ಚಂಡಿಗಢ್: ಪಂಜಾಬ್ ವಿಧಾನಸಭೆ ಚುನಾವಣೆ(Punjab Assembly Election)ಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಇಂದು ಆಮ್ ಆದ್ಮಿ ಪಕ್ಷ (AAP) ಬಿಡುಗಡೆ ಮಾಡಿದೆ. ಪಂಜಾಬ್ನಲ್ಲಿ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್, ಇದುವರೆಗೆ 73 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನವೆಂಬರ್ ಪ್ರಾರಂಭದಲ್ಲಿ ಬಿಡುಗಡೆ ಮಾಡಲಾಗಿತ್ತು. ಹಾಗೇ, ಎರಡೇ ದಿನಗಳ ಹಿಂದೆ 18 ಅಭ್ಯರ್ಥಿಗಳ ಹೆಸರುಳ್ಳ ಮೂರನೇ ಪಟ್ಟಿಯನ್ನು ಆಪ್ ಬಹಿರಂಗ ಮಾಡಿತ್ತು. ಇದೀಗ 15 ಜನರ ಹೆಸರಿನ ನಾಲ್ಕನೇ ಲಿಸ್ಟ್ ಹೊರಬಿದ್ದಿದೆ. ಆದರೆ ಪಂಜಾಬ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಇನ್ನೂ ಅರವಿಂದ್ ಕೇಜ್ರಿವಾಲ್ ತಿಳಿಸಿಲ್ಲ.
ಇದೀಗ ಬಿಡುಗಡೆಯಾದ ಲಿಸ್ಟ್ನಲ್ಲಿ ರಂಜಿತ್ ಸಿಂಗ್ ರಾಣಾ, ಇಂದ್ರಜಿತ್ ಕೌರ್ ಮನ್, ಗುರ್ಧಿಯನ್ ಸಿಂಗ್ ಮುಲ್ತಾನಿ, ಕರ್ಮವೀರ್ ಸಿಂಗ್ ಘುಮ್ಮನ್, ಜಸ್ವೀರ್ ಸಿಂಗ್ ರಾಜಾ ಗಿಲ್, ದಿನೇಶ್ ಘದಾ, ಲಖ್ಬೀರ್ ಸಿಂಗ್ ರೈ, ತರುಣ್ಪ್ರೀತ್ ಸಿಂಗ್ ಸೋಂಧ್, ಹಕಮ್ ಸಿಂಗ್ ಥೇಕೆಡಾರ್, ದೇವಿಂದರ್ ಸಿಂಗ್ ಲಡ್ಡಿ ಧೋಸ್, ಅಶು ಬಂಗೇರ್, ಅಮಂದೀಪ್ ಸಿಂಗ್, ಗೋಲ್ಡಿ ಮುಸಾಫಿರ್, ಡಾ.ವಿಜಯ್ ಸಿಂಗ್ಲಾ, ನರೀಂದರ್ ಕೌರ್ ಭರಾಜ್ ಮತ್ತು ಕುಲ್ಜಿತ್ ಸಿಂಗ್ ರಾಂಧವಾ ಅವರ ಹೆಸರಿದೆ.
Aam Aadmi Party releases fourth list of 15 candidates for 2022 Punjab Assembly Elections pic.twitter.com/OdpITlnkb7
— ANI (@ANI) December 26, 2021
ಈ ಬಾರಿಯ ಪಂಜಾಬ್, ಗೋವಾ, ಉತ್ತರಾಖಂಡ್ ಚುನಾವಣೆಗಳನ್ನು ಆಮ್ ಆದ್ಮಿ ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ. 2017ರ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟಬಹುಮತಗಳಿಸಿತ್ತು. 117 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಪಂಜಾಬ್ನಲ್ಲಿ ಕಾಂಗ್ರೆಸ್ 77 ಸೀಟುಗಳನ್ನು ಗೆದ್ದುಕೊಂಡಿತ್ತು. ಆಗ ಆಪ್ 20 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈಗಾಗಲೇ ಪಂಜಾಬ್ಗೆ ಎರಡು-ಮೂರು ಬಾರಿ ಭೇಟಿ ಕೊಟ್ಟಿರುವ ಅರವಿಂದ್ ಕೇಜ್ರಿವಾಲ್, ತಾವು ಅಲ್ಲಿ ಅಧಿಕಾರಕ್ಕೆ ಬಂದರೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ಉಚಿತ ಆರೋಗ್ಯ ಸೇವೆ, ಶಿಕ್ಷಕರ ಸಮಸ್ಯೆಗಳ ಪರಿಹಾರದ ಭರವಸೆಯನ್ನೂ ಕೊಟ್ಟಿದ್ದಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ ಪಂಜಾಬ್ನಲ್ಲಿ ಆಪ್ ಅಧಿಕಾರ ಹಿಡಿದರೆ ಪ್ರತಿತಿಂಗಳೂ ಮಹಿಳೆಯರ ಖಾತೆಗೆ 1000 ರೂಪಾಯಿ ಹಾಕುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಚಿವರ ಎಚ್ಚರಿಕೆಯ ಬೆನ್ನಲ್ಲೇ ಸನ್ನಿ ಲಿಯೋನ್ನ ಮಧುಬನ್ ಹಾಡಿನ ಸಾಹಿತ್ಯ ಬದಲಿಸಲು ನಿರ್ಧಾರ
Published On - 8:49 pm, Sun, 26 December 21