Accident: ವೇಗವಾಗಿ ಬಂದ ಕಾರು ಟ್ರೇಲರ್ ಲಾರಿಗೆ ಡಿಕ್ಕಿ, 4 ಮಂದಿ ಸಾವು
ಕಾರು ಟ್ರೇಲರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುರುವಾರ ಸಂಜೆ ರಾಜಸ್ಥಾನದ ಅಜ್ಮೀರ್‌ನಲ್ಲಿ ಈ ನಾಲ್ವರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಬಂಡನ್ವಾರ ನಗರದ ಬಳಿಯ ಭಿಲ್ವಾರ-ಅಜ್ಮೀರ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ರಾಜಸ್ಥಾನ: ಕಾರು ಟ್ರೇಲರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುರುವಾರ ಸಂಜೆ ರಾಜಸ್ಥಾನದ ಅಜ್ಮೀರ್‌ನಲ್ಲಿ ಈ ನಾಲ್ವರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಬಂಡನ್ವಾರ ನಗರದ ಬಳಿಯ ಭಿಲ್ವಾರ-ಅಜ್ಮೀರ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಮೃತರನ್ನು ಹವಾ ಸಿಂಗ್, ಸಂದೀಪ್ ಸಿಂಗ್, ಶೇರ್ ಸಿಂಗ್, ಸತ್ವೀರ್ ಎಂದು ಗುರುತಿಸಲಾಗಿದೆ. ಅವರು ಮಧ್ಯಪ್ರದೇಶದ ಉಜ್ಜಯಿನಿಯಿಂದ ಮಹಾಕಾಲ್‌ಗೆ ಭೇಟಿ ನೀಡಿದ ನಂತರ ಕೊಟ್‌ಪುಟ್ಲಿಗೆ ಹಿಂತಿರುಗುತ್ತಿದ್ದರು ಎಂದು ಹೇಳಲಾಗಿದೆ.
ಭಿಲ್ವಾರಾದಿಂದ ಜೈಪುರ ಕಡೆಗೆ ಹೋಗುತ್ತಿದ್ದಾಗ, ರಾಷ್ಟ್ರೀಯ ಹೆದ್ದಾರಿ 48ರಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ನಿಲ್ಲಿಸಿದ್ದ ಟ್ರೇಲರ್ ಲಾರಿಗೆ ಅವರ ಕಾರು ವೇಗವಾಗಿ ಡಿಕ್ಕಿ ಹೊಡೆದಿದೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಚೌಕಿ ಉಸ್ತುವಾರಿ ಗಿರಧಾರಿ ಸಿಂಗ್ ಮೇಜಪ್ತಾ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ವಾಹನದಿಂದ ಹೊರತೆಗೆದಿದ್ದಾರೆ. ಹೆದ್ದಾರಿ ಆಂಬ್ಯುಲೆನ್ಸ್ ಸಹಾಯದಿಂದ ಮೃತದೇಹಗಳನ್ನು ಭಿನಾಯ್‌ನಲ್ಲಿರುವ ಶವಾಗಾರಕ್ಕೆ ಕಳುಹಿಸಲಾಗಿದೆ.
ಇದನ್ನು ಓದಿ:Noida Bus Accident: ದಟ್ಟ ಮಂಜು: ಕಂಟೈನರ್ಗೆ ಬಸ್ ಡಿಕ್ಕಿ ಓರ್ವ ಸಾವು, 10 ಮಂದಿಗೆ ಗಂಭೀರ ಗಾಯ
ಬಹುತೇಕ ಟ್ರೇಲರ್‌ಗಳು ಎನ್‌ಎಚ್ 48ರಲ್ಲಿ ರಸ್ತೆಬದಿಯಲ್ಲಿ ನಿಂತಿರುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ಕೂಡ ಈ ರಸ್ತೆ ಮಾರ್ಗದಲ್ಲಿ ಬಸ್ ಟ್ರೇಲರ್ ಲಾರಿಗೆ ಡಿಕ್ಕಿ ಹೊಡೆದು ಹಲವು ಪ್ರಯಾಣಿಕರು ಗಾಯಗೊಂಡಿದ್ದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 am, Fri, 23 December 22