ತಮಿಳುನಾಡು: ವಿದ್ಯಾರ್ಥಿಗೆ ಹೊಡೆದಿದ್ದಕ್ಕೆ, ಶಿಕ್ಷರೊಬ್ಬರಿಗೆ ಚಪ್ಪಲಿಯಿಂದ ಥಳಿಸಿದ ಪೋಷಕರು
ವಿದ್ಯಾರ್ಥಿಗೆ ಹೊಡೆದಿದ್ದಕ್ಕೆ ಪೋಷಕರು ಶಿಕ್ಷಕರನ್ನು ಚಪ್ಪಲಿಯಿಂದ ಥಳಿಸಿರುವ ಘಟನೆ ತಮಿಳುನಾಡಿನ ತಿರುವಳ್ಳೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿಗೆ ಹೊಡೆದಿದ್ದಕ್ಕೆ ಪೋಷಕರು ಶಿಕ್ಷಕರನ್ನು ಚಪ್ಪಲಿಯಿಂದ ಥಳಿಸಿರುವ ಘಟನೆ ತಮಿಳುನಾಡಿನ ತಿರುವಳ್ಳೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ. 6 ನೇ ತರಗತಿಯ ವಿದ್ಯಾರ್ಥಿಯ ಪೋಷಕರು ಮತ್ತು ಸಂಬಂಧಿಕರು ಶಿಕ್ಷಕರನ್ನು ಬರ್ಬರವಾಗಿ ಥಳಿಸಿ ಚಪ್ಪಲಿಯಿಂದ ಹೊಡೆದಿದ್ದಾರೆ. ವಿದ್ಯಾರ್ಥಿಗೆ ಹೊಡೆದ ಆರೋಪದ ಮೇಲೆ ಶಿಕ್ಷಕನ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ಘಟನೆಯನ್ನು ಬಹಿರಂಗಪಡಿಸಿದರೆ ಹೊರಹಾಕುವುದಾಗಿ ಬೆದರಿಕೆ ಹಾಕಲಾಗಿದೆ.
ಗುರುವರಾಜನ ಕಂಡಿಗೈ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಹರಿಹರನ್ ಸೋಮವಾರ ರಾತ್ರಿ 8 ಗಂಟೆಗೆ ಕೈಕಾಲು ಊದಿಕೊಂಡ ಸ್ಥಿತಿಯಲ್ಲಿ ಮನೆಗೆ ಮರಳಿದ್ದ. ವಿದ್ಯಾರ್ಥಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಬದಲು ಅಥವಾ ಮನೆಗೆ ಹೋಗಲು ಬಿಡದೆ ಸಂಜೆಯವರೆಗೂ ಶಾಲೆಯ ಆವರಣದಲ್ಲಿ ಇರಿಸಲಾಗಿತ್ತು ಎಂದು ಅವರು ಆರೋಪಿಸಿದರು.
ಮತ್ತಷ್ಟು ಓದಿ: 8ನೇ ಕ್ಲಾಸ್ ವಿದ್ಯಾರ್ಥಿನಿಗೆ ಪ್ರೇಮ ಪತ್ರ, ಮಗಳ ವಯಸ್ಸಿನ ಬಾಲಕಿಯನ್ನು ಮದ್ವೆಯಾಗುವ ಆಸೆ ವ್ಯಕ್ತಪಡಿಸಿದ ಶಿಕ್ಷಕ
ಊತಕ್ಕೆ ಐಸ್ ಪ್ಯಾಕ್ ನೀಡಿ ವಿಚಾರಿಸಿದಾಗ ವಿದ್ಯಾರ್ಥಿ ನಡೆದ ವಿಚಾರವನ್ನು ವಿವರಿಸಿದ್ದಾನೆ, ಒಂದೊಮ್ಮೆ ಈ ವಿಚಾರ ಕುರಿತು ಯಾರಿಗಾದರೂ ಮಾಹಿತಿ ನೀಡಿದ್ದಲ್ಲಿ ಶಾಲೆಯಿಂದ ಹೊರಹಾಕುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಶಿಕ್ಷಕ ಮೋಹನ್ ಬಾಬು ಬಾಲಕನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲೆಯ ಪ್ರಾಂಶುಪಾಲರು ಮೋಹನ್ ಬಾಬು ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ವಿದ್ಯಾರ್ಥಿಯ ಸಂಬಂಧಿಕರು ಅವರನ್ನು ಸುತ್ತುವರೆದು, ಅಮಾನುಷವಾಗಿ ಥಳಿಸಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೋಹನ್ ಬಾಬು ಅವರನ್ನು ರಕ್ಷಿಸಿ ಜನರನ್ನು ಚದುರಿಸಿದರು. ಈ ಕುರಿತು ತನಿಖೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ