ಆರೋಪ-ಪ್ರತ್ಯಾರೋಪಗಳೊಂದಿಗೆ ಹಳೇ ಕತೆಗಳನ್ನು ಕೆದಕಿ ಕೇರಳದ ಕಾಂಗ್ರೆಸ್ ಅಧ್ಯಕ್ಷ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್ ನಡುವೆ ವಾಕ್ಸಮರ

Pinarayi Vijayan: 1967 ರಲ್ಲಿ ಕಣ್ಣೂರು ಜಿಲ್ಲೆಯ ತಲಶ್ಶೇರಿ  ಸರ್ಕಾರಿ ಬ್ರೆನ್ನೆನ್ ಕಾಲೇಜಿನಲ್ಲಿ ವಿಜಯನ್ ವಿದ್ಯಾರ್ಥಿಯಾಗಿದ್ದಾಗ ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದ ನಾನು ವಿಜಯನ್ ಅವರನ್ನು ಹೊಡೆದು ಬೀಳಿಸಿದ್ದೆ ಎಂದು ಸುಧಾಕರನ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ ವಿಜಯನ್ ಮಕ್ಕಳ ಅಪಹರಣ ಸಂಚು ಆರೋಪ ಮಾಡಿದ್ದಾರೆ.

ಆರೋಪ-ಪ್ರತ್ಯಾರೋಪಗಳೊಂದಿಗೆ ಹಳೇ ಕತೆಗಳನ್ನು ಕೆದಕಿ ಕೇರಳದ ಕಾಂಗ್ರೆಸ್ ಅಧ್ಯಕ್ಷ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್ ನಡುವೆ ವಾಕ್ಸಮರ
ಕೆ.ಸುಧಾಕರನ್- ಪಿಣರಾಯಿ ವಿಜಯನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 20, 2021 | 12:33 PM

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ರಾಜ್ಯ ಘಟಕದ ನೂತನ ಅಧ್ಯಕ್ಷ ಕೆ ಸುಧಾಕರನ್ ನಡುವೆ ವಾಕ್ಸಮರ ಶುರು ಆಗಿದೆ.  ಪಿಣರಾಯಿ ವಿಜಯನ್ ಮತ್ತು ಕೆ. ಸುಧಾಕರನ್ ಇಬ್ಬರೂ ಕಣ್ಣೂರು  ಜಿಲ್ಲೆಯವರಾಗಿದ್ದು, ಯುವಕರಾಗಿದ್ದಾಗ  ರಾಜಕೀಯ ಹೋರಾಟದಲ್ಲಿನ ಜಟಾಪಟಿ  ಹೇಗೆ ನಡೆದಿತ್ತು ಎಂಬುದನ್ನು ಹೇಳಿಕೊಂಡು  ಈ ನಾಯಕರಿಬ್ಬರು  ಹಳೇ ನೆನಪುಗಳನ್ನು ಕೆದಕಿ ಆರೋಪ- ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. 

ತನ್ನ ಮಕ್ಕಳನ್ನು ಅಪಹರಿಸಲು ಸುಧಾಕರನ್ ಸಂಚು ರೂಪಿಸಿದ್ದರು ಎಂದು  ವಿಜಯನ್ ಹೇಳಿದ ಒಂದು ದಿನದ ನಂತರ, ಸುಧಾಕರನ್ ಶನಿವಾರ ಪ್ರತಿಕ್ರಿಯಿಸಿದ್ದು ಮುಖ್ಯಮಂತ್ರಿಯವರೇ, ತಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಿ  ಎಂದು ಹೇಳಿದ್ದಾರೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸುಧಾಕರನ್  ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. “ನಾನು ಅವರ ಮಕ್ಕಳನ್ನು ಅಪಹರಿಸಲು ಸಂಚು ರೂಪಿಸಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ. ಹಾಗಾದರೆ  ವಿಜಯನ್ ಪೊಲೀಸರಿಗೆ ಏಕೆ ತಿಳಿಸಲಿಲ್ಲ? ಯೋಜನೆಯ ಬಗ್ಗೆ ಹೇಳಿದ್ದ ನನ್ನ ಸ್ನೇಹಿತನ ಹೆಸರನ್ನು ವಿಜಯನ್ ಏಕೆ ಬಹಿರಂಗಪಡಿಸಲು ಸಾಧ್ಯವಿಲ್ಲ? ಮಕ್ಕಳು ಬೆದರಿಕೆಯನ್ನು ಎದುರಿಸುತ್ತಿದ್ದರೆ, ವಿಜಯನ್ ತನ್ನ ಹೆಂಡತಿಯೊಂದಿಗೆ ಆ ಮಾಹಿತಿಯನ್ನು ಏಕೆ ಹಂಚಿಕೊಳ್ಳಲಿಲ್ಲ? ಇಂತಹ ಆರೋಪವನ್ನು ಹೊರಿಸುವುದು ಮುಖ್ಯಮಂತ್ರಿಯಾಗಿರುವವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.

ಶುಕ್ರವಾರ ಮಾಧ್ಯಮಗಳ ಮುಂದೆ ಮಾತನಾಡಿದ ವಿಜಯನ್  ‘ಸುಧಾಕರನ್ ತನ್ನ ಇಬ್ಬರು ಮಕ್ಕಳನ್ನು ಶಾಲೆಯಲ್ಲಿದ್ದಾಗ ಅಪಹರಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು. ಒಂದು ದಿನ, ಸುಧಾಕರನ್ ಅವರ ಸ್ನೇಹಿತ ನನ್ನ ಬಳಿಗೆ ಬಂದು, ಅವನು (ಸುಧಾಕರನ್) ನನ್ನ ಮಕ್ಕಳನ್ನು ಅಪಹರಿಸುವ ಯೋಜನೆಯನ್ನು ಹೊಂದಿದ್ದಾನೆಂದು ಹೇಳಿದನು, ಆಗ ಅವರು ಶಾಲೆಗೆ ಹೋಗುತ್ತಿದ್ದರು. ಕಾದು ನೋಡುವಾ  ಎಂದು ನಾನು ಅವನಿಗೆ ಹೇಳಿದೆ. ನನ್ನ ಹೆಂಡತಿ (ಆಗ ಶಾಲಾ ಶಿಕ್ಷಕಿ) ಸೇರಿದಂತೆ ನಾನು ಯಾರಿಗೂ ಹೇಳಲಿಲ್ಲ, ’’ ಎಂದು ವಿಜಯನ್ ಹೇಳಿದ್ದರು.

1967 ರಲ್ಲಿ ಕಣ್ಣೂರು ಜಿಲ್ಲೆಯ ತಲಶ್ಶೇರಿ  ಸರ್ಕಾರಿ ಬ್ರೆನ್ನೆನ್ ಕಾಲೇಜಿನಲ್ಲಿ ವಿಜಯನ್ ವಿದ್ಯಾರ್ಥಿಯಾಗಿದ್ದಾಗ ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದ ನಾನು ವಿಜಯನ್ ಅವರನ್ನು ಹೊಡೆದು ಬೀಳಿಸಿದ್ದೆ ಎಂದು ಸುಧಾಕರನ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ ವಿಜಯನ್ ಮಕ್ಕಳ ಅಪಹರಣ ಸಂಚು ಆರೋಪ ಮಾಡಿದ್ದಾರೆ. ‘ಮಲಯಾಳ ಮನೋರಮಾ’ ವಾರಪತ್ರಿಕೆಯ ಇತ್ತೀಚಿನ ಸಂಚಿಕೆಗೆ ನೀಡಿದ ಸಂದರ್ಶನದಲ್ಲಿ ಸುಧಾಕರನ್ ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದ್ದಾರೆ. ಆಗ ವಿದ್ಯಾರ್ಥಿ ಮುಖಂಡನಾಗಿದ್ದ ನನ್ನ ತಂಡವು  ವಿಜಯನ್ ಅವರಿಗೆ ಥಳಿಸಿತ್ತು, ಪೊಲೀಸರು ಬಂದು ವಿಜಯನ್ ಅವರನ್ನು  ರಕ್ಷಿಸಿದ್ದರು ಎಂದು ಹೇಳಿದ್ದರು.

ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ವಿಜಯನ್, “ಅವನು ನನಗೆ ಹೊಡೆದು ಬೀಳಿಸಿದ ಘಟನೆ ಅವನ ಕನಸಿನಲ್ಲಿ ಸಂಭವಿಸಿರಬಹುದು. ಈ ರೀತಿ ಕೊಚ್ಚಿಕೊಳ್ಳುತ್ತಿರುವುದು ಯಾಕಾಗಿ?  ವಿಜಯನ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸುಧಾಕರನ್ ಅವರಿಗೆ ತಿಳಿದಿದೆ ಎಂದಿದ್ದಾರೆ.

ಹಣ ಸಂಪಾದಿಸುವ ಉದ್ದೇಶದಿಂದ ಸುಧಾಕರನ್ ರಾಜಕೀಯಕ್ಕೆ ಸೇರಿದ್ದಾರೆ ಎಂದು ದಿವಂಗತ ಕಾಂಗ್ರೆಸ್ ಮುಖಂಡ ಪಿ.ರಾಮಕೃಷ್ಣನ್ ಅವರು ಹೇಳಿದ್ದರು ಎಂದಿದ್ದಾರೆ ಪಿಣರಾಯಿ ವಿಜಯನ್. ಸುಧಾಕರನ್ ವಿದೇಶಿ ಕರೆನ್ಸಿ ವ್ಯವಹಾರದಲ್ಲಿದ್ದಾರೆ ಮತ್ತು ಮರಳು ಮಾಫಿಯಾದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪಿಣರಾಯಿ ಆರೋಪಿಸಿದ್ದಾರೆ. ನಾಯಕರು ಅವನಿಗೆ ಹೆದರುತ್ತಾರೆ. ತನ್ನನ್ನು ಸರ್ವನಾಶ ಮಾಡಲು ಪ್ರಯತ್ನಿಸಿದ್ದಾರೆಂದು ಕೆಪಿಸಿಸಿ ಸದಸ್ಯ ಮಾಂಬರಂ ದಿವಾಕರನ್ ಅವರೇ ಸುಧಾಕರನ್ ಬಗ್ಗೆ ಹೇಳಿದ್ದರು ಎಂದಿದ್ದಾರೆ ವಿಜಯನ್.

ವಿದೇಶಿ ಕರೆನ್ಸಿಯಲ್ಲಿ ವ್ಯವಹಾರ ನಡೆಸುತ್ತಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರನ್ “ವಿಜಯನ್ ಅವರ ಕಚೇರಿ ಚಿನ್ನದ ಕಳ್ಳಸಾಗಣೆಯಲ್ಲಿ ತೊಡಗಿದೆ. ಸ್ವಪ್ನಾ ಸುರೇಶ್ (ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ) ವಿಜಯನ್ ಅವರ ಮೊದಲ ಆಡಳಿತದ ನಾಲ್ಕು ವರ್ಷಗಳಲ್ಲಿ ವಿದೇಶ ಪ್ರವಾಸದಲ್ಲಿದ್ದರು. ವಿಜಯನ್​ಗೆ ಆಕೆ ಪರಿಚಿತಳಿದ್ದರೂ ನಿರಾಕರಿಸುತ್ತಿದ್ದರು ಎಂದಿದ್ದಾರೆ.

ಶುಕ್ರವಾರ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ, ವಿಜಯನ್ ಅವರು ಸಾರ್ವಜನಿಕ ಸಂಪರ್ಕ ಸಂಸ್ಥೆಯ ಪ್ರಚಾರದಿಂದ ಮೇಲೇರಿದ್ದಾರೆ. ಅವರ ಭಾಷೆ ಮತ್ತು ಶೈಲಿ ರಾಜಕೀಯ ಅಪರಾಧಿಗಳದ್ದಾಗಿತ್ತು. ನನ್ನ ಮೇಲಿನ ಆರೋಪಗಳನ್ನು ತನಿಖೆ ಮಾಡಬೇಕು. ವಿಜಯನ್ ತನ್ನ ಚೀಲದಲ್ಲಿ ಗುಂಡುಗಳನ್ನು ಹೊತ್ತುಕೊಂಡು ಹೋಗುತ್ತಿದ್ದರು. ಆದರೆ ನಾನು ಹಾಗಲ್ಲ ಎಂದಿದ್ದಾರೆ.

1969 ರಲ್ಲಿ ತಲಶ್ಶೇರಿಯಲ್ಲಿ ಹತ್ಯೆಗೀಡಾದ ಆರ್‌ಎಸ್‌ಎಸ್ ಕಾರ್ಯಕರ್ತ ವಾಡಿಕ್ಕಲ್ ರಾಮಕೃಷ್ಣನ್ ಅವರ ಹತ್ಯೆಯಲ್ಲಿ ವಿಜಯನ್ ಆರೋಪಿ ಎಂದು ಸುಧಾಕರನ್ ಆರೋಪಿಸಿದ್ದಾರೆ.

ಕಾಂಗ್ರೆಸ್ಸಿನ ಪ್ರತಿಪಕ್ಷದ ನಾಯಕ ವಿ.ಡಿ ಸತೀಶನ್ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರು, ಸರ್ಕಾರ ನಿಯೋಜಿತ ಭೂಮಿಯಿಂದ ಹೆಚ್ಚಿನ ಸಂಖ್ಯೆಯ ಸಂರಕ್ಷಿತ ಮರಗಳನ್ನು ವಿವಾದಾತ್ಮಕವಾಗಿ ಕಡಿದು ಹಾಕಿದ ಪ್ರಕರಣದ ಬಗ್ಗೆ  ಗಮನವನ್ನು ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಈ ವಿಷಯವನ್ನು ಎತ್ತಿದ್ದಾರೆ ಎಂದಿದ್ದಾರೆ.

1977 ರಲ್ಲಿ ಸಿಪಿಐ (ನಿಯಂತ್ರಿತ) ಕೇರಳ ದಿನೇಶ್ ಬೀಡಿಯಿಂದ ಬೀಡಿ ಕಾರ್ಮಿಕರನ್ನು ವಜಾಗೊಳಿಸುವುದರ ವಿರುದ್ಧ ಪ್ರತಿಭಟನೆ ನಡೆಸಿದಾಗ ವಿಜಯನ್ ಚಾಕೂನಿಂದ ಇರಿದಿದ್ದಾರೆ ಎಂದು ಹೇಳಿದ ಸುಧಾಕರನ್ ಅಂದು ಇರಿತಕ್ಕೊಳಗಾಗಿದ್ದ ಕಾಂಗ್ರೆಸ್ ಕಣ್ಣೂರು ಜಿಲ್ಲಾ ಸಮಿತಿ ಕಾರ್ಯದರ್ಶಿ ಕಂಡೋತ್ ಗೋಪಿ ಅವರನ್ನು ಮಾಧ್ಯಮದವರ ಮುಂದೆ ತಂದಿದ್ದಾರೆ.  ತನ್ನ ಕೈಯಲ್ಲಿ ಗಾಯವನ್ನು ತೋರಿಸುತ್ತಾ  ಆರೋಪ  ಮಾಡಿದ ಗೋಪಿ ವಿಜಯನ್  ಚಾಕೂ ನನ್ನ ಕುತ್ತಿಗೆ ಮೇಲಿಟ್ಟಾಗ ಸ್ವಯಂ ರಕ್ಷಣೆಗಾಗಿ ನಾನು ದೂಡಿದೆ. ಆಗ ನನ್ನ ಕೈಗೆ ಗಾಯವಾಯಿತು ಎಂದಿದ್ದಾರೆ.

ಇದನ್ನೂ ಓದಿ: ಲಂಚ ಆರೋಪ: ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚನೆ

(A war of words between Congress’s state unit president K Sudhakaran and Kerala CM Pinarayi Vijayan duo go down the memory lane)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್