Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಏಕಾಂಗಿ ಸ್ಪರ್ಧೆ

ಹರ್ಯಾಣದಲ್ಲಿ ಮೈತ್ರಿ ಮಾಡಿಕೊಳ್ಳಲು ಇಂಡಿಯಾ ಬಣ ನಡೆಸಿದ ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್ ವಿಫಲಗೊಳಿಸಿದೆ. "ತನ್ನ ಮಿತ್ರಪಕ್ಷವನ್ನು ಅವರೊಂದಿಗೆ ಕರೆದೊಯ್ಯುವುದು ಅಗತ್ಯವೆಂದು ಭಾವಿಸಲಿಲ್ಲ" ಎಂದು ಕಕ್ಕರ್ ಹೇಳಿದ್ದಾರೆ. ಹರ್ಯಾಣದಲ್ಲಿ ಎಎಪಿ ಮತ್ತು ಕಾಂಗ್ರೆಸ್ ಒಟ್ಟಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು, ಅಲ್ಲಿ ಕಾಂಗ್ರೆಸ್ 10 ರಲ್ಲಿ ಐದು ಸ್ಥಾನಗಳನ್ನು ಗೆದ್ದಿದೆ.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಏಕಾಂಗಿ ಸ್ಪರ್ಧೆ
ಪ್ರಿಯಾಂಕಾ ಕಕ್ಕರ್
Follow us
ರಶ್ಮಿ ಕಲ್ಲಕಟ್ಟ
|

Updated on: Oct 09, 2024 | 8:14 PM

ದೆಹಲಿ ಅಕ್ಟೋಬರ್ 09: ಆಮ್ ಆದ್ಮಿ ಪಕ್ಷ (AAP) ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ “ಅತಿಯಾದ ಆತ್ಮವಿಶ್ವಾಸ”ದ ಕಾಂಗ್ರೆಸ್ ಮತ್ತು “ಅಹಂಕಾರಿ” ಬಿಜೆಪಿ ವಿರುದ್ಧ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ವಕ್ತಾರರು ಬುಧವಾರ ಹೇಳಿದ್ದಾರೆ. “ದೆಹಲಿಯಲ್ಲಿ ಎಎಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಅತಿಯಾದ ಆತ್ಮವಿಶ್ವಾಸದ ಕಾಂಗ್ರೆಸ್ ಮತ್ತು ಸೊಕ್ಕಿನ ಬಿಜೆಪಿ ವಿರುದ್ಧ ಏಕಾಂಗಿಯಾಗಿ ಹೋರಾಡಲು ನಾವು ಸಮರ್ಥರಾಗಿದ್ದೇವೆ” ಎಂದು ಆಪ್ ವಕ್ತಾರೆ ಪ್ರಿಯಾಂಕಾ ಕಕ್ಕರ್ ಹೇಳಿದ್ದಾರೆ.

ಕಾಂಗ್ರೆಸ್ ಮೈತ್ರಿ ಪಾಲುದಾರರಿಗೆ ಬೆಲೆ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಹರ್ಯಾಣ ಚುನಾವಣೆಯಲ್ಲಿ ಪಕ್ಷದ ಸಾಧನೆ ಅದರ ಅತಿಯಾದ ಆತ್ಮವಿಶ್ವಾಸಕ್ಕೆ ಉದಾಹರಣೆಯಾಗಿದೆ. “ಕಳೆದ 10 ವರ್ಷಗಳಿಂದ ದೆಹಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಶೂನ್ಯ ಸ್ಥಾನಗಳನ್ನು ಹೊಂದಿತ್ತು, ಆದರೂ ಲೋಕಸಭೆ ಚುನಾವಣೆಯಲ್ಲಿ ಆಪ್ ಕಾಂಗ್ರೆಸ್‌ಗೆ ಮೂರು ಸ್ಥಾನಗಳನ್ನು ನೀಡಿತು. ಆದರೆ ಹರ್ಯಾಣದಲ್ಲಿ ಮೈತ್ರಿ ಬೇಕು ಎಂದು ಅವರಿಗೆ ಅನಿಸಲಿಲ್ಲ

ಹರ್ಯಾಣದಲ್ಲಿ ಮೈತ್ರಿ ಮಾಡಿಕೊಳ್ಳಲು ಇಂಡಿಯಾ ಬಣ ನಡೆಸಿದ ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್ ವಿಫಲಗೊಳಿಸಿದೆ. “ತನ್ನ ಮಿತ್ರಪಕ್ಷವನ್ನು ಅವರೊಂದಿಗೆ ಕರೆದೊಯ್ಯುವುದು ಅಗತ್ಯವೆಂದು ಭಾವಿಸಲಿಲ್ಲ” ಎಂದು ಕಕ್ಕರ್ ಹೇಳಿದ್ದಾರೆ. ಹರ್ಯಾಣದಲ್ಲಿ ಎಎಪಿ ಮತ್ತು ಕಾಂಗ್ರೆಸ್ ಒಟ್ಟಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು, ಅಲ್ಲಿ ಕಾಂಗ್ರೆಸ್ 10 ರಲ್ಲಿ ಐದು ಸ್ಥಾನಗಳನ್ನು ಗೆದ್ದಿದೆ.

ಹರ್ಯಾಣದಲ್ಲಿ ಬಿಜೆಪಿಯ ನಿರ್ಣಾಯಕ ವಿಜಯದ ಹೊತ್ತಲ್ಲೇ ಆಪ್ ಈ ರೀತಿ ಹೇಳಿದೆ. ಅಲ್ಲಿ ಆಡಳಿತ ಪಕ್ಷವು 48 ಸ್ಥಾನಗಳೊಂದಿಗೆ ಸತತ ಮೂರನೇ ಅವಧಿಯನ್ನು ಪಡೆದುಕೊಂಡಿತು ಮತ್ತು ಕಾಂಗ್ರೆಸ್ 37 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಏಕಾಂಗಿಯಾಗಿ ಸ್ಪರ್ಧಿಸಿದ ಎಎಪಿ ಹರ್ಯಾಣದಲ್ಲಿ ಯಾವುದೇ ಸ್ಥಾನಗಳನ್ನು ಪಡೆಯಲು ವಿಫಲವಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಎಎಪಿಒಂದು ಸ್ಥಾನವನ್ನು ಗೆಲ್ಲಲು ಪಕ್ಷದ ಅಭಿವೃದ್ಧಿ-ಚಾಲಿತ ರಾಜಕೀಯ ಕಾರಣ ಎಂದು  ಹೇಳಿದ ಅವರು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುರುವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ತನ್ನ ಮೊದಲ ವಿಜಯವನ್ನು ದಾಖಲಿಸಿದ್ದು, ಅದರ ಅಭ್ಯರ್ಥಿ ಮೆಹರಾಜ್ ಮಲಿಕ್ ದೋಡಾ ಕ್ಷೇತ್ರದಲ್ಲಿ ಬಿಜೆಪಿಯ ಸಮೀಪದ ಪ್ರತಿಸ್ಪರ್ಧಿಯನ್ನು 4,538 ಮತಗಳ ಅಂತರದಿಂದ ಸೋಲಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರ, ಜಾರ್ಖಂಡ್​ನಲ್ಲೂ ಹರಿಯಾಣದ ಫಲಿತಾಂಶ ಮರುಕಳಿಸಲಿದೆ; ಚಂದ್ರಬಾಬು ನಾಯ್ಡು ಭವಿಷ್ಯ

ಮೆಹರಾಜ್ ಮಲಿಕ್ ಅವರು ಅತ್ಯಂತ ಕಠಿಣ ಪರಿಶ್ರಮ ಪಡುವ ವ್ಯಕ್ತಿಯಾಗಿದ್ದು, ಅವರು ಚಳವಳಿ ಮತ್ತು ಹೋರಾಟದ ಸಮಯದಿಂದಲೂ ಪಕ್ಷದೊಂದಿಗೆ ಇದ್ದಾರೆ . ಜಿಲ್ಲಾ ಅಭಿವೃದ್ಧಿ ಮಂಡಳಿ ಸದಸ್ಯ ಮಲಿಕ್ ಅವರು ಬಿಜೆಪಿಯ ಗಜಯ್ ಸಿಂಗ್ ರಾಣಾ ಅವರ 18,690 ಮತಗಳ ವಿರುದ್ಧ 23,228 ಮತಗಳನ್ನು ಪಡೆದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ