ತೆಲಂಗಾಣ: ಇಂದು ಬೆಳಿಗ್ಗೆ (ಶುಕ್ರವಾರ) ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ನಲ್ಗೊಂಡ ಜಿಲ್ಲೆಯ ಕೇತಪಲ್ಲಿ ಮಂಡಲದ ಇನುಪಮುಲದ ಎನ್‌ಎಚ್-65ರಲ್ಲಿ ಬೆಳಗಿನ ಜಾವ 1.30ರ ಸುಮಾರಿಗೆ ಈ ರಸ್ತೆ ಅಪಘಾತ ಸಂಭವಿಸಿದೆ. ಇವರು ಸೂರ್ಯಪೇಟೆಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ವೇಳೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅದೇ ರಸ್ತೆಯಲ್ಲಿದ್ದ ಇತರ ವಾಹನ ಸವಾರರು, ಇದನ್ನು ಗಮನಿಸಿ ಕಾರಿನ ಒಳಗೆ ಇದ್ದವರನ್ನು ಹೊರಕ್ಕೆ ತೆಗೆದಿದ್ದಾರೆ. ಕಾರಿನ ಒಳಗೆ ಒಟ್ಟು ಐವರು ಇದ್ದರು. ಇವರಲ್ಲಿ ಇಬ್ಬರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದು, ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ:Accident: ರಸ್ತೆ ದಾಟುತ್ತಿದ್ದಾಗ ಆಟೋರಿಕ್ಷಾ ಡಿಕ್ಕಿ, ಬಾಲಕಿ ಸಾವು
ಮೃತರನ್ನು ಕರುಣಾಕುಮಾರಿ (70) ಮತ್ತು ಅವರ ಪುತ್ರ ಫಣಿಕುಮಾರ್ (43) ಎಂದು ಗುರುತಿಸಲಾಗಿದೆ. ಫಣಿಕುಮಾರ್ ಅವರ ಪತ್ನಿ ಕೃಷ್ಣವೇಣಿ, ಅವರ ಮಗ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ.
ನಿಯಂತ್ರಣ ತಪ್ಪಿದ ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು
ಪೊಲೀಸರ ಪ್ರಕಾರ, ಫಣಿಕುಮಾರ್ ತನ್ನ ಕುಟುಂಬದೊಂದಿಗೆ ಹೈದರಾಬಾದ್‌ನಿಂದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸೂರ್ಯಪೇಟ್‌ಗೆ ಹಿಂತಿರುಗುತ್ತಿದ್ದಾಗ. ಇನುಪಾಮುಲ ಜಂಕ್ಷನ್ ದಾಟುತ್ತಿದಂತೆ ಫಣಿಕುಮಾರ್ ಅವರು ಅತಿವೇಗದಿಂದ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಕಾರಿನ ಹಿಂದೆ ಹೋಗುತ್ತಿದ್ದ ವಾಹನ ಸವಾರರು ಬೆಂಕಿ ಹೊತ್ತಿರುವುದನ್ನು ಗಮನಿಸಿ ಕಾರಿನಲ್ಲಿದ್ದ ಐವರನ್ನು ರಕ್ಷಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವಾಗ, ಫಣಿಕುಮಾರ್ ಮತ್ತು ಅವರ ತಾಯಿ ಕರುಣಾಕುಮಾರಿ ಮೃತಪಟ್ಟಿದ್ದಾರೆ. ಉಳಿದ ಮೂವರನ್ನು ಹೈದರಾಬಾದ್‌ನ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:13 pm, Fri, 16 December 22