Aditya L-1 ಮೈಲಿಗಲ್ಲು: ಸೂರ್ಯನ ಅಪರೂಪದ ಚಿತ್ರಗಳ ಸೆರೆಹಿಡಿದ ಆದಿತ್ಯ ಎಲ್​1

|

Updated on: Dec 09, 2023 | 10:42 AM

200 ರಿಂದ 400 ನ್ಯಾನೊಮೀಟರ್‌ಗಳ ತರಂಗಾಂತರ ವ್ಯಾಪ್ತಿಯಲ್ಲಿ ಎಸ್‌ಯುಐಟಿ ಸೆರೆಹಿಡಿದಿರುವ ಚಿತ್ರಗಳು ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಬಗ್ಗೆ ಅಭೂತಪೂರ್ವ ಮಾಹಿತಿಯನ್ನು ಒದಗಿಸುತ್ತವೆ. ಸೂರ್ಯನ ಈ ಪದರಗಳು ಸೂರ್ಯನ ಕಲೆಗಳು ಮತ್ತು ಜ್ವಾಲೆಗಳು ಸೇರಿದಂತೆ ವಿವಿಧ ಸೌರ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಇದು ಮುಖ್ಯವಾಗಿದೆ.

Aditya L-1 ಮೈಲಿಗಲ್ಲು: ಸೂರ್ಯನ ಅಪರೂಪದ ಚಿತ್ರಗಳ ಸೆರೆಹಿಡಿದ ಆದಿತ್ಯ ಎಲ್​1
ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಸೆರೆಹಿಡಿದ ಆದಿತ್ಯ ಎಲ್​1
Image Credit source: Twitter
Follow us on

ಬೆಂಗಳೂರು, ಡಿಸೆಂಬರ್ 9: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇತ್ತೀಚೆಗೆ ಉಡಾವಣೆ ಮಾಡಿರುವ ಆದಿತ್ಯ-ಎಲ್1 (Aditya L 1) ಬಾಹ್ಯಾಕಾಶ ನೌಕೆಯಲ್ಲಿರುವ ಸೋಲಾರ್ ಅಲ್ಟ್ರಾವಯಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT) ನೇರಳಾತೀತ ತರಂಗಾಂತರದಲ್ಲಿ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಸೆರೆಹಿಡಿದಿದೆ. ಈ ಕುರಿತು ಇಸ್ರೋ ಶುಕ್ರವಾರ ಸಂಜೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿದ್ದು, ಎಸ್‌ಯುಐಟಿ ಸೆರೆಹಿಡಿದಿರುವ ಚಿತ್ರಗಳನ್ನು ಹಂಚಿಕೊಂಡಿದೆ. ಇದು ಸೌರ ವೀಕ್ಷಣೆ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಲಾಗುತ್ತಿದೆ.

200 ರಿಂದ 400 ನ್ಯಾನೊಮೀಟರ್‌ಗಳ ತರಂಗಾಂತರ ವ್ಯಾಪ್ತಿಯಲ್ಲಿ ಎಸ್‌ಯುಐಟಿ ಸೆರೆಹಿಡಿದಿರುವ ಚಿತ್ರಗಳು ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಬಗ್ಗೆ ಅಭೂತಪೂರ್ವ ಮಾಹಿತಿಯನ್ನು ಒದಗಿಸುತ್ತವೆ. ಸೂರ್ಯನ ಗೋಚರಿಸುವ ‘ಮೇಲ್ಮೈ’ಯನ್ನು ದ್ಯುತಿಗೋಳ ಎಂದು ಕರೆಯಲಾಗುತ್ತದೆ. ಅದರ ಮೇಲಿರುವ ಪಾರದರ್ಶಕ ಪದರವನ್ನು ಕ್ರೋಮೋಸ್ಪಿಯರ್ ಎಂದು ಕರೆಯಲಾಗುತ್ತದೆ.

ಸೂರ್ಯನ ಈ ಪದರಗಳು ಸೂರ್ಯನ ಕಲೆಗಳು ಮತ್ತು ಜ್ವಾಲೆಗಳು ಸೇರಿದಂತೆ ವಿವಿಧ ಸೌರ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಇದು ಮುಖ್ಯವಾಗಿದೆ. ಇದು ಬಾಹ್ಯಾಕಾಶ ಹವಾಮಾನ ಮತ್ತು ಭೂಮಿಯ ಹವಾಮಾನದ ಮೇಲೆ ಆಳವಾದ ಪರಿಣಾಮಗಳನ್ನು ಬೀರುತ್ತದೆ.


ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ರಾಕೆಟ್, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್-XL (PSLV-XL) ಮೂಲಕ ಆದಿತ್ಯ-L1 ಅನ್ನು ಸೆಪ್ಟೆಂಬರ್ 2 ರಂದು ಉಡಾವಣೆ ಮಾಡಲಾಗಿತ್ತು.

ಇದನ್ನೂ ಓದಿ: ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಸೌರ ಚಂಡಮಾರುತದಿಂದ ಬಚಾವ್; ಭಾರತದ ಆದಿತ್ಯ ಎಲ್1 ಈ ರೀತಿಯ ಅಪಾಯವನ್ನು ಎದುರಿಸಬಹುದೇ?

ಆದಿತ್ಯ ಎಲ್​1 ಅನ್ನು ಭೂಮಿಯ ಕಕ್ಷೆಯಿಂದ ಹೊರಕ್ಕೆ ತೆಗೆದುಕೊಂಡು ಹೋಗಿ ಲ್ಯಾಗ್ರೇಂಜ್ 1ರಲ್ಲಿ (ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯು ಪರಸ್ಪರ ಶೂನ್ಯವಾಗಿರುವ ಬಿಂದುವನ್ನು ಲ್ಯಾಗ್ರೇಂಜ್ ಬಿಂದು 1 ಅಥವಾ ಎಲ್​​1 ಎಂದು ಕರೆಯಲಾಗುತ್ತದೆ) ಸ್ಥಾಪಿಸಲಾಗಿದೆ. ಅಲ್ಲಿದ್ದುಕೊಂಡು ಈ ಉಪಗ್ರಹವು ಸೂರ್ಯ ಬಗ್ಗೆ ಅನ್ವೇಷಣೆ ನಡೆಸುತ್ತಿದೆ. ಸೂರ್ಯನ ಮೇಲ್ಮೈ, ಸೂರ್ಯನ ಕಿರಣ, ತಾಪಮಾನ, ಸೌರಜ್ವಾಲೆ, ಸೂರ್ಯನ ಸುತ್ತಲಿನ ವಾತಾವರಣದ ಬಗ್ಗೆ ಆದಿತ್ಯ ಎಲ್​-1 ಅಧ್ಯಯನ ನಡೆಸುತ್ತಿದೆ. ಈ ವಿಚಾರದಲ್ಲಿ ಇಸ್ರೋ ವಿಜ್ಞಾನಿಗಳ ಅಧ್ಯಯನಕ್ಕೆ ಪೂರಕ ಚಿತ್ರಗಳನ್ನು, ಮಾಹಿತಿಗಳನ್ನು ಒದಗಿಸಲಿದ್ದು, ಇದೀಗ ಮೊದಲ ಹಂತದ ಚಿತ್ರಗಳನ್ನು ಕಳುಹಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ