17 ವರ್ಷಗಳ ನಂತರ ನೈಜೀರಿಯಾಕ್ಕೆ , 50 ವರ್ಷಗಳ ನಂತರ ಗಯಾನಾಕ್ಕೆ, ಮೂರು ದೇಶಕ್ಕೆ ಪ್ರಧಾನಿ ಮೋದಿ ಪ್ರವಾಸ
ಪ್ರಧಾನಿ ಮೋದಿ ಅವರು ಇಂದಿನಿಂದ ಮೂರು ದೇಶಗಳಿಗೆ ಪ್ರವಾಸ ಮಾಡಲಿದ್ದಾರೆ. ಮೂಲಕ ವಿದೇಶದಲ್ಲಿ ಭಾರತದ ಮಹತ್ವ ಹಾಗೂ ಅವರೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಕೆಲಸವನ್ನು ಮೋದಿ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರ ಈ ಭೇಟಿ ಬಹಳ ಪ್ರಮುಖವಾಗಿದ್ದು, ಹಾಗೂ ತುಂಬಾ ವಿಶೇಷವಾಗಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ಇಂದಿನಿಂದ ಮೂರು ದೇಶಗಳಿಗೆ ಪ್ರವಾಸ ಮಾಡಲಿದ್ದಾರೆ. ಮೋದಿ ಅವರ ಮೊದಲ ಭೇಟಿ ನೈಜೀರಿಯಾಕ್ಕೆ ಅಲ್ಲಿಂದ ಬ್ರೆಜಿಲ್, ನಂತರ ಗಯಾನಾಕ್ಕೆ ಹೋಗಲಿದ್ದಾರೆ. ಪ್ರಧಾನಿ ಮೋದಿ ಅವರು ನವೆಂಬರ್ 16-17 ರಂದು ನೈಜೀರಿಯಾಕ್ಕೆ ಪ್ರವಾಸ ಕೈಗೊಂಡಿದ್ದಾರೆ. ನೈಜೀರಿಯಾದ ನಂತರ ಪ್ರಧಾನಿ ಮೋದಿ ಬ್ರೆಜಿಲ್ ತಲುಪಲಿದ್ದು, ಅಲ್ಲಿ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಗಯಾನಾಗೆ ತೆರಳಲಿದ್ದಾರೆ.
ಪ್ರಧಾನಿ ಮೋದಿಯವರ ನೈಜೀರಿಯಾ ಭೇಟಿ ಹಲವು ವಿಚಾರಗಳನ್ನು ಅಲ್ಲಿ ಅಧ್ಯಕ್ಷ ಜತೆಗೆ ಚರ್ಚಿಸಲಿದ್ದಾರೆ. ಇನ್ನು ನೈಜೀರಿಯಾ ಭೇಟಿ ಮೋದಿ ಹಾಗೂ ಭಾರತಕ್ಕೆ ವಿಶೇಷವಾಗಿದೆ. ಏಕೆಂದರೆ 17 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಮೊದಲ ಭಾರೀ ಭೇಟಿ ನೀಡುತ್ತಿದ್ದಾರೆ. 2007ರ ಅಕ್ಟೋಬರ್‌ನಲ್ಲಿ ಮನಮೋಹನ್ ಸಿಂಗ್ ನೈಜೀರಿಯಾಕ್ಕೆ ಭೇಟಿ ನೀಡಿದ್ದರು. ಆ ಬಳಿಕ ಇದೇ ಮೊದಲ ಭಾರೀ ಮೋದಿ ಅವರು ಭೇಟಿ ನೀಡುತ್ತಿದ್ದಾರೆ.
An action packed visit begins!
PM @narendramodi emplanes on a 3 nation visit to Nigeria, Brazil and Guyana.
On the first leg of his visit, PM will be visiting Nigeria, which is the first visit by an Indian PM to 🇳🇬 in 17 years. In Brazil, PM will be participating in the G20… pic.twitter.com/MdE4jbsemU
— Randhir Jaiswal (@MEAIndia) November 16, 2024
ಇನ್ನು ಗಯಾನಾದಲ್ಲಿ ನಡೆಯಲಿರುವ CARICOM-India ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಇದು ಕೂಡ ತುಂಬಾ ವಿಶೇಷವಾಗಲಿದೆ. ಹೌದು ಏಕೆಂದರೆ 50 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ: ‘ಭಯೋತ್ಪಾದಕರು ಈಗ ತಮ್ಮ ಮನೆಗಳಲ್ಲಿ ಅಸುರಕ್ಷಿತರಾಗಿದ್ದಾರೆ’; ಪ್ರಧಾನಿ ಮೋದಿ
ಪ್ರಧಾನಿ ಮೋದಿ ಭೇಟಿಯ ಕೆಲವು ವಿಶೇಷ ಸಂಗತಿಗಳು
- ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ನೈಜೀರಿಯಾಕ್ಕೆ ಭೇಟಿ ನೀಡುತ್ತಿದ್ದಾರೆ. ಇದು ಪ್ರಧಾನಿ ಮೋದಿಯವರ ಮೊದಲ ನೈಜೀರಿಯಾ ಭೇಟಿಯಾಗಿದೆ. ಪಶ್ಚಿಮ ಆಫ್ರಿಕಾ ಪ್ರದೇಶದಲ್ಲಿ ನೈಜೀರಿಯಾ ಭಾರತದ ನಿಕಟ ಸಂಬಂಧವನ್ನು ಹೊಂದಿದೆ. ನನ್ನ ಭೇಟಿಯು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ಪಾಲುದಾರಿಕೆಯು ಪ್ರಜಾಪ್ರಭುತ್ವ ಮತ್ತು ಬಹುತ್ವದಲ್ಲಿ ಹಂಚಿಕೊಂಡ ನಂಬಿಕೆಯನ್ನು ಆಧರಿಸಿದೆ ಎಂದು ಮೋದಿ ಹೇಳಿದ್ದಾರೆ.
- ಹಿಂದಿಯಲ್ಲಿ ನನಗೆ ಆತ್ಮೀಯ ಸ್ವಾಗತ ಸಂದೇಶಗಳನ್ನು ಕಳುಹಿಸಿರುವ ಭಾರತೀಯ ಸಮುದಾಯ ಮತ್ತು ನೈಜೀರಿಯಾದ ಸ್ನೇಹಿತರನ್ನು ಭೇಟಿಯಾಗಲು ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.
- ಇದೇ ವೇಳೆ ಬ್ರೆಜಿಲ್‌ನಲ್ಲಿ ನಡೆಯಲಿರುವ 19ನೇ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಕಳೆದ ವರ್ಷ ಜಿ-20 ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಲಾಗಿತ್ತು. ಇದೀಗ ಈ ಪದ್ಧತಿಯನ್ನು ಬ್ರೆಜಿಲ್ ಪಡೆದುಕೊಂಡಿದೆ. ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಲವು ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
- ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ. 50 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ.ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಆಧರಿಸಿದ ನಮ್ಮ ಅನನ್ಯ ಸಂಬಂಧಕ್ಕೆ ಕಾರ್ಯತಂತ್ರದ ನಿರ್ದೇಶನವನ್ನು ನೀಡುವ ಕುರಿತು ನಾವು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ