ಮನಿ ಹೈಸ್ಟ್; ಒಡಿಶಾದಲ್ಲಿ ಕೋಟಿ ನಗದು ವಶಪಡಿಸಿರುವ ವಿಡಿಯೊ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಒಡಿಶಾದ ಡಿಸ್ಟಿಲರಿಗಳ ಮೇಲೆ ದಾಳಿ ಮಾಡಿದ ಆದಾಯ ತೆರಿಗೆ ಇಲಾಖೆ ಕೋಟಿಗಟ್ಟಲೆ ನಗದು ವಶಪಡಿಸಿಕೊಂಡಿದೆ.ಕಾಂಗ್ರೆಸ್ ನಾಯಕರಿಗೆ ಸೇರಿದ ಡಿಸ್ಟಿಲರಿ ಆಗಿತ್ತು ಇದು. ಕಾಂಗ್ರೆಸ್  ಪ್ರೆಸೆಂಟ್ಸ್ ಮನಿ ಹೈಸ್ಟ್ ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ಈ ವಿಡಿಯೊ ಟ್ವೀಟ್ ಮಾಡಿತ್ತು. ಈ ವಿಡಿಯೊ ರೀಟ್ವೀಟ್ ಮಾಡಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮನಿ ಹೈಸ್ಟ್; ಒಡಿಶಾದಲ್ಲಿ ಕೋಟಿ ನಗದು ವಶಪಡಿಸಿರುವ ವಿಡಿಯೊ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Dec 12, 2023 | 2:53 PM

ದೆಹಲಿ ಡಿಸೆಂಬರ್ 12: ಒಡಿಶಾದ (Odisha) ಡಿಸ್ಟಿಲರಿಗಳ ಮೇಲಿನ ಸರಣಿ ದಾಳಿಯ ವೇಳೆ ಆದಾಯ ತೆರಿಗೆ ಇಲಾಖೆಯು ಸುಮಾರು ₹350 ಕೋಟಿ ಕಪ್ಪುಹಣ ಮತ್ತು ಸುಮಾರು 3 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ, ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ಮನಿ ಹೈಸ್ಟ್ ಅನ್ನು ಉಲ್ಲೇಖಿಸಿದ್ದಾರೆ.

ಭಾರತದಲ್ಲಿ,70 ವರ್ಷಗಳ ಕಾಲ ದಂತಕಥೆಯಾಗಿರುವ ಕಾಂಗ್ರೆಸ್ ಪಕ್ಷ ಇರುವಾಗ, ‘ ಮನಿ ಹೈಸ್ಟ್ ‘ ಕಾಲ್ಪನಿಕ ಕಥೆ ಯಾರಿಗೆ ಬೇಕು! ಐಟಿ ಇಲಾಖೆಯಿಂದ ಚಲಾವಣೆಗೊಂಡ ನೋಟು ಕರೆನ್ಸಿಗಳ ರಾಶಿಯನ್ನು ಒಳಗೊಂಡಿರುವ ಬಿಜೆಪಿ ಪೋಸ್ಟ್ ಮಾಡಿದ ವಿಡಿಯೊವನ್ನು ಹಂಚಿಕೊಂಡು ಮೋದಿ ಈ ರೀತಿ ಬರೆದಿದ್ದಾರೆ.ಕಾಂಗ್ರೆಸ್  ಪ್ರೆಸೆಂಟ್ಸ್ ಮನಿ ಹೈಸ್ಟ್ ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ಈ ವಿಡಿಯೊ ಟ್ವೀಟ್ ಮಾಡಿತ್ತು.

ಒಡಿಶಾ ಮೂಲದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್‌ನಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ₹ 353 ಕೋಟಿ ವಶಪಡಿಸಿಕೊಂಡ ನಂತರ ಬಿಜೆಪಿ ವಿಡಿಯೊವನ್ನು ಬಿಡುಗಡೆ ಮಾಡಿತ್ತು. ಈ ಕಂಪನಿಯು ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೋಪಿಸಲಾಗಿದೆ.

ಇದಕ್ಕೂ ಮುನ್ನ, ಶುಕ್ರವಾರದಂದು, ಮೋದಿ ಅವರು ಸಾಹುಗೆ ಸಂಬಂಧಿಸಿರುವ ವ್ಯಾಪಾರ ಗುಂಪಿನ ವಿವಿಧ ಸ್ಥಳಗಳಿಂದ ಐಟಿ ಇಲಾಖೆಯು ನಗದು ರೂಪದಲ್ಲಿ ವಸೂಲಿ ಮಾಡಿರುವ ಸುದ್ದಿ ವರದಿಯನ್ನು ಟ್ಯಾಗ್ ಮಾಡುವ ಮೂಲಕ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು.

ದೇಶವಾಸಿಗಳು ಈ ಕರೆನ್ಸಿ ನೋಟುಗಳ ರಾಶಿಯನ್ನು ನೋಡಬೇಕು ಮತ್ತು ಅದರ (ಕಾಂಗ್ರೆಸ್) ನಾಯಕರ ಪ್ರಾಮಾಣಿಕತೆಯ ಭಾಷಣಗಳನ್ನು  ಕೇಳಬೇಕು. ಜನರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನು ಹಿಂತಿರುಗಿಸಬೇಕಾಗುತ್ತದೆ. ಇದು ಮೋದಿಯವರ ಗ್ಯಾರಂಟಿ  ಎಂದು ಮೋದಿ ಹೇಳಿದ್ದರು.

ಕಾಂಗ್ರೆಸ್ ತನ್ನ ಸಂಸದರ ಮನೆಯಲ್ಲಿ ವಶಪಡಿಸಿಕೊಂಡ ನಗದು ಹಣ ಪ್ರಕರಣದಿಂದ ಅಂತರ ಕಾಪಾಡುತ್ತಿದ್ದು, ಸಾಹು ಮಾತ್ರ ತನ್ನ ವ್ಯವಹಾರದಲ್ಲಿ ಎಷ್ಟು ದೊಡ್ಡ ಪ್ರಮಾಣದ ನಗದು ಪತ್ತೆಯಾಗಿದೆ ಎಂಬುದನ್ನು ವಿವರಿಸಬಹುದು ಎಂದು ಹೇಳಿಕೊಂಡಿದೆ.

“ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ವ್ಯವಹಾರಗಳೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ. ಅವರ ಆಸ್ತಿಗಳಿಂದ ಆದಾಯ ತೆರಿಗೆ ಅಧಿಕಾರಿಗಳು ಹೇಗೆ ಅಪಾರ ಪ್ರಮಾಣದ ಹಣವನ್ನು ಪತ್ತೆ ಮಾಡಿದ್ದಾರೆ ಎಂದು ಅವರು ವಿವರಿಸಬಹುದು ಮತ್ತು ವಿವರಿಸಬೇಕು” ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದರು.

ಡಿಸೆಂಬರ್ 6 ರಂದು ಒಡಿಶಾ ಮತ್ತು ಜಾರ್ಖಂಡ್‌ನ 25 ಆವರಣಗಳಲ್ಲಿ ಹುಡುಕಾಟವನ್ನು ಪ್ರಾರಂಭಿಸಲಾಯಿತು. 176 ಬ್ಯಾಗ್‌ಗಳ ಕರೆನ್ಸಿಯ ಎಣಿಕೆ ಪೂರ್ಣಗೊಂಡಿದ್ದು, ಐಟಿ ಇಲಾಖೆಯು ಈ ಮೊತ್ತವನ್ನು ಸರ್ಕಾರಿ ಖಜಾನೆಗೆ ಜಮಾ ಮಾಡಿದೆ.

ಒಡಿಶಾದಲ್ಲಿ ಪ್ರತಿಪಕ್ಷ ಬಿಜೆಪಿ ಸೋಮವಾರ ಆಡಳಿತಾರೂಢ ಬಿಜೆಡಿ ಮತ್ತು ಒಡಿಶಾ ಸರ್ಕಾರದ ವಿರುದ್ಧ ತನ್ನ ದಾಳಿಯನ್ನು ತೀವ್ರಗೊಳಿಸಿದೆ, ಅವರು “ರಾಜ್ಯದಲ್ಲಿ ಅಕ್ರಮ ಮದ್ಯ ವ್ಯಾಪಾರ ಮತ್ತು ಕಪ್ಪು ಹಣದ ಪ್ರಸರಣಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಕಪ್ಪುಹಣದ ವಹಿವಾಟಿನ ವಿರುದ್ಧ ಬಿಜೆಪಿ ಒಡಿಶಾದ ಎಲ್ಲಾ ಉಪವಿಭಾಗಗಳ ಮುಂದೆ ಪ್ರತಿಭಟನೆ ನಡೆಸಿತು.

ಒಡಿಶಾ ಸರ್ಕಾರದ ಅಬಕಾರಿ ನೀತಿಯೇ ರಾಜ್ಯದಲ್ಲಿ ಮದ್ಯದ ಮಾಫಿಯಾ ಬೆಳೆಯಲು ಕಾರಣವಾಗಿದೆ. ಸರ್ಕಾರವು ಮದ್ಯದ ದೊರೆಗಳಿಗೆ ಅನಗತ್ಯ ಪ್ರಯೋಜನಗಳನ್ನು ನೀಡುತ್ತಿದೆ . BJD ಆ ಕಪ್ಪುಹಣದಿಂದ ಚುನಾವಣೆಗಳನ್ನು ಎದುರಿಸುತ್ತಿದೆ ಎಂದು ಬಿಜೆಪಿ ಒಡಿಶಾ ಘಟಕದ ಅಧ್ಯಕ್ಷ ಮನಮೋಹನ್ ಸಮಾಲ್ ಎಕ್ಸ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:  Bedbug Scam: ತಿಗಣೆ ಕಾಟದಿಂದ ಮುಕ್ತಿ ನೀಡುವುದಾಗಿ ಜನರನ್ನು ನಂಬಿಸಿ ಲಕ್ಷ ಲಕ್ಷ ದುಡ್ಡು ದೋಚುತ್ತಿದ್ದ ಇಬ್ಬರ ಬಂಧನ

ಏತನ್ಮಧ್ಯೆ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಡಿ ಒಡಿಶಾ ಬಿಜೆಪಿ ನಾಯಕರ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿತು.ಪಕ್ಷದ ಕೇಂದ್ರ ನಾಯಕತ್ವವು ಕಾಂಗ್ರೆಸ್ ಅನ್ನು ಭ್ರಷ್ಟಾಚಾರದ ಉಗ್ರಾಣ ಎಂದು ಕರೆಯುವ ಮೂಲಕ ಟೀಕಿಸಿದರೆ, ಒಡಿಶಾದಲ್ಲಿ ಬಿಜೆಪಿ ನಾಯಕರು ಪ್ರಾದೇಶಿಕ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಒಡಿಶಾ ಬಿಜೆಪಿ ನಾಯಕರು ಈ ವಿಷಯದಲ್ಲಿ ಹೇಗಾದರೂ ಕಾಂಗ್ರೆಸ್ ಅನ್ನು ಉಳಿಸಲು ಪಣ ತೊಟ್ಟಿದ್ದಾರೆ” ಎಂದು ಬಿಜೆಡಿ ವಕ್ತಾರ ಲೆನಿನ್ ಮೊಹಂತಿ ಹೇಳಿದ್ದಾರೆ . ರಾಜ್ಯದಲ್ಲಿ ಬಿಜೆಪಿ  ಪಕ್ಷವು ತನ್ನ ಸ್ವಂತ ರಾಜಕೀಯ ಹಿತಾಸಕ್ತಿಗಳಿಗಾಗಿ ಇದನ್ನು ಮಾಡುತ್ತಿದೆ ಎಂದು ಹೇಳಿದರು. ಬಿಜೆಡಿ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಕಾಂಗ್ರೆಸ್ ವಕ್ತಾರ ರಜನಿ ಮೊಹಾಂತಿ ಹೇಳಿಕೆ ನೀಡಿದ್ದಾರೆ. “ಕಾಂಗ್ರೆಸ್ ವಿರುದ್ಧ ಬಿಜೆಡಿ ಮತ್ತು ಬಿಜೆಪಿ ಆರೋಪಗಳು ನಗೆಪಾಟಲಿಗೀಡಾಗಿದ್ದು, ಕಾಂಗ್ರೆಸ್ ಅನ್ನು ವಿವಾದಕ್ಕೆ ಎಳೆಯಲಾಗಿದೆ” ಎಂದು ಅವರು ಹೇಳಿದ್ದಾರೆ.

ಮನಿ ಹೈಸ್ಟ್ ಬಗ್ಗೆ

“ಮನಿ ಹೈಸ್ಟ್” ಎಂಬುದು ನೆಟ್‌ಫ್ಲಿಕ್ಸ್ ಸರಣಿಯಾಗಿದ್ದು, ಐದು ಭಾಗಗಳನ್ನು ಹೊಂದಿದೆ. ದರೋಡೆಯ ಕಥಾ ಹಂದರ ಹೊಂದಿರುವ ಆ ಸರಣಿಯುದ್ದಕ್ಕೂ ಪ್ರತಿರೋಧ, ಶೌರ್ಯ, ಒಡನಾಟ ಮತ್ತು ನಿಷ್ಠೆಯ ಅರ್ಥವನ್ನು ಚಿತ್ರಿಸುತ್ತದೆ. ಮೊದಲ ಭಾಗದಲ್ಲಿ 8 ಕಳ್ಳರು ಸ್ಪೇನ್‌ನ ರಾಯಲ್ ಮಿಂಟ್‌ನಲ್ಲಿ ತಮ್ಮನ್ನು ಅಪಹರಿಸಿ ಲಾಕ್ ಮಾಡುತ್ತಾರೆ. ಅಲ್ಲಿ ಅವರು ಚಿನ್ನ ಮತ್ತು ಹಣವನ್ನು ಕದಿಯಲು ಮತ್ತು ಜೀವಂತವಾಗಿ ತಪ್ಪಿಸಿಕೊಳ್ಳುವ ಗುರಿಯನ್ನು ಹೊಂದಿದ್ದಾರೆ. ಸ್ಪೇನ್‌ನ ರಾಯಲ್ ಮಿಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಅವರು ಹಲವಾರು ಸಮಸ್ಯೆಗಳನ್ನು ಮತ್ತು ಕಷ್ಟಗಳನ್ನು ಎದುರಿಸುತ್ತಾರೆ. ಹಣದ ಜೊತೆಗೆ ಸುರಕ್ಷಿತವಾಗಿ ಹೊರಬರುವುದು ಹೇಗೆ? ಈ ಕೃತ್ಯದ ಮಾಸ್ಟರ್ ಮೈಂಡ್ ಪ್ರೊಫೆಸರ್‌ ಏನು ಮಾಡುತ್ತಾನೆ ಎಂಬುದನ್ನು ತೋರಿಸುವ ಕಥೆ ಇದಾಗಿದೆ.

ಸರಣಿಯ ಪ್ರತೀ ಭಾಗ ಅಥವಾ ಸೀಸನ್ ನಲ್ಲಿಇದು ವೀಕ್ಷಕರನ್ನು ಕುತೂಹಲದಲ್ಲಿ ನಿಲ್ಲಿಸುತ್ತದೆ. ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಈ ಸರಣಿಯು ಭಾವನೆಗಳು ಮತ್ತು ತಿಳಿವಳಿಕೆ ವಿವರಗಳನ್ನು ಅದ್ಭುತವಾಗಿ ಸಂಯೋಜಿಸುತ್ತದೆ. “ಮನಿ ಹೈಸ್ಟ್” ನೈಜ-ಪ್ರಪಂಚದ ಸಮಸ್ಯೆಗಳನ್ನೂ ತೋರಿಸುತ್ತದೆ “ಮನಿ ಹೈಸ್ಟ್” ಮೊದಲ ಬಾರಿಗೆ 2017 ರಲ್ಲಿ ಸ್ಪ್ಯಾನಿಷ್ ದೂರದರ್ಶನದಲ್ಲಿ ಪ್ರಸಾರವಾಯಿತು. ನೆಟ್‌ಫ್ಲಿಕ್ಸ್‌ನಲ್ಲಿ ಹೆಚ್ಚು ವೀಕ್ಷಿಸಿದ ಇಂಗ್ಲಿಷ್ ಅಲ್ಲದ ಐದು ಸೀಸನ್ ಗಳ ಡ್ರಾಮಾ ಮತ್ತು ಥ್ರಿಲ್ಲರ್ ಸರಣಿಯಾಗಿದೆ ಇದು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Tue, 12 December 23