2018 ರಂದು ಚೈಬಾಸಾ ಖಜಾನೆಯಿಂದ ವಂಚನೆಯ ವಿತ್ ಡ್ರಾಗೆ ಸಂಬಂಧಿಸಿದ ಮೂರನೇ ಪ್ರಕರಣದಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಲಾಯಿತು ಮತ್ತು ಐದು ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಯಿತು.

ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮೇಕೆದಾಟು: ಪರಸ್ಪರರ ಕಾಲೆಳೆದ ಬಿಜೆಪಿ ಕಾಂಗ್ರೆಸ್ ಶಾಸಕರು