ಆಧಾರ್ ಯೋಜನೆಯಿಂದ ಸರ್ಕಾರಕ್ಕೆ 2.25 ಲಕ್ಷ ಕೋಟಿ ರೂ ಉಳಿತಾಯ: UIDAI ಸಿಇಒ ಮಾಹಿತಿ

ಆಧಾರ್​ನಿಂದ ಸರ್ಕಾರದ ಬೊಕ್ಕಸಕ್ಕೆ 2.25ಲಕ್ಷ ಕೋಟಿ ರೂ ಲಾಭವಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸಿಇಒ ಸೌರಭ್​ ಗಾರ್ಗ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ 300ಯೋಜನೆಗಳು ಮತ್ತು ರಾಜ್ಯ ಸರ್ಕಾರದ 400 ಯೋಜನೆಗಳನ್ನು ಆಧಾರ್​ನೊಂದಿಗೆ ಲಿಂಕ್​ ಮಾಡಲಾಗಿದೆ.

ಆಧಾರ್ ಯೋಜನೆಯಿಂದ ಸರ್ಕಾರಕ್ಕೆ 2.25 ಲಕ್ಷ ಕೋಟಿ ರೂ ಉಳಿತಾಯ: UIDAI ಸಿಇಒ ಮಾಹಿತಿ
ಆಧಾರ್ ಕಾರ್ಡ್ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Pavitra Bhat Jigalemane

Updated on: Dec 16, 2021 | 6:29 PM

ನವದೆಹಲಿ: ಆಧಾರ್​ನಿಂದ ಸರ್ಕಾರದ ಬೊಕ್ಕಸಕ್ಕೆ 2.25ಲಕ್ಷ ಕೋಟಿ ರೂ ಲಾಭವಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸಿಇಒ ಸೌರಭ್​ ಗಾರ್ಗ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ 300ಯೋಜನೆಗಳು ಮತ್ತು ರಾಜ್ಯ ಸರ್ಕಾರದ 400 ಯೋಜನೆಗಳನ್ನು ಆಧಾರ್​ನೊಂದಿಗೆ ಲಿಂಕ್​ ಮಾಡಲಾಗಿದೆ. ಇದರಿಂದ ಸರ್ಕಾರವು ಫಲಾನುವಿಗಳಿಗೆ ನೇರ ಹಣ ವರ್ಗಾವಣೆ ಮೂಲಕ 2.25ಲಕ್ಷ ಕೋಟಿ ರೂಗಳನ್ನು ಉಳಿತಾಯ ಮಾಡಿದೆ. ರಾಜ್ಯ ಸರ್ಕಾರಗಳ ಉಳಿತಾಯವನ್ನು ಸೇರಿಸಿದರೆ ಇನ್ನೂ ಹೆಚ್ಚಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಮುಂದುವರೆದು ಮಾತನಾಡಿ, ಆಧಾರ್ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದನ್ನು ಸುಲಭಗೊಳಿಸಿದೆ. ಕೊರೋನಾ ಸಮಯದಲ್ಲಿ ಫಲಾನುವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಯಿತು. ಇದರಿಂದ ಜನ ಹಣಕ್ಕಾಗಿ ಕಷ್ಟಪಡಬೇಕಾದ ಸಂದರ್ಭ ಎದುರಾಗಲಿಲ್ಲ. ಹತ್ತಿರದ ಎಟಿಎಂಗಳಿಗೆ ತೆರಳಿ ಖಾತೆಯಲ್ಲಿರುವ ಹಣವನ್ನು ತೆಗೆದುಕೊಳ್ಳಬಹುದಾಗಿದೆ. ಇದು ಸಾಧ್ಯವಾಗಿರುವುದು ಆಧಾರ್​ ಯೋಜನೆಯಿಂದ ಎಂದು ಹೇಳಿದರು.

2010ರ ಸೆಪ್ಟಂಬರ್ 29ರಂದು ಮೊದಲ ಬಾರಿಗೆ ಆಧಾರ್ ಅನ್ನು ಜನರಿಗೆ ಪರಿಚಯಿಸಲಾಯಿತು. ಈವರೆಗೆ 10 ವರ್ಷಗಳಲ್ಲಿ ಹೊಸ ಮೈಲುಗಲ್ಲನ್ನು ಮುಟ್ಟಿದ್ದೇವೆ. ಹೀಗಾಗಿ ಆಧಾರ್​ ನೋಂದಣಿ ಒಂದು ಸಾಚುರೇಷನ್​ಗೆ ಬಂದಿದೆ. ಮುಂದಿನ 10 ವರ್ಷಗಳಲ್ಲಿ ಏನು ಮಾಡಬಹುದೆಂಬ ಗುರಿ ಹೊಂದಿದ್ದೇವೆ.

ಅವುಗಳಲ್ಲಿ ಮುಖ್ಯವಾಗಿ ಡಿಜಿಟಲೀಕರಣ. ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಹೆಚ್ಚು ಸೌಲಭ್ಯವನ್ನು ಒದಗಿಸುವುದು. ದೇಶದ 6.5 ಲಕ್ಷ ಹಳ್ಳಿಗಳಲ್ಲಿ ಆಧಾರ್ ನೋಂದಣಿಯನ್ನು ಸ್ಮಾರ್ಟ್​ ಫೋನ್​ಗಳಲ್ಲಿ ಮಾಡುವಂತೆ ಮಾಡುವುದು. ಹಾಗೂ ಅದರ ನವೀಕರಣಕ್ಕಾಗಿ ಮೊಬೈಲ್​ ಅಪ್ಲಿಕೇಷನ್​ಗಳ ಅಭಿವೃದ್ಧಿಯತ್ತ ಚಿಂತನೆ ನಡೆಸಿದ್ದೇವೆ. ಇದರೊಂದಿಗೆ ಆಧಾರ್​ನ ಭದ್ರತೆ ಹಾಗೂ ಬಳಕೆದಾರನ ಸುರಕ್ಷತೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

 ಇದನ್ನೂ ಓದಿ:

ಸಶಸ್ತ್ರ ಪಡೆಗಳ ಮುಖ್ಯಸ್ಥರ ಸಮಿತಿ ಅಧ್ಯಕ್ಷರಾಗಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅಧಿಕಾರ ಸ್ವೀಕಾರ

National Tourism Policy: ಪ್ರವಾಸೋದ್ಯಮಕ್ಕೆ ಉತ್ತೇಜನ; ಮೋದಿ ಸರ್ಕಾರದ ರಾಷ್ಟ್ರೀಯ ಪ್ರವಾಸೋದ್ಯಮ ನೀತಿ ನಿರ್ಧಾರ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ