ನೀರವ್ ಮೋದಿ, ವಿಜಯ್ ಮಲ್ಯ ‌ಗಡೀಪಾರು ವಿಷಯ; ಬ್ರಿಟನ್ ಸರ್ಕಾರ ಹಸ್ತಾಂತರಕ್ಕೆ ಆದೇಶ ನೀಡಿದೆ: ಯುಕೆ ಪ್ರಧಾನಿ

ವಿಜಯ್ ಮಲ್ಯ ಮತ್ತು ಖಲಿಸ್ತಾನಿ ಉಗ್ರಗಾಮಿಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು "ಭಾರತಕ್ಕೆ ಸಹಾಯ ಮಾಡಲು ನಾವು ಉಗ್ರಗಾಮಿ ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸಿದ್ದೇವೆ. ಬ್ರಿಟನ್ ಸರ್ಕಾರವು ಹಸ್ತಾಂತರಕ್ಕೆ ಆದೇಶ ನೀಡಿದೆ.

ನೀರವ್ ಮೋದಿ, ವಿಜಯ್ ಮಲ್ಯ ‌ಗಡೀಪಾರು ವಿಷಯ; ಬ್ರಿಟನ್ ಸರ್ಕಾರ ಹಸ್ತಾಂತರಕ್ಕೆ ಆದೇಶ ನೀಡಿದೆ: ಯುಕೆ ಪ್ರಧಾನಿ
ಬೋರಿಸ್ ಜಾನ್ಸನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 22, 2022 | 5:41 PM

ದೆಹಲಿ: ಭಾರತ ಮತ್ತು ಯುಕೆ ದ್ವಿಪಕ್ಷೀಯ ಚರ್ಚೆಯಲ್ಲಿ ಆರ್ಥಿಕ ಅಪರಾಧಿಗಳು ಮತ್ತು ಖಲಿಸ್ತಾನಿ ಗುಂಪುಗಳ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದಾಗಿ ವಿವರಿಸಿದ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson), ಇತರ ದೇಶಗಳು ಮತ್ತು ಭಾರತಕ್ಕೆ ಬೆದರಿಕೆ ಹಾಕುವ ಉಗ್ರಗಾಮಿ ಗುಂಪುಗಳನ್ನು ಯುನೈಟೆಡ್ ಕಿಂಗ್‌ಡಮ್ (United Kingdom) ಸಹಿಸುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ. “ನಾವು ಉಗ್ರಗಾಮಿ ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸಿದ್ದೇವೆ. ಹಸ್ತಾಂತರ ಪ್ರಕರಣಗಳ ವಿಷಯದಲ್ಲಿ, ಕಾನೂನು ತಾಂತ್ರಿಕತೆಗಳು ಕಷ್ಟಕರವಾಗಿಸಿದೆ. ನಮ್ಮ ದೃಷ್ಟಿಕೋನದಿಂದ, ಅವರು ಹಿಂತಿರುಗಬೇಕೆಂದು ನಾವು ಬಯಸುತ್ತೇವೆ. ನಮ್ಮ ಕಾನೂನು ವ್ಯವಸ್ಥೆಯನ್ನು ಬಳಸಿಕೊಂಡು ಕಾನೂನಿನಿಂದ ತಪ್ಪಿಸಿಕೊಳ್ಳಲು ಬಯಸುವ ಜನರನ್ನು ನಾವು ಸ್ವಾಗತಿಸುವುದಿಲ್ಲ, ”ಎಂದು ಜಾನ್ಸನ್ ಹೇಳಿದ್ದಾರೆ.  ತಮ್ಮ ದ್ವಿಪಕ್ಷೀಯ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಬೋರಿಸ್  ಜಾನ್ಸನ್ ಅವರು ಖಲಿಸ್ತಾನಿ ಗುಂಪುಗಳು ಮತ್ತು ಭಾರತದ ವಾಟೆಂಡ್ ಆರ್ಥಿಕ ಅಪರಾಧಿಗಳ ಬಗ್ಗೆ ಚರ್ಚಿಸಿದರು. ಈ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಉಭಯ ದೇಶಗಳು ಹೇಳಿವೆ. ಜಾನ್ಸನ್ ಅವರು ಭಾರತದ ಕಳವಳಗಳಿಗೆ ಸಂವೇದನಾಶೀಲರಾಗಿದ್ದಾರೆ ಎಂದು ಹೇಳಿದರು. ನೀರವ್ ಮೋದಿ (Nirav Modi), ವಿಜಯ್ ಮಲ್ಯ (Vijay Mallya) ಮತ್ತು ಖಲಿಸ್ತಾನಿ ಉಗ್ರಗಾಮಿಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು “ಭಾರತಕ್ಕೆ ಸಹಾಯ ಮಾಡಲು ನಾವು ಉಗ್ರಗಾಮಿ ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸಿದ್ದೇವೆ. ಬ್ರಿಟನ್ ಸರ್ಕಾರವು ಹಸ್ತಾಂತರಕ್ಕೆ ಆದೇಶ ನೀಡಿದೆ. ಭಾರತದಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ನಮ್ಮ ಕಾನೂನು ವ್ಯವಸ್ಥೆಯನ್ನು ಬಳಸಲು ಬಯಸುವ ಜನರನ್ನು ನಾವು ಸ್ವಾಗತಿಸುವುದಿಲ್ಲ.. ಇತರ ದೇಶಗಳಿಗೆ ಬೆದರಿಕೆ ಹಾಕುವ, ಭಾರತಕ್ಕೆ ಬೆದರಿಕೆ ಹಾಕುವ ಉಗ್ರಗಾಮಿ ಗುಂಪುಗಳನ್ನು ನಾವು ಸಹಿಸುವುದಿಲ್ಲ ಎಂಬ ಬಲವಾದ ಅಭಿಪ್ರಾಯವನ್ನು ನಾವು ಹೊಂದಿದ್ದೇವೆ. ನಾವು ಭಾರತಕ್ಕೆ ಸಹಾಯ ಮಾಡಲು ಉಗ್ರಗಾಮಿ ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸಿದ್ದೇವೆ ಎಂದಿದ್ದಾರೆ.

ದ್ವಿಪಕ್ಷೀಯ ಮಾತುಕತೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ (Harshvardhan Shringla) ಅವರು, ಆರ್ಥಿಕ ಅಪರಾಧಿಗಳ ಸಮಸ್ಯೆಯ ಕುರಿತು ನಾವು ಯುಕೆಯೊಂದಿಗೆ ವಿವಿಧ ಹಂತಗಳಲ್ಲಿ ಕೆಲವು ಸಮಯದಿಂದ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇವೆ. ಈ ದೇಶದಲ್ಲಿ ನ್ಯಾಯವನ್ನು ಎದುರಿಸಲು ಭಾರತದ ವಾಟೆಂಡ್ ಬಿಲಿಯನೇರ್‌ಗಳನ್ನು ಮರಳಿ ಕರೆತರುವುದು ನಮ್ಮ ಉದ್ದೇಶವಾಗಿದೆ. ದ್ವಿಪಕ್ಷೀಯ ಮಾತುಕತೆಯ ವೇಳೆ ಈ ವಿಷಯವನ್ನು ಚರ್ಚಿಸಲಾಗಿದೆ ಎಂದಿದ್ದಾರೆ. “ಯುಕೆ ಪ್ರಧಾನಿ ಜಾನ್ಸನ್ ಅವರು ಈ ವಿಷಯವೂ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಅವರು ಈ ವಿಷಯದಲ್ಲಿ ಭಾರತೀಯ ಕಳವಳಗಳಿಗೆ ಬಹಳ ಸಂವೇದನಾಶೀಲರಾಗಿದ್ದಾರೆ ಮತ್ತು ಅವರು ಏನು ಮಾಡಬಹುದೆಂದು ನೋಡೋಣ ಎಂದು ಹೇಳಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ.

ಉಕ್ರೇನ್ ಬಿಕ್ಕಟ್ಟಿನ ಕುರಿತು ಭಾರತಕ್ಕೆ ಉಪನ್ಯಾಸ ನೀಡುವುದಿಲ್ಲ ಎಂದು ಯುಕೆ ಸ್ಪಷ್ಟಪಡಿಸಿದ್ದರೂ, ಉಭಯ ನಾಯಕರ ನಡುವೆ ಯುದ್ಧದ ಬಗ್ಗೆ ಚರ್ಚಿಸಲಾಗಿದೆ ಎಂದು ಶ್ರಿಂಗ್ಲಾ ಹೇಳಿದರು. ಫೆಬ್ರವರಿ 24 ರಂದು ರಷ್ಯಾದಿಂದ ದಾಳಿಗೊಳಗಾದ ಉಕ್ರೇನ್ ದೇಶದಲ್ಲಿ ಹೆಚ್ಚುತ್ತಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಇಬ್ಬರೂ ತೀವ್ರ ಕಳವಳ ವ್ಯಕ್ತಪಡಿಸಿದರು. ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಮುಂದುವರಿಸಬೇಕು ಮತ್ತು ವಿಷಯವನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಬುಕಾದಲ್ಲಿ ಏನಾಯಿತು ಎಂಬುದರ ಬಗ್ಗೆ ಭಾರತೀಯರು ತಮ್ಮದೇ ಆದ ರೀತಿಯಲ್ಲಿ ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಈಗಾಗಲೇ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಹಲವಾರು ಬಾರಿ ಮಧ್ಯಪ್ರವೇಶಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಭಾರತವು ಶಾಂತಿಯನ್ನು ಬಯಸುತ್ತದೆ ಮತ್ತು ರಷ್ಯನ್ನರು ಉಕ್ರೇನ್‌ನಿಂದ ಹೊರಬರಲು ಬಯಸುತ್ತಾರೆ. ಭಾರತವು ರಷ್ಯಾದೊಂದಿಗೆ ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಅದನ್ನು ನಾವು ಗೌರವಿಸುತ್ತೇವೆ ಮತ್ತು ಅರ್ಥಮಾಡಿಕೊಳ್ಳುತ್ತೇವೆ ಎಂದು ಯುಕೆ ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: ಇಂಡೋ-ಪೆಸಿಫಿಕ್ ಪ್ರದೇಶವನ್ನು ನಿರಂಕುಶಾಧಿಕಾರದ ಬೆದರಿಕೆಗಳಿಂದ ಮುಕ್ತಗೊಳಿಸಬೇಕು: ಯುಕೆ ಪ್ರಧಾನಿ ಬೋರಿಸ್ ಜಾನ್ಸನ್

Published On - 5:37 pm, Fri, 22 April 22