‘ಭಯೋತ್ಪಾದಕರು ಈಗ ತಮ್ಮ ಮನೆಗಳಲ್ಲಿ ಅಸುರಕ್ಷಿತರಾಗಿದ್ದಾರೆ’; ಪ್ರಧಾನಿ ಮೋದಿ

ಖಾಸಗಿ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಭಯೋತ್ಪಾದನೆಯ ಬಗ್ಗೆ ಮಾತನಾಡಿದ್ದಾರೆ. ಈಗ ಭಯೋತ್ಪಾದಕರು ತಮ್ಮ ಮನೆಗಳಲ್ಲಿ ಅಸುರಕ್ಷಿತರಾಗಿದ್ದಾರೆ. ಕಾಲ ಬದಲಾಗಿದೆ ಎಂದಿದ್ದಾರೆ.

'ಭಯೋತ್ಪಾದಕರು ಈಗ ತಮ್ಮ ಮನೆಗಳಲ್ಲಿ ಅಸುರಕ್ಷಿತರಾಗಿದ್ದಾರೆ'; ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
ಸುಷ್ಮಾ ಚಕ್ರೆ
|

Updated on: Nov 16, 2024 | 2:33 PM

ನವದೆಹಲಿ: “ಹಿಂದಿನ ಸರ್ಕಾರಗಳು ವೋಟ್ ಬ್ಯಾಂಕ್‌ಗಳ ಮೇಲೆ ಗಮನ ಕೇಂದ್ರೀಕರಿಸಿದ್ದವು. ಆದರೆ, ನಾವು ಜನರ ನಂಬಿಕೆಯನ್ನು ಪುನಃಸ್ಥಾಪಿಸಿದ್ದೇವೆ. ಅನೇಕ ದೇಶಗಳಲ್ಲಿ ಪ್ರತಿ ಚುನಾವಣೆಗೂ ಸರ್ಕಾರಗಳು ಬದಲಾಗುತ್ತವೆ. ಆದರೆ ಭಾರತದ ಜನರು ಮೂರನೇ ಬಾರಿಗೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಹಿಂದಿನ ಸರ್ಕಾರಗಳು ಚುನಾವಣೆಗಳನ್ನು ಗೆಲ್ಲಲು ಮತ್ತು ವೋಟ್ ಬ್ಯಾಂಕ್ ರಾಜಕೀಯದ ಕಡೆ ಗಮನಹರಿಸಿದರೆ, ನಾವು ಸರ್ಕಾರದ ಮೇಲೆ ಜನರ ನಂಬಿಕೆ ಉಳಿಸಿಕೊಳ್ಳಲು ಶ್ರಮಿಸಿದ್ದೇವೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದೇ ವೇಳೆ ಮುಂಬೈನಲ್ಲಿ 26/11 ಭಯೋತ್ಪಾದಕ ದಾಳಿಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಆ ಸಮಯದಲ್ಲಿ ಭಯೋತ್ಪಾದನೆಯು ಭಾರತದ ಜನರನ್ನು ಅಸುರಕ್ಷಿತರನ್ನಾಗಿಸುತ್ತಿತ್ತು. ಆದರೆ, ಭಯೋತ್ಪಾದಕರು ಈಗ ತಮ್ಮ ಮನೆಗಳಲ್ಲಿ ಅಸುರಕ್ಷಿತ ಭಾವನೆ ಹೊಂದಿದ್ದಾರೆ. ಹೀಗಾಗಿ, ಈಗ ಸಮಯ ಬದಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆದಿವಾಸಿಗಳ ಸಮಸ್ಯೆ ತಿಳಿಯಲು ಕಾಲ್ನಡಿಗೆಯಲ್ಲೇ ಪ್ರಯಾಣಿಸಿದ್ದರು ಮೋದಿ

ಹಿಂದುಸ್ತಾನ್ ಟೈಮ್ಸ್ ಲೀಡರ್​ಶಿಪ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಿಂದಿನ ಸರಕಾರಗಳು ವೋಟ್‌ ಬ್ಯಾಂಕ್‌ ರಾಜಕೀಯಕ್ಕೆ ತಕ್ಕಂತೆ ನೀತಿಗಳನ್ನು ರೂಪಿಸುತ್ತಿದ್ದರೆ, ಈಗಿನ ಸರ್ಕಾರವು ಸರ್ಕಾರದ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಿದೆ ಎಂದು ಹೇಳಿದ್ದಾರೆ.

ಇಂದು ಭಾರತವು ಅಭೂತಪೂರ್ವ ಆಕಾಂಕ್ಷೆಗಳಿಂದ ತುಂಬಿದೆ. ನಾವು ಈ ಆಕಾಂಕ್ಷೆಗಳನ್ನು ನಮ್ಮ ನೀತಿಗಳ ಮೂಲಾಧಾರವಾಗಿಸಿದ್ದೇವೆ. ನಮ್ಮ ಸರ್ಕಾರವು ಜನರ, ಜನರಿಂದ ಮತ್ತು ಜನರಿಗಾಗಿ ಪ್ರಗತಿಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ಸ್ವಾತಂತ್ರ್ಯಾ ನಂತರ 70 ವರ್ಷಗಳಲ್ಲಿ ನೀಡಿದ್ದಕ್ಕಿಂತ ಹೆಚ್ಚು ಗ್ಯಾಸ್ ಸಂಪರ್ಕಗಳನ್ನು ಕಳೆದ 10 ವರ್ಷಗಳಲ್ಲಿ ನೀಡಿದ್ದೇವೆ. ಜನರಿಗಾಗಿ ಹೆಚ್ಚು ಖರ್ಚು ಮಾಡುವುದು, ಜನರಿಗಾಗಿ ಹೆಚ್ಚು ಉಳಿಸುವುದು ನಮ್ಮ ಸರ್ಕಾರದ ವಿಧಾನವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ

ಭಾರತ ದೇಶವು ಈಗ 1.25 ಲಕ್ಷಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್‌ಅಪ್‌ಗಳನ್ನು ಹೊಂದಿದೆ. ಯುವಕರು ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಲು ಉತ್ಸುಕರಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು