ಸಶಸ್ತ್ರ ಪಡೆಗಳ ಮುಖ್ಯಸ್ಥರ ಸಮಿತಿ ಅಧ್ಯಕ್ಷರಾಗಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅಧಿಕಾರ ಸ್ವೀಕಾರ
Army Chief General Manoj Mukund Naravane ಡಿಸೆಂಬರ್ 8 ರಂದು ಐಎಎಫ್ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ನಿಧನರಾದ ನಂತರ ಈ ಹುದ್ದೆ ಖಾಲಿಯಾಗಿದೆ. ಮೂರು ಸೇವಾ ಮುಖ್ಯಸ್ಥರಲ್ಲಿ ಅತ್ಯಂತ ಹಿರಿಯರಾಗಿದ್ದು, ಜನರಲ್ ನರವಾಣೆ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ದೆಹಲಿ: ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ (Army Chief Gen Naravane) ಅವರು ಮೂರು ಸೇವಾ ಮುಖ್ಯಸ್ಥರನ್ನು ಒಳಗೊಂಡಿರುವ ಸಶಸ್ತ್ರ ಪಡೆಗಳ ಮುಖ್ಯಸ್ಥರ ಸಮಿತಿ ಅಧ್ಯಕ್ಷರಾಗಿ (Head Of Chiefs Of Staff Committee) ಅಧಿಕಾರ ವಹಿಸಿಕೊಂಡಿದ್ದಾರೆ. ಡಿಸೆಂಬರ್ 8 ರಂದು ಐಎಎಫ್ ಹೆಲಿಕಾಪ್ಟರ್ ಅಪಘಾತದಲ್ಲಿ(IAF helicopter crash) ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (Defence Staff Gen Bipin Rawat) ಅವರು ನಿಧನರಾದ ನಂತರ ಈ ಹುದ್ದೆ ಖಾಲಿಯಾಗಿದೆ. ಮೂರು ಸೇವಾ ಮುಖ್ಯಸ್ಥರಲ್ಲಿ ಅತ್ಯಂತ ಹಿರಿಯರಾಗಿದ್ದು, ಜನರಲ್ ನರವಾಣೆ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಸೆಪ್ಟೆಂಬರ್ 30 ಮತ್ತು ನವೆಂಬರ್ 30 ರಂದು ಅಧಿಕಾರ ಸ್ವೀಕರಿಸಿದ್ದರು. ಚೀಫ್ಸ್ ಆಫ್ ಸ್ಟಾಫ್ ಕಮಿಟಿ (CoSC) ಮಂಗಳವಾರ ಸಭೆ ಸೇರಿ ಜನರಲ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು 11 ಸಶಸ್ತ್ರ ಪಡೆಗಳ ಸಿಬ್ಬಂದಿಯ ಸಾವಿಗೆ ಸಂತಾಪ ಸೂಚಿಸಿತು.
ಅಪಘಾತದಲ್ಲಿ ಬದುಕುಳಿದ ಏಕೈಕ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
General MM Naravane #COAS had telephonic interaction with Lieutenant General Fahd bin Abdullah Al-Mutair, Commander, Royal Saudi Armed Forces, Kingdom of Saudi Arabia and discussed issues of bilateral defence cooperation.#IndiaSaudiArabiaFriendship pic.twitter.com/NOixdD511b
— ADG PI – INDIAN ARMY (@adgpi) December 15, 2021
ಏತನ್ಮಧ್ಯೆ, ಜನರಲ್ ನರವಾಣೆ ಅವರು ರಾಯಲ್ ಸೌದಿ ಸಶಸ್ತ್ರ ಪಡೆಗಳ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಫಹದ್ ಬಿನ್ ಅಬ್ದುಲ್ಲಾ ಅಲ್-ಮುಟೈರ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಅವರು ದ್ವಿಪಕ್ಷೀಯ ರಕ್ಷಣಾ ಸಹಕಾರದ ವಿಷಯಗಳ ಬಗ್ಗೆ ಚರ್ಚಿಸಿದರು ಎಂದು ಸೇನೆ ಹೇಳಿದೆ.
ಇದನ್ನೂ ಓದಿ: ಸಾಂಕ್ರಾಮಿಕ ರೋಗ ಮುಗಿದಿಲ್ಲ, ಅಗತ್ಯ ಬೆಂಬಲ ಒದಗಿಸಲು ಸರ್ಕಾರದ ಪ್ರಯತ್ನಗಳಲ್ಲಿ ಸೇನಾಪಡೆ ಜತೆಗಿದೆ: ಸೇನಾ ಮುಖ್ಯಸ್ಥ ನರವಾಣೆ
ಇದನ್ನೂ ಓದಿ: ಬಿಪಿನ್ ರಾವತ್ ನಿಧನದಿಂದ ತೆರವಾದ ಸಿಡಿಎಸ್ ಹುದ್ದೆ ಮುಂದೆ ಯಾರಿಗೆ?-ಬಲವಾಗಿ ಕೇಳಿಬರುತ್ತಿರುವುದು ಇವರ ಹೆಸರು