ದೆಹಲಿ ಮಾರ್ಚ್ 26: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವಿಶ್ಲೇಷಣೆಯ ಪ್ರಕಾರ ಲೋಕಸಭೆಯಲ್ಲಿ (Lok Sabha) ಪ್ರತಿನಿಧಿಸುವ ಎಲ್ಲಾ ರಾಜಕೀಯ ಪಕ್ಷಗಳಲ್ಲಿ, ತೆಲುಗು ದೇಶಂ ಪಕ್ಷದ (TDP) ಸಂಸದರು (MPs) 17 ನೇ ಲೋಕಸಭೆಯಲ್ಲಿ ಅತ್ಯಧಿಕ ಸರಾಸರಿ ಹಾಜರಾತಿಯನ್ನು ಹೊಂದಿದ್ದಾರೆ. ಕಡಿಮೆ ಸರಾಸರಿ ಹಾಜರಾತಿ ಆಮ್ ಆದ್ಮಿ ಪಕ್ಷದ (AAP) ಸಂಸದರದ್ದು. 17ನೇ ಲೋಕಸಭೆಯು ಇಲ್ಲಿಯವರೆಗಿನ ಎಲ್ಲಾ ಪೂರ್ಣಾವಧಿಯ ಲೋಕಸಭೆಗಳಲ್ಲಿ ಅತ್ಯಂತ ಕಡಿಮೆ ಅಧಿವೇಶನಗಳನ್ನು ಕಂಡಿದೆ. ಹಿಂದಿನ ನಾಲ್ಕು ಲೋಕಸಭೆಗಳು ಮಾತ್ರ ಕಡಿಮೆ ಅಧಿವೇಶನಗಳನ್ನು ಹೊಂದಿದ್ದವು. ಆದರೆ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಮೊದಲು ಇವುಗಳನ್ನು ವಿಸರ್ಜಿಸಲಾಯಿತು.
ಉಪಸಭಾಪತಿ ಆಯ್ಕೆಯಾಗದ ಮೊದಲ ಲೋಕಸಭೆಯೂ ಇದಾಗಿದೆ. ಭಾರತೀಯ ಸಂವಿಧಾನದ 93 ನೇ ವಿಧಿಯು ಲೋಕಸಭೆಯು ಸ್ಪೀಕರ್ ಮತ್ತು ಉಪಸಭಾಪತಿಯನ್ನು “ಆದಷ್ಟು ಬೇಗ” ಆಯ್ಕೆ ಮಾಡಬೇಕು ಎಂದು ಹೇಳುತ್ತದೆ.
521 ಹಾಲಿ ಸದಸ್ಯರು, ಮಾಜಿ ಸದಸ್ಯರು ಮತ್ತು ಆಂಗ್ಲೋ-ಇಂಡಿಯನ್ ನಾಮನಿರ್ದೇಶಿತ ಸದಸ್ಯರ ಕಾರ್ಯಕ್ಷಮತೆ ಮತ್ತು ಹಾಜರಾತಿಯನ್ನು ಆಧರಿಸಿ ಎಡಿಆರ್ ಮಂಗಳವಾರ ’17ನೇ ಲೋಕಸಭೆಯಲ್ಲಿ ಸಂಸದರ ಕಾರ್ಯಕ್ಷಮತೆಯ ವಿಶ್ಲೇಷಣೆ’ ಬಿಡುಗಡೆ ಮಾಡಿದೆ. ಒಟ್ಟು 273 ರಲ್ಲಿ ಟಿಡಿಪಿಯ ಮೂವರು ಸಂಸದರು, ಗುಂಟೂರಿನ ಜಯದೇವ್ ಗಲ್ಲಾ, ವಿಜಯವಾಡದಿಂದ ಕೇಸಿನೇನಿ ಶ್ರೀನಿವಾಸ್ ಮತ್ತು ಶ್ರೀಕಾಕುಲಂನಿಂದ ರಾಮ್ ಮೋಹನ್ ನಾಯ್ಡು ಕಿಂಜರಾಪು ಸರಾಸರಿ 229 ಕಲಾಪಗಳಿಗೆ ಹಾಜರಾಗಿದ್ದಾರೆ ಎಂದು ವಿಶ್ಲೇಷಣೆ ತೋರಿಸಿದೆ.
ಟಿಡಿಪಿ ನಂತರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಜನತಾ ದಳ (ಯುನೈಟೆಡ್) ಸಂಸದರು ಅನುಕ್ರಮವಾಗಿ 226 ಮತ್ತು 218 ಕಲಾಪಗಳಿಗೆ ಹಾಜರಾಗಿದ್ದಾರೆ. ಸಿಪಿಐ(ಎಂ) ಮೂರು ಲೋಕಸಭಾ ಸಂಸದರನ್ನು ಹೊಂದಿದೆ. ಅದೇ ವೇಲೆ ಜೆಡಿಯು 16 ಸಂಸದರನ್ನು ಹೊಂದಿದೆ.
ಎಲ್ಲಾ ಪಕ್ಷಗಳಿಂದ ಸರಾಸರಿ 559 ಸಂಸದರು (ಉಪಚುನಾವಣೆಗಳಲ್ಲಿ ಲೋಕಸಭೆಗೆ ಆಯ್ಕೆಯಾದವರು ಸೇರಿದಂತೆ) 189 ಅಧಿವೇಶನಗಳಿಗೆ ಹಾಜರಾಗಿದ್ದಾರೆ. ಎಎಪಿ ಸಂಸದರು ಅತ್ಯಂತ ಕಡಿಮೆ ಸರಾಸರಿ ಹಾಜರಾತಿ ಹೊಂದಿದ್ದಾರೆ ಎಂದು ಡೇಟಾ ತೋರಿಸಿದೆ.
ಸಮೀಕ್ಷೆಗಾಗಿ ಪರಿಗಣಿಸಲಾದ ಪಕ್ಷದ ಇಬ್ಬರು ಸಂಸದರು, ಸಂಗ್ರೂರ್‌ನಿಂದ ಭಗವಂತ್ ಮಾನ್ ಮತ್ತು ಜಲಂಧರ್‌ನಿಂದ ಸುಶೀಲ್ ಕುಮಾರ್ ರಿಂಕು ಅವರು 17 ನೇ ಲೋಕಸಭೆಯಲ್ಲಿ ಸರಾಸರಿ 273 ರಲ್ಲಿ 57 ಕಲಾಪಗಳಿಗೆ ಹಾಜರಾಗಿದ್ದರು.
Analysis of Performance of MPs in the 17th Lok Sabha#ADRReport: https://t.co/Xovnff8BTt#Elections2024 #LokSabhaElections2024 pic.twitter.com/AdEtLDhpek
— ADR India & MyNeta (@adrspeaks) March 26, 2024
ಶಿರೋಮಣಿ ಅಕಾಲಿದಳ (SAD) ಸರಾಸರಿ 87 ಮತ್ತು ಸಮಾಜವಾದಿ ಪಕ್ಷ (SP) 126 ಸಿಟ್ಟಿಂಗ್‌ಗಳನ್ನು ಹೊಂದಿದೆ. ಎಸ್ಎಡಿ ಬಟಿಂಡಾದಿಂದ ಹರ್ಸಿಮ್ರತ್ ಕೌರ್ ಬಾದಲ್, ಸಂಗ್ರೂರ್‌ನಿಂದ ಸಿಮ್ರಂಜಿತ್ ಸಿಂಗ್ ಮಾನ್ ಮತ್ತು ಫಿರೋಜ್‌ಪುರದಿಂದ ಸುಖಬೀರ್ ಸಿಂಗ್ ಬಾದಲ್ ಎಂಬ ಮೂವರು ಸಂಸದರನ್ನು ಹೊಂದಿದೆ. ಸಂಗ್ರೂರ್ ಸ್ಥಾನವು ಖಾಲಿಯಾದ ನಂತರ ಸಿಮ್ರಂಜಿತ್ ಸಂಸತ್ತಿಗೆ ಆಯ್ಕೆಯಾಗಿದ್ದರು.
ಎಸ್ಪಿಯ ಆರು ಸಂಸದರನ್ನು ವಿಶ್ಲೇಷಣೆಗೆ ಪರಿಗಣಿಸಲಾಗಿದೆ. ಅವರೆಂದರೆ ಸಂಭಾಲ್‌ನಿಂದ ಶಫೀಕರ್ ರೆಹಮಾನ್ ಬಾರ್ಕ್, ಮೊರಾದಾಬಾದ್‌ನಿಂದ ಎಸ್‌ಟಿ ಹಸನ್, ಮೈನ್‌ಪುರಿಯಿಂದ ಮುಲಾಯಂ ಸಿಂಗ್ ಯಾದವ್, ಮೈನ್‌ಪುರಿಯಿಂದ ಡಿಂಪಲ್ ಯಾದವ್, ಅಜಂಗಢದಿಂದ ಅಖಿಲೇಶ್ ಯಾದವ್ ಮತ್ತು ರಾಂಪುರದಿಂದ ಮೊಹಮ್ಮದ್ ಅಜಮ್ ಖಾನ್. ಬಾರ್ಕ್ ಈ ವರ್ಷದ ಫೆಬ್ರವರಿಯಲ್ಲಿ 94 ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
ಏತನ್ಮಧ್ಯೆ, ಮಾರ್ಚ್ 2022 ರಲ್ಲಿ ರಾಜ್ಯ ವಿಧಾನಸಭೆಗೆ ಚುನಾಯಿತರಾದ ನಂತರ ಆಜಂ ಖಾನ್ ಅವರು ತಮ್ಮ ರಾಂಪುರ ಸ್ಥಾನ ತೊರೆಯಬೇಕಾಗಿ ಬಂದಿತ್ತು. ದ್ವೇಷ ಭಾಷಣದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಅವರನ್ನು ನಂತರ ಶಾಸಕರಾಗಿ ಅನರ್ಹಗೊಳಿಸಲಾಯಿತು. ಅಕ್ಟೋಬರ್ 10, 2022 ರಂದು ಮುಲಾಯಂ ಯಾದವ್ ಅವರ ಮರಣದ ನಂತರ ಮೈನ್‌ಪುರಿ ಸ್ಥಾನವು ಖಾಲಿಯಾಯಿತು. ಡಿಂಪಲ್ ಯಾದವ್ ನಂತರ ಆ ವರ್ಷದ ಡಿಸೆಂಬರ್‌ನಲ್ಲಿ ಸ್ಥಾನದಿಂದ ಆಯ್ಕೆಯಾದರು.
ಬಿಜೆಪಿ 306 ಸಂಸದರು 17 ನೇ ಲೋಕಸಭೆಯ 191 ಸಭೆಗಳಿಗೆ ಹಾಜರಾಗಿದ್ದಾರೆ ಎಂದು ವಿಶ್ಲೇಷಣೆ ತೋರಿಸಿದೆ. ಕಾಂಗ್ರೆಸ್ ಪಕ್ಷದ ಐವತ್ನಾಲ್ಕು ಸಂಸದರು ಸರಾಸರಿ 206 ಸಭೆಗಳಿಗೆ ಹಾಜರಾಗಿದ್ದರು. 17 ನೇ ಲೋಕಸಭೆಯ ಅಧಿವೇಶನಗಳು ಜೂನ್ 17, 2019 ಮತ್ತು ಫೆಬ್ರವರಿ 10, 2024 ರ ನಡುವೆ ನಡೆದವು. ಎಲ್ಲಾ ಅಧಿವೇಶನಗಳಲ್ಲಿ, ಲೋಕಸಭೆಯಲ್ಲಿ ಒಟ್ಟು 240 ಮಸೂದೆಗಳನ್ನು ಮಂಡಿಸಲಾಯಿತು. ಈ ಪೈಕಿ 222 ಅಂಗೀಕಾರಗೊಂಡಿದ್ದು, 11 ಮಸೂದೆಗಳನ್ನು ಹಿಂಪಡೆಯಲಾಗಿದ್ದು, 6 ಮಸೂದೆಗಳು ಬಾಕಿ ಉಳಿದಿವೆ. 1 ಮಸೂದೆಗೆ ಒಪ್ಪಿಗೆ ನೀಡಲಾಗಿದೆ.
ಇದನ್ನೂ ಓದಿ: Ravneet Singh Bittu: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಲುಧಿಯಾನ ಸಂಸದ ರವನೀತ್ ಸಿಂಗ್ ಬಿಟ್ಟೂ
ಸಂಸದರು ಹೆಚ್ಚಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸಂಬಂಧಿಸಿದ 6602 ಪ್ರಶ್ನೆಗಳನ್ನು ಕೇಳಿದ್ದಾರೆ. ಕೃಷಿ ಮತ್ತು ರೈತರ ಕಲ್ಯಾಣ ವಿಷಯ ಬಗ್ಗೆ 4642, ರೈಲ್ವೆ ಬಗ್ಗೆ 4317 ಪ್ರಶ್ನೆ, ಹಣಕಾಸು ಬಗ್ಗೆ 4122 ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ 3359 ಪ್ರಶ್ನೆಗಳನ್ನು ಕೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ