ಏಸಿ ರೂಮಿನಲ್ಲಿ ಕೂತು ಚುನಾವಣೆ ಗೆಲ್ಲಲಾಗದು, ಸಿಬಲ್ ಕಾಲೆಳೆದ ರಂಜನ್ ಚೌಧುರಿ | Adhir Chaudhury slams Sibal over his comments on party leadership

ನವದೆಹಲಿ: ಬಿಹಾರದ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ ತಾರಕಕ್ಕೇರುವ ಸಾಧ್ಯತೆ ದಟ್ಟವಾಗಿದೆ. ಬಿಹಾರ ಚುನಾವಣೆಯಲ್ಲಿ ಹಿರಿಯ ನಾಯಕ ಕಪಿಲ್ ಸಿಬಲ್ ತೋರಿದ ಬೇಜವಾಬ್ದಾರಿತನವನ್ನು ಪಕ್ಷದ ಲೋಕಸಭಾ ಸದಸ್ಯ ಅಧೀರ್ ರಂಜನ್ ಚೌಧರಿ ಕಟುವಾಗಿ ಟೀಕಿಸಿದ್ದಾರೆ. ಕೆಲಸ ಮಾಡದೇ, ಕೇವಲ ಟೀಕೆಗಳಲ್ಲಿ ಕಾಲ ಕಳೆಯುವುದರಿಂದ ಯಾವುದೇ ಪ್ರಯೋಜನವಿಲ್ಲ, ಪಕ್ಷದ ಕಾರ್ಯ ವೈಖರಿಯಲ್ಲಿ ಮತ್ತು ಚಟುವಟಿಕೆಗಳಲ್ಲಿ ನಂಬಿಕೆಯಿಲ್ಲದವರು ಪಕ್ಷ ತೊರೆಯಬಹುದು ಎಂದು ಸಿಬಲ್​ಗೆ ಖಾರವಾಗಿ ಹೇಳಿದ್ದಾರೆ. ಬಿಹಾರ ಚುನಾವಣೆಯ ಯಾವ ಪ್ರಚಾರ ಸಭೆಯಲ್ಲೂ ಸಿಬಲ್ ಕಾಣಿಸಿಕೊಂಡಿಲ್ಲ. ಆದರೆ, […]

ಏಸಿ ರೂಮಿನಲ್ಲಿ ಕೂತು ಚುನಾವಣೆ ಗೆಲ್ಲಲಾಗದು, ಸಿಬಲ್ ಕಾಲೆಳೆದ ರಂಜನ್ ಚೌಧುರಿ | Adhir Chaudhury slams Sibal over his comments on party leadership
ಅರುಣ್​ ಕುಮಾರ್​ ಬೆಳ್ಳಿ

Updated on: Nov 18, 2020 | 9:30 PM

ನವದೆಹಲಿ: ಬಿಹಾರದ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ ತಾರಕಕ್ಕೇರುವ ಸಾಧ್ಯತೆ ದಟ್ಟವಾಗಿದೆ. ಬಿಹಾರ ಚುನಾವಣೆಯಲ್ಲಿ ಹಿರಿಯ ನಾಯಕ ಕಪಿಲ್ ಸಿಬಲ್ ತೋರಿದ ಬೇಜವಾಬ್ದಾರಿತನವನ್ನು ಪಕ್ಷದ ಲೋಕಸಭಾ ಸದಸ್ಯ ಅಧೀರ್ ರಂಜನ್ ಚೌಧರಿ ಕಟುವಾಗಿ ಟೀಕಿಸಿದ್ದಾರೆ. ಕೆಲಸ ಮಾಡದೇ, ಕೇವಲ ಟೀಕೆಗಳಲ್ಲಿ ಕಾಲ ಕಳೆಯುವುದರಿಂದ ಯಾವುದೇ ಪ್ರಯೋಜನವಿಲ್ಲ, ಪಕ್ಷದ ಕಾರ್ಯ ವೈಖರಿಯಲ್ಲಿ ಮತ್ತು ಚಟುವಟಿಕೆಗಳಲ್ಲಿ ನಂಬಿಕೆಯಿಲ್ಲದವರು ಪಕ್ಷ ತೊರೆಯಬಹುದು ಎಂದು ಸಿಬಲ್​ಗೆ ಖಾರವಾಗಿ ಹೇಳಿದ್ದಾರೆ.

ಬಿಹಾರ ಚುನಾವಣೆಯ ಯಾವ ಪ್ರಚಾರ ಸಭೆಯಲ್ಲೂ ಸಿಬಲ್ ಕಾಣಿಸಿಕೊಂಡಿಲ್ಲ. ಆದರೆ, ಪಕ್ಷದ ಹೀನಾಯ ಸೋಲಿನ ನಂತರ ಪಕ್ಷಕ್ಕೆ ಮುಜುಗರವಾಗುವಂತೆ ಬಹಿರಂಗ ಹೇಳಿಕೆ ನೀಡುವುದು ತಪ್ಪು. ಒಂದು ದಿನವೂ ಪ್ರಚಾರ ಮಾಡದೇ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಫಲಿತಾಂಶದ ವಿಮರ್ಶೆ ಮಾಡುವವರ ಅಗತ್ಯ ಪಕ್ಷಕ್ಕಿಲ್ಲ ಎಂದು ಅವರು ಸಿಬಲ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕಪಿಲ್ ಸಿಬಲ್ ಅವರಿಗೆ ಏನೇ ಅಸಮಾಧಾನಗಳಿದ್ದರೂ ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚಿಸಬೇಕಿತ್ತು. ಚುನಾವಣೆಗಳ ಪ್ರಚಾರದಲ್ಲಿ ಭಾಗಿಯಾಗಿದ್ದರೆ ಸಿಬಲ್​ಗೆ ಫಲಿತಾಂಶದ ವಿಮರ್ಶೆ ಮಾಡುವ ಅಧಿಕಾರ ಇರುತ್ತಿತ್ತು ಎಂದೂ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ (CWC) ಸದಸ್ಯರೂ ಆದ ಚೌಧುರಿ ಹೇಳಿದ್ದಾರೆ. ಇತ್ತೀಚಿಗೆ ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾಯಿಸುವಂತೆ ಪತ್ರ ಬರೆದ 23 ಸದಸ್ಯರಲ್ಲಿ ಕಪಿಲ್ ಸಿಬಲ್ ಕೂಡ ಒಬ್ಬರಾಗಿದ್ದಾರೆ.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us