ದೆಹಲಿ: ಅಪಘಾತದಲ್ಲಿ ಬಾಲಕ ಸಾವು; ಪ್ರತಿಭಟನೆ ಮಾಡುತ್ತಿದ್ದ ಕುಟುಂಬದವರಲ್ಲಿ ‘ಸುಮ್ಮನಿರಿ’ ಎಂದು ಕೂಗಾಡಿದ ಆಡಳಿತಾಧಿಕಾರಿ

ದೆಹಲಿ: ಅಪಘಾತದಲ್ಲಿ ಬಾಲಕ ಸಾವು; ಪ್ರತಿಭಟನೆ ಮಾಡುತ್ತಿದ್ದ ಕುಟುಂಬದವರಲ್ಲಿ 'ಸುಮ್ಮನಿರಿ' ಎಂದು ಕೂಗಾಡಿದ ಆಡಳಿತಾಧಿಕಾರಿ
ಸಂತ್ರಸ್ತರ ಕುಟುಂಬದ ಮೇಲೆ ಕೂಗಾಡುತ್ತಿರುವ ಅಧಿಕಾರಿ (ವಿಡಿಯೊ ಚಿತ್ರ)

ವಿಡಿಯೊದಲ್ಲಿ ಸಂತ್ರಸ್ತರ ತಾಯಿ ನೇಹಾ ಶರ್ಮಾ ಶಾಲೆಯ ಅಧಿಕಾರಿಗಳನ್ನು ಉಲ್ಲೇಖಿಸಿ "ಆ ಮೂರು ಜನರನ್ನು ಹಿಡಿಯಿರಿ" ಎಂದು ಪದೇ ಪದೇ ಹೇಳುವುದನ್ನು ಕೇಳಬಹುದು. ನೀವು "ಅರ್ಥ ಮಾಡಿಕೊಳ್ಳಿ ಎಂದು ಎಸ್​​ಡಿಎಂ  ಶುಭಾಂಗಿ...

TV9kannada Web Team

| Edited By: Rashmi Kallakatta

Apr 22, 2022 | 9:06 PM

ದೆಹಲಿ: ಅಪಘಾತದಲ್ಲಿ (Accident) ಸಾವನ್ನಪ್ಪಿದ 11 ವರ್ಷದ ಬಾಲಕನ ಕುಟುಂಬವೊಂದು ಈ ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ದೆಹಲಿಯ (Dehli) ಆಡಳಿತಾಧಿಕಾರಿಯೊಬ್ಬರು (administrative official) ಸಂತ್ರಸ್ತ ಕುಟುಂಬದ ಜತೆ ಜಗಳವಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಅನುರಾಗ್ ಭಾರದ್ವಾಜ್ ಎಂಬ ಬಾಲಕ ಬುಧವಾರ ಶಾಲಾ ಬಸ್ ಕಿಟಕಿಯಿಂದ ಇಣುಕಿ ನೋಡಿದಾಗ ಅವನ ತಲೆ ಕಂಬಕ್ಕೆ ಬಡಿದು ಸಾವಿಗೀಡಾಗಿದ್ದನು. ಕೋಪಗೊಂಡ ಪೋಷಕರು ಮತ್ತು ಕುಟುಂಬದವರು ದಯಾವತಿ ಪಬ್ಲಿಕ್ ಸ್ಕೂಲ್‌ಗೆ ಆಗಮಿಸಿ ಶಾಲೆಯ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ನಡೆಸಿದರು. ಶಾಲಾ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಬಸ್ ಚಾಲಕ ಮತ್ತು ಕಂಡಕ್ಟರ್‌ನನ್ನು ಬಂಧಿಸಲಾಗಿದೆ. ಪ್ರಾಂಶುಪಾಲರನ್ನು (ಸರಿಯಾದ) ವ್ಯಾಪ್ತಿಗೆ ಒಳಪಡದ ನಿವಾರಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ನಮಗೆ ತಿಳಿದು ಬಂದಿದೆ. ನಾವು ತಲುಪಿದಾಗ ಅಲ್ಲಿ ಯಾರೂ ಕಾಣಲಿಲ್ಲ. ವಿಚಾರಣೆ ನಡೆಸಿದ ಬಳಿಕ ಬಿಡಲಾಗಿದೆ ಎಂದು ತಿಳಿಸಲಾಗಿದೆ. ನಿರ್ಲಕ್ಷದಿಂದ ಮಗ ಸಾವಿಗೀಡಾಗಿದ್ದಾನೆ ಎಂದು ಅವರ ವಿರುದ್ಧ ಕ್ರಮವನ್ನು ಪ್ರತಿಭಟಿಸಲು ನಾವು ರಸ್ತೆಯಲ್ಲಿ ಕುಳಿತುಕೊಂಡೆವು ಎಂದು ಅನುರಾಗ್ ಅವರ ಚಿಕ್ಕಮ್ಮ ಪ್ರೀತಿ ಭಾರದ್ವಾಜ್ ಹೇಳಿದರು.

ಕುಟುಂಬವು ಹಾಪುರ್ ರಸ್ತೆಯ ಬಳಿ ಪ್ರತಿಭಟನೆ ಆರಂಭಿಸುತ್ತಿದ್ದಂತೆ, ಮೋದಿನಗರ ಎಸ್‌ಡಿಎಂ ಶುಭಾಂಗಿ ಶುಕ್ಲಾ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅವರನ್ನು ಸಮಾಧಾನಪಡಿಸಿದರು. ವಿಡಿಯೊದಲ್ಲಿ ಸಂತ್ರಸ್ತರ ತಾಯಿ ನೇಹಾ ಶರ್ಮಾ ಶಾಲೆಯ ಅಧಿಕಾರಿಗಳನ್ನು ಉಲ್ಲೇಖಿಸಿ “ಆ ಮೂರು ಜನರನ್ನು ಹಿಡಿಯಿರಿ” ಎಂದು ಪದೇ ಪದೇ ಹೇಳುವುದನ್ನು ಕೇಳಬಹುದು. ನೀವು ಅರ್ಥ ಮಾಡಿಕೊಳ್ಳಿ ಎಂದು ಎಸ್​​ಡಿಎಂ  ಶುಭಾಂಗಿ ಹೇಳಿದಾಗ ತಾಯಿಯು ತನ್ನ ಬೇಡಿಕೆಗಳನ್ನು ಪುನರಾವರ್ತಿಸಿದ್ದಾರೆ. ಆಗ ಎಸ್ ಡಿಎಂ ಸುಮ್ಮನಿರಿ ಎಂದು ಹಲವಾರು ಬಾರಿ ಹೇಳುತ್ತಾರೆ. ನಾನು ನಿಮಗೆ ವಿವರಿಸಲು ಪ್ರಯತ್ನಿಸುತ್ತಿದ್ದೇನೆ, ನಿಮಗೆ ಅರ್ಥವಾಗುತ್ತಿಲ್ಲ ಎಂದು ಅಧಿಕಾರಿ ಹೇಳುತ್ತಿರುವುದು ವಿಡಿಯೊದಲ್ಲಿದೆ.

ಅಧಿಕಾರಿ ಬಳಸಿದ ಭಾಷೆ ನಿಸ್ಸಂದೇಹವಾಗಿ ಅಸಭ್ಯವಾಗಿತ್ತು, ಆದರೆ ನಾವು ಎಲ್ಲಿಂದ ಬಂದಿದ್ದೇವೆ ಎಂಬುದನ್ನು ಜನರು ನೋಡಬೇಕು. ನಾವು ನಮ್ಮ ಕುಟುಂಬದಲ್ಲಿ ಮಗುವನ್ನು ಕಳೆದುಕೊಂಡಿದ್ದೇವೆ. ನಾವು ಪ್ರತಿಭಟಿಸಬೇಕು. ನಂತರ ನಾವು ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿದ್ದು ಕ್ರಮ ಕೈಗೊಳ್ಳುವುದಾಗಿ ಅವರು ಬರೆದು ಕೊಟ್ಟಿದ್ದಾರೆಎಂದು ಪ್ರೀತಿ ತಿಳಿಸಿದ್ದಾರೆ.

ಇದನ್ನೂ ಓದಿ: ನೀರವ್ ಮೋದಿ, ವಿಜಯ್ ಮಲ್ಯ ‌ಗಡೀಪಾರು ವಿಷಯ; ಬ್ರಿಟನ್ ಸರ್ಕಾರ ಹಸ್ತಾಂತರಕ್ಕೆ ಆದೇಶ ನೀಡಿದೆ: ಯುಕೆ ಪ್ರಧಾನಿ

Follow us on

Related Stories

Most Read Stories

Click on your DTH Provider to Add TV9 Kannada