ಫಂಕಿ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿ ಮುಂದೆ ನಗ್ನವಾದ ಮಹಿಳೆ, ಗಂಡನಿಗೆ ಫೋಟೋ ಕಳುಹಿಸಿ ಬೆದರಿಕೆ
ರಾಜಸ್ಥಾನದ ವ್ಯಕ್ತಿಯನ್ನು ಫಂಕಿ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡು ತನ್ನ ಖಾಸಗಿ ಫೋಟೋಗಳನ್ನು ಹಂಚಿಕೊಂಡಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿದ್ದಾರೆ. ಇದೀಗ ಈ ದೂರಿ ಆಧಾರದ ಮೇಲೆ ಆತನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚಿಗಿನ ದಿನಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದೆ. ಪ್ರಕರಣಗಳ ಬಗ್ಗೆ ಪೊಲೀಸರು ಸರಿಯಾದ ಕ್ರಮದ ತೆಗೆದುಕೊಳ್ಳದ ಕಾರಣ ಇಂತಹ ಕೃತ್ಯಗಳು ನಡೆಯುತ್ತಿದೆ. ಇದೀಗ ಇಂತಹದೇ ಒಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಈ ಕೃತ್ಯ ಆಗಿರುವುದು ಒಂದು ಆ್ಯಪ್ನ ಎಡವಟ್ಟಿನಿಂದ, ಅದಕ್ಕೆ ಹೇಳುವುದು ಇಂತಹ ಆ್ಯಪ್ಗಳ ಮೂಲಕ ಅಪರಿಚಿತರನ್ನು ಪರಿಚಯ ಮಾಡಿಕೊಂಡು, ನಮ್ಮ ದೇಹವನ್ನು ತೋರಿಸುವ ಮುನ್ನ ಎಚ್ಚರ ವಹಿಸಬೇಕು ಎನ್ನುವುದು. ಇಲ್ಲೊಬ್ಬ ಮಹಿಳೆಗೆ ಫಂಕಿ ಆ್ಯಪ್ ಮೂಲಕ ಪರಿಚಯವಾಗಿ ಲೈಂಗಿಕ ಕಿರುಕುಳ ನೀಡಿರುವ ರಾಜಸ್ಥಾನ (Rajasthan) ಮೂಲದ 33 ವರ್ಷದ ಫಾರೂಕ್ ಆಲಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇದೀಗ ಆತನನ್ನು ಚೆನ್ನೈನ ಸೇಂಟ್ ಥಾಮಸ್ ಮೌಂಟ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಿಳೆಯ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ. 10 ಲಕ್ಷ ರೂ. ನೀಡುವಂತೆ ಒತ್ತಾಯಿಸುತ್ತಿದ್ದ ಎಂದು ದೂರಿನಲ್ಲಿ ಹೇಳಿದ್ದಾರೆ. ಆಕೆಯ ನಗ್ನ ಫೋಟೋಗಳನ್ನು ವಿದೇಶದಲ್ಲಿರುವ ಮಹಿಳೆಯ ಪತಿಗೂ ಕೂಡ ಕಳುಹಿಸಿದ್ದಾನೆ. ಇನ್ನು ಈ ಬಗ್ಗೆ ಆಕೆ ಸೈಬರ್ ಕ್ರೈಮ್ ವಿಭಾಗಕ್ಕೆ ದೂರ ನೀಡಿದ್ದು, ಫಾರೂಕ್ನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಮಹಿಳೆ ಚೆನ್ನೈನ ವೆಸ್ಟ್ ಮಾಂಬಲಂನಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದಾರೆ. ಆಕೆಯ ಗಂಡ ವಿದೇಶದಲ್ಲಿದ್ದಾರೆ. ಈ ಸಮಯದಲ್ಲಿ ರಾಜಸ್ಥಾನದ ಫಾರೂಕ್ ಆಲಿ ಎಂಬ ವ್ಯಕ್ತಿ, ಫಂಕಿ ಆ್ಯಪ್ ಮೂಲಕ ಪರಿಚಯವಾಗಿ, ಸ್ನೇಹ ಬೆಳಸಿಕೊಂಡಿದ್ದಾನೆ. ಆಗ್ಗಾಗ ಇಬ್ಬರು ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಇಬ್ಬರು ಕೂಡ ನಗ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ನಂತರ ಫಾರೂಕ್ ನಿನ್ನ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು, 10 ಲಕ್ಷ ರೂ, ನೀಡುವಂತೆ ಹೇಳಿದ್ದಾನೆ.
ಇದನ್ನೂ ಓದಿ: ಆರೋಗ್ಯ ಕೈಕೊಟ್ಟ ಸಂದರ್ಭದಲ್ಲಿ ಮೋದಿ ತೋರಿದ ಕಾಳಜಿಯ ನೆನೆದು ಭಾವುಕರಾದ ಭರ್ತೃಹರಿ ಮಹತಾಬ್
ಇದೀಗ ಮಹಿಳೆ ದೂರಿನ ಆಧಾರದ ಮೇಲೆ ದಕ್ಷಿಣ ವಲಯದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಫಾರೂಕ್ ಎಂಬಾಂತನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ