ಆರೋಗ್ಯ ಕೈಕೊಟ್ಟ ಸಂದರ್ಭದಲ್ಲಿ ಮೋದಿ ತೋರಿದ ಕಾಳಜಿಯ ನೆನೆದು ಭಾವುಕರಾದ ಭರ್ತೃಹರಿ ಮಹತಾಬ್
ಆರೋಗ್ಯ ಕೈಕೊಟ್ಟಾಗ ಪ್ರಧಾನಿ ಮೋದಿ ಮನೆಯ ಹಿರಿಯ ಸದಸ್ಯನಂತೆ ನನಗೆ ಸಹಾಯ ಮಾಡಿದ್ದರು ಎಂದು ಬಿಜು ಜನತಾ ದಳದ ಮಾಜಿ ನಾಯಕ ಭರ್ತೃಹರಿ ಮಹತಾಬ್ ಹೇಳಿದ್ದಾರೆ. ವಿಡಿಯೋವೊಂದನ್ನು ಹಂಚಿಕೊಂಡಿದ್ದ ಅವರು, ಹೃದಯಾಘಾತವಾದಾಗ ಮೋದಿ ತೆಗೆದುಕೊಂಡ ಕಾಳಜಿ ಆಶ್ಚರ್ಯವೆನಿಸಿತ್ತು ಎಂದು ಭಾವನಾತ್ಮಕವಾಗಿ ಹೇಳಿದ್ದರು.
ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ತೋರಿದ ಕಾಳಜಿಯ ಬಗ್ಗೆ ಬಿಜು ಜನತಾ ದಳದ ಮಾಜಿ ನಾಯಕ ಭರ್ತ್ರಿಹರಿ ಮಹತಾಬ್(Bhartruhari Mahtab) ಭಾವನಾತ್ಮಕ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ನನಗೆ ಹೃದಯಾಘಾತವಾಗಿತ್ತು, ಮೂರು ದಿನಗಳ ಹಿಂದಿನಿಂದಲೇ ಲಕ್ಷಣಗಳಿತ್ತು ಅದಕ್ಕೆ ಔಷಧವನ್ನೂ ತೆಗೆದುಕೊಂಡಿದ್ದೆ ಆದರೆ ಒಂದು ದಿನ ಯಾಕೋ ಆರೋಗ್ಯ ತೀರಾ ಹದಗೆಟ್ಟಿದೆ ಎಂದೆನೆಸಿ ಆಸ್ಪತ್ರೆಗೆ ಹೋದೆ ಆಗ ತಕ್ಷಣವೇ ವೈದ್ಯರು ಹೃದಯದ ಶಸ್ತ್ರ ಚಿಕಿತ್ಸೆ ಮಾಡಿ ಸ್ಟಂಟ್ ಅಳವಡಿಸಿದ್ದರು.
ಈ ವಿಚಾರ ಪ್ರಧಾನಿ ಮೋದಿಯವರಿಗೆ ತಿಳಿಯಿತು, ತಕ್ಷಣ ನನ್ನ ಮಗನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ಅಷ್ಟೇ ಅಲ್ಲದೆ ಮೂರು ದಿನಗಳಿಂದ ಇಂತಹ ಲಕ್ಷಣಗಳಿದ್ದರೂ ಯಾಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರಲಿಲ್ಲ ಎಂದು ಮಗನಿಗೆ ಬೈದಿದ್ದರು.
ಮೋದಿ ಕುಟುಂಬದ ಹಿರಿಯನಂತೆ ಇದ್ದು ನಮಗೆ ಕಾಳಜಿ ಮಾಡಿದ್ದಾರೆ, ಅವರ ಅಂತಹ ನಡವಳಿಕೆಯೇ ವಿರೋಧ ಪಕ್ಷದವರೂ ಮೋದಿಯನ್ನು ಗೌರವಿಸುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಗೆ ಭರದಿಂದ ಸಾಗುತ್ತಿರುವ ಸಿದ್ಧತೆಗಳ ನಡುವೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ (ಬಿಜೆಡಿ) ಭಾರಿ ಹಿನ್ನಡೆ ಅನುಭವಿಸಿತ್ತು.
ಸಂಸದ ಹಾಗೂ ಬಿಜೆಡಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಭರ್ತ್ರಿಹರಿ ಮಹತಾಬ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಕಟಕ್ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿರುವ ಮಹತಾಬ್, ನಾನು ಇಂದು ನನ್ನ ರಾಜೀನಾಮೆಯನ್ನು ಬಿಜೆಡಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಕಳುಹಿಸಿದ್ದೇನೆ ಎಂದು ಹೇಳಿದ್ದರು. ಬಳಿಕ ಮಾರ್ಚ್ 28ರಂದು ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜೈ ಪಾಂಡಾ ಮತ್ತು ರಾಜ್ಯಾಧ್ಯಕ್ಷ ಮನಮೋಹನ್ ಸಮಾಲ್ ಅವರ ಸಮ್ಮುಖದಲ್ಲಿ ಮಹತಾಬ್ ಬಿಜೆಪಿ ಸದಸ್ಯತ್ವ ಪಡೆದರು.
ಮತ್ತಷ್ಟು ಓದಿ: PM Modi Interview: ರಾತ್ರೋರಾತ್ರಿ ಪತ್ವಾ ಹೊರಡಿಸಿ ಮುಸ್ಲಿಮರನ್ನ ಒಬಿಸಿ ಮಾಡಿದ್ದಾರೆ: ಮೋದಿ ಕಿಡಿ
ಕಟಕ್ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿದ್ದ ಮಹತಾಬ್ ಅವರು ಮಾರ್ಚ್ 22ರಂದು ಬಿಜೆಡಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಡಿಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಸೂಕ್ತ ಅವಕಾಶ ಸಿಕ್ಕಿಲ್ಲ ಎಂದು ಆರೋಪಿಸಿದ್ದರು. ಅಂದಿನಿಂದ ಅವರು ಬಿಜೆಪಿ ಸೇರುವ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ, ಬಿಜೆಡಿ ಲೋಕಸಭೆ ಚುನಾವಣೆಗೆ ಮಹತಾಬ್ ಅವರ ಟಿಕೆಟ್ ಅನ್ನು ರದ್ದುಗೊಳಿಸಿತ್ತು. ಕಟಕ್‌ನಲ್ಲಿ, ಬಿಜೆಡಿ ಮಹತಾಬ್ ಬದಲಿಗೆ ಸಂರತ್ ಮಿಶ್ರಾ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.
ಇದಕ್ಕೂ ಮುನ್ನ ಮಾರ್ಚ್ 2ರಂದು ಐದು ಬಾರಿ ಬಿಜು ಜನತಾ ದಳದ ಶಾಸಕ ಅರಬಿಂದ್ ಧಾಲಿ ಅವರು ಆಡಳಿತಾರೂಢ ಬಿಜು ಜನತಾ ದಳಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ ಬಿಜೆಪಿಗೆ ಸೇರುವುದಾಗಿ ಹೇಳಿದ್ದರು. ಒಡಿಶಾದ ಖೋರ್ಧಾ ಜಿಲ್ಲೆಯ ಜೈದೇವ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಅವರು ತಮ್ಮ ರಾಜೀನಾಮೆಯನ್ನು ಬಿಜೆಡಿ ಅಧ್ಯಕ್ಷ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಕಳುಹಿಸಿದ್ದರು. 1992ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದು ಮೊದಲ ಬಾರಿಗೆ ಧಾಳಿ ವಿಧಾನಸಭೆಗೆ ಬಂದಿದ್ದರು. ಇದಾದ ನಂತರ ಅವರು ಬಿಜು ಜನತಾ ದಳಕ್ಕೆ ಸೇರಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:15 pm, Fri, 3 May 24