Video Viral: ಎಲಿವೇಟೆಡ್ ಮೆಟ್ರೋ ಟ್ರ್ಯಾಕ್ ಮೇಲಿನಿಂದ ಜಿಗಿಯಲು ಯತ್ನಿಸಿದ ವಿದ್ಯಾರ್ಥಿನಿ
ದೆಹಲಿ ಮೆಟ್ರೋ ಟ್ರ್ಯಾಕ್‌ನಲ್ಲಿ ಯುವತಿಯೊಬ್ಬಳು ಹುಚ್ಚಾಟ ಮಾಡಿರುವ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಎಲಿವೇಟೆಡ್ ಮೆಟ್ರೋ ಟ್ರ್ಯಾಕ್ ಬಳಿನಿಂತ ಯುವತಿ, ಕೈಯಲ್ಲಿ ಮೊಬೈಲ್ ಹಿಡಿದು ಮೇಲಿನಿಂದ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾಳೆ. ದೆಹಲಿಯ ಶಾದಿಪುರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇದನ್ನು ನೋಡುತ್ತಿದ್ದಂತೆ ಸ್ಥಳದಲ್ಲಿ ಜನ ಜಮಾಯಿಸಿದ್ದು. ಅಧಿಕಾರಿಗಳು, ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದಾರೆ. ನಂತರ ಯುವತಿಯ ಮನವೊಲಿಸಿ ಆಕೆಯನ್ನು ರಕ್ಷಿಸಲಾಗಿದೆ.
ದೆಹಲಿ, ಡಿ.12: ದೆಹಲಿ ಮೆಟ್ರೋ ಟ್ರ್ಯಾಕ್‌ನಲ್ಲಿ ಯುವತಿಯೊಬ್ಬಳು ಹುಚ್ಚಾಟ ಮಾಡಿರುವ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಎಲಿವೇಟೆಡ್ ಮೆಟ್ರೋ ಟ್ರ್ಯಾಕ್ ಬಳಿನಿಂತ ಯುವತಿ, ಕೈಯಲ್ಲಿ ಮೊಬೈಲ್ ಹಿಡಿದು ಮೇಲಿನಿಂದ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾಳೆ. ದೆಹಲಿಯ ಶಾದಿಪುರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇದನ್ನು ನೋಡುತ್ತಿದ್ದಂತೆ ಸ್ಥಳದಲ್ಲಿ ಜನ ಜಮಾಯಿಸಿದ್ದು. ಅಧಿಕಾರಿಗಳು, ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದಾರೆ. ನಂತರ ಯುವತಿಯ ಮನವೊಲಿಸಿ ಆಕೆಯನ್ನು ರಕ್ಷಿಸಲಾಗಿದೆ. ಆಕೆ ರೈಲ್ವೆ ಟ್ರ್ಯಾಕ್‌ತ್ತ ಜಿಗಿದು ಸೈಡ್‌ವಾಲ್ ಬಳಿ ಹೋಗುವ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಇದೀಗ ಆಕೆಯನ್ನು ರಕ್ಷಿಸಿ ಮನೆಯವರಿಗೆ ಒಪ್ಪಿಸಲಾಗಿದೆ. ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಯುವತಿಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು. ಆಕೆ ಮನೆಯಲ್ಲಿ ಜಗಳ ಮಾಡಿಕೊಂಡು ಬಂದಿದ್ದಾಳೆ. ಆ ಕಾರಣಕ್ಕೆ ಎಲಿವೇಟೆಡ್ ಮೆಟ್ರೋ ಟ್ರ್ಯಾಕ್ ಮೇಲಿಂದ ಜಗಿಯುವುದಾಗಿ ಬೆದರಿಕೆ ಹಾಕಿದ್ದಾಳೆ.
ವಿಡಿಯೋ ಇಲ್ಲಿದೆ ನೋಡಿ:
#Delhi– Girl was jumping from the track of metro station.. police saved her. #delhimetro #delhigirls #DelhiGovernment #Delhi #METRO4D #Metro #दिल्ली #दिल्लीमेट्रो #दिल्लीमैट्रो pic.twitter.com/4sM7nPva4t
— Arun Gangwar (@AG_Journalist) December 12, 2023
ಸುಮಾರು 5.30ರ ವೇಳೆಗೆ ಶಾದಿಪುರ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋದಿಂದ ಕೆಳಗಿಳಿದು ಟ್ರ್ಯಾಕ್ ಮೇಲೆ ನಡೆಯಲು ಪ್ರಾರಂಭಿಸಿದಳು, ಅವಳನ್ನು ನೋಡಿದ ಪ್ಲಾಟ್ಫಾರ್ಮ್ನಲ್ಲಿದ್ದ ಜನರು ಕೂಗಲು ಪ್ರಾರಂಭಿಸಿದ್ದಾರೆ. ಈ ವೇಳೆ ಯುವತಿ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಮೆಟ್ರೋ ರೈಲಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸ್ಖಲನ ಮಾಡಿದ ವ್ಯಕ್ತಿ
ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಆಕೆಯನ್ನು ವೈದ್ಯರು ಕೌನ್ಸೆಲಿಂಗ್ ಮಾಡಿ, ಪೊಲೀಸರು ವಿದ್ಯಾರ್ಥಿನಿಯನ್ನು ಮನೆಯವರಿಗೆ ಒಪ್ಪಿಸಿದ್ದಾರೆ. ಇಂತಹ ಅನೇಕ ಘಟನೆಗಳು ದೆಹಲಿ ಮೆಟ್ರೋದಲ್ಲಿ ವರದಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:28 pm, Tue, 12 December 23