Accident: ರಸ್ತೆ ದಾಟುತ್ತಿದ್ದಾಗ ಆಟೋರಿಕ್ಷಾ ಡಿಕ್ಕಿ, ಬಾಲಕಿ ಸಾವು
ರಸ್ತೆ ದಾಟುತ್ತಿದ್ದ 10 ವರ್ಷದ ಬಾಲಕಿ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಪ್ಪುರಂ: ರಸ್ತೆ ದಾಟುತ್ತಿದ್ದ 10 ವರ್ಷದ ಬಾಲಕಿ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐದನೇ ತರಗತಿ ವಿದ್ಯಾರ್ಥಿನಿ ಶಫ್ನಾ ಶೆರಿನ್ ತನ್ನ ಶಾಲಾ ಬಸ್‌ನಿಂದ ಇಳಿದು ಪಾಂಡಿಮುತ್ತಂನಲ್ಲಿ ರಸ್ತೆ ದಾಟುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಪರೀಕ್ಷೆಗೆ ಹಾಜರಾಗಿ ಮನೆಗೆ ತೆರಳುತ್ತಿದ್ದಳು.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಮೊದಲು ಸಮೀಪದ ತಾಲೂಕು ಆಸ್ಪತ್ರೆಗೆ ದಾಖಲಿಸಿ ನಂತರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಆಕೆಯ ಪ್ರಾಣ ಉಳಿಸಲಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯಗಳು ಸೆರೆಯಾಗಿದೆ.
ಇದನ್ನು ಓದಿ: ಟಾಟಾ ಏಸ್, ಲಾರಿ ನಡುವೆ ಡಿಕ್ಕಿ, 6 ಸಾವು, 5 ಜನರಿಗೆ ಗಾಯ
ಗ್ಯಾಸ್ ಟ್ಯಾಂಕರ್ – ಆಂಬ್ಯುಲೆನ್ಸ್ ಡಿಕ್ಕಿ, ನವಜಾತ ಶಿಶು ಮತ್ತು ತಾಯಿಗೆ ಗಂಭೀರ ಗಾಯ
ಜಲ್ಪೈಗುರಿ: ಡಾರ್ಜಿಲಿಂಗ್ ಜಿಲ್ಲೆಯ ಫನ್ಸಿಡೆವಾ ಪ್ರದೇಶದಲ್ಲಿ ಬುಧವಾರ ಖಾಲಿ ಗ್ಯಾಸ್ ಟ್ಯಾಂಕರ್ ಮತ್ತು ಆಂಬ್ಯುಲೆನ್ಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನವಜಾತ ಶಿಶು ಮತ್ತು ತಾಯಿ ಸೇರಿದಂತೆ ಇತರ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. .
ಮೂರು ದಿನಗಳ ಶಿಶು ಮತ್ತು ತಾಯಿಯನ್ನು ಮನೆಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರುವಾಗ ಈ ಘಟನೆ ನಡೆದಿದೆ. ಈ ಘಟನೆಯು ಉತ್ತರ ದಿನಜ್‌ಪುರ ಜಿಲ್ಲೆಯ ಇಸ್ಲಾಂಪುರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ಗಾಯಾಳುಗಳನ್ನು ಫನ್ಸಿಡೆವಾ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿಂದ ಅವರನ್ನು ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅವರ ಸ್ಥಿತಿ ಬಗ್ಗೆ ಯಾವುದೇ ಹೆಚ್ಚು ಮಾಹಿತಿ ತಿಳಿದುಬಂದಿಲ್ಲ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:50 pm, Wed, 14 December 22