
ನವದೆಹಲಿ, ಅಕ್ಟೋಬರ್ 27: ಬಿಹಾರದ ನಂತರ ಚುನಾವಣಾ ಆಯೋಗವು (Election Commission) ಭಾರತದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ SIR (ಮತದಾರರ ಪಟ್ಟಿ ಪರಿಷ್ಕರಣೆ) ಅನ್ನು ಘೋಷಿಸಿದೆ. SIR ಪ್ರಕ್ರಿಯೆಯ ಅಡಿಯಲ್ಲಿ ಬರುವ 12 ರಾಜ್ಯಗಳು ಮತ್ತು ಕೇಂದ್ರಡಾಳಿತ ಪ್ರದೇಶಗಳ ಮತದಾರರ ಪಟ್ಟಿಯನ್ನು ಇಂದು ರಾತ್ರಿ ಸ್ಥಗಿತಗೊಳಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಮತದಾರರ ಪಟ್ಟಿಯ ಪ್ಯಾನ್-ಇಂಡಿಯಾ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಇತ್ತೀಚೆಗೆ ಬಿಹಾರದಲ್ಲಿ ಮುಕ್ತಾಯಗೊಂಡಿದೆ. ಅಲ್ಲಿ ಮುಂದಿನ ತಿಂಗಳು ವಿಧಾನಸಭಾ ಚುನಾವಣೆಗಳು ನಡೆಯಲಿವೆ. SIRನ ಎರಡನೇ ಹಂತದಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿರಲಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಎರಡನೇ ಹಂತದ SIR ಅಡಿಯಲ್ಲಿ ಬರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ ಇಲ್ಲಿದೆ.
#WATCH | CEC Gyanesh Kumar announces the schedule of phase 2 of SIR (Special Intensive Revision) to be carried out in 12 States/UTs.
Printing/Training – 28th Oct to 3rd Nov 2025
House to House Enumeration Phase – 4th Nov to 4th Dec 2025
Publication of Draft Electoral Rolls -… pic.twitter.com/TZgHoU1E4g— ANI (@ANI) October 27, 2025
ಮುದ್ರಣ/ತರಬೇತಿ – 2025ರ ಅಕ್ಟೋಬರ್ 28ರಿಂದ ನವೆಂಬರ್ 3ರವರೆಗೆ
ಮನೆ ಮನೆಗೆ ಗಣತಿ – ನವೆಂಬರ್ 4ರಿಂದ ಡಿಸೆಂಬರ್ 4ರವರೆಗೆ
ಕರಡು ಮತದಾರರ ಪಟ್ಟಿಯ ಪ್ರಕಟಣೆ – ಡಿಸೆಂಬರ್ 9
ಹಕ್ಕುಗಳು ಮತ್ತು ಆಕ್ಷೇಪಣೆಯ ಅವಧಿ – ಡಿಸೆಂಬರ್ 9ರಿಂದ 2026ರ ಜನವರಿ 8ರವರೆಗೆ
ಸೂಚನೆ ಹಂತ (ವಿಚಾರಣೆ ಮತ್ತು ಪರಿಶೀಲನೆ) – ಡಿಸೆಂಬರ್ 9ರಿಂದ 2026ರ ಜನವರಿ 31ರವರೆಗೆ
ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ – 2026ರ ಫೆಬ್ರವರಿ 7
ಇದನ್ನೂ ಓದಿ: ECI Press Conference Live: ದೇಶಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಬಗ್ಗೆ ಚುನಾವಣಾ ಆಯೋಗ ಸುದ್ದಿಗೋಷ್ಠಿ
9 ರಾಜ್ಯಗಳು:
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಗೋವಾ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್, ಕೇರಳ ಮತ್ತು ರಾಜಸ್ಥಾನ.
3 ಕೇಂದ್ರಾಡಳಿತ ಪ್ರದೇಶಗಳು:
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಪುದುಚೇರಿ.
VIDEO | Delhi: Addressing a press conference, Chief Election Commissioner Gyanesh Kumar says, “The 12 states and UTs where the Special Intensive Revision (SIR) will begin from tomorrow are Andaman and Nicobar Islands, Goa, Puducherry, Chhattisgarh, Gujarat, Kerala, Madhya… pic.twitter.com/UPG82ID23f
— Press Trust of India (@PTI_News) October 27, 2025
ಇಂದು ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, “ಎರಡನೇ ಹಂತದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹೊಸ ಮತಗಟ್ಟೆಗಳನ್ನು ತೆರೆಯಲಾಗುವುದು. ರಾಜ್ಯಗಳ ಎಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಅಕ್ಟೋಬರ್ 29ರಂದು ರಾಜಕೀಯ ಪಕ್ಷಗಳನ್ನು ಭೇಟಿ ಮಾಡಿ SIR ಪ್ರಕ್ರಿಯೆಯ ಬಗ್ಗೆ ವಿವರಿಸಲು ನಿರ್ದೇಶಿಸಲಾಗಿದೆ” ಎಂದು ಹೇಳಿದ್ದಾರೆ.
Aadhaar card not proof of date of birth or domicile: CEC Gyanesh Kumar.
Aadhaar not proof of citizenship, but can be furnished as identity proof in SIR exercise: CEC Gyanesh Kumar.
Revision of electoral rolls in Assam to be announced separately: CEC Gyanesh Kumar.
Draft rolls… pic.twitter.com/QBCvdP2l4c
— Press Trust of India (@PTI_News) October 27, 2025
ರಾಜಕೀಯ ಪಕ್ಷಗಳು ಮತದಾರರ ಪಟ್ಟಿಗಳ ಗುಣಮಟ್ಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತುತ್ತಿರುವುದರಿಂದ ಪ್ರತಿ ಚುನಾವಣೆಗೂ ಮೊದಲು SIR ಅಗತ್ಯವಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ. “1951ರಿಂದ 2004ರವರೆಗೆ ಈಗಾಗಲೇ 8 ಬಾರಿ SIR ಮಾಡಲಾಗಿದೆ. ಕೊನೆಯ SIR ಅನ್ನು 21 ವರ್ಷಗಳ ಹಿಂದೆ 2002-2004ರಲ್ಲಿ ಮಾಡಲಾಯಿತು. ಪದೇ ಪದೇ ವಲಸೆ ಹೋಗುವುದರಿಂದ ಮತದಾರರ ಪಟ್ಟಿಯಲ್ಲಿ ಹಲವು ಬದಲಾವಣೆಗಳಾಗಿವೆ. ಇದರ ಪರಿಣಾಮವಾಗಿ ಮತದಾರರು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಾಯಿಸಿಕೊಳ್ಳುವುದು, ಡಿಲೀಟ್ ಆದ ಮತದಾರರನ್ನು ತೆಗೆದುಹಾಕದಿರುವುದು ಮತ್ತು ವಿದೇಶಿಯರ ನಮೂದನ್ನು ತಪ್ಪಾಗಿ ಸೇರಿಸುವುದು ಸಂಭವಿಸಿದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: PAN India SIR: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಎಂದರೇನು? ಅದರ ಪ್ರಾಮುಖ್ಯತೆ ಏನು?
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರತಿ ಮತಗಟ್ಟೆಗೆ ಒಬ್ಬ ಬೂತ್ ಮಟ್ಟದ ಅಧಿಕಾರಿ (BLO) ಇರುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರವು ಹಲವು ಮತಗಟ್ಟೆಗಳನ್ನು ಹೊಂದಿರುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಚುನಾವಣಾ ನೋಂದಣಿ ಅಧಿಕಾರಿ (ERO) ಇರುತ್ತಾರೆ. ERO ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಮಟ್ಟದ ಅಧಿಕಾರಿಯಾಗಿದ್ದು, ಅವರು ಕಾನೂನಿನ ಪ್ರಕಾರ ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ, ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುತ್ತಾರೆ ಮತ್ತು ನಿರ್ಧರಿಸುತ್ತಾರೆ. ಹಾಗೇ, ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ ಮತ್ತು ಪ್ರಕಟಿಸುತ್ತಾರೆ.
ಪ್ರತಿ ತಹಸಿಲ್‌ಗೆ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು (AEROಗಳು) ಇರುತ್ತಾರೆ. ERO ನಿರ್ಧಾರದ ವಿರುದ್ಧದ ಮೊದಲ ಮೇಲ್ಮನವಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಚಾರಣೆ ಮಾಡುತ್ತಾರೆ. ರಾಜ್ಯ/ ಕೇಂದ್ರಾಡಳಿತ ಪ್ರದೇಶದ CEO ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ನಿರ್ಧಾರದ ವಿರುದ್ಧದ 2ನೇ ಮೇಲ್ಮನವಿಯನ್ನು ವಿಚಾರಣೆ ಮಾಡುತ್ತಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Mon, 27 October 25