ಶಿಮ್ಲಾದಲ್ಲಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಟ್ರಕ್, ಇಬ್ಬರು ಸಾವು
ಶಿಮ್ಲಾ ಜಿಲ್ಲೆಯಲ್ಲಿ ವೇಗವಾಗಿ ಬಂದ ಟ್ರಕ್ ಪಲ್ಟಿಯಾಗಿ ಮತ್ತು ಬಹು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿಮ್ಲಾ ಜಿಲ್ಲೆಯ ಥಿಯೋಗ್ ಛೈಲಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಿಂತಿದ್ದ ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಟ್ರಕ್‌ಗೆ ನಾಲ್ಕೈದು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಶಿಮ್ಲಾ ಜಿಲ್ಲೆಯ ಥಿಯೋಗ್ ಛೈಲಾ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ನಂತರ ಟ್ರಕ್ ಪಲ್ಟಿಯಾಗಿದೆ ಎಂದು ಶಿಮ್ಲಾದ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಗಾಂಧಿ ತಿಳಿಸಿದ್ದಾರೆ.
ಶಿಮ್ಲಾ ಜಿಲ್ಲೆಯ ಥಿಯೋಗ್-ಛೈಲಾ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಎಎನ್‌ಐ ವರದಿ ಮಾಡಿದೆ. ಅಪಘಾತದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ.
ಮತ್ತಷ್ಟು ಓದಿ: ವಿಜಯಪುರ: ಪತಿ ಜೊತೆ ಬೈಕ್ ಹಿಂಬದಿಯಲ್ಲಿ ಕುಳಿತುಕೊಂಡು ಹೋಗುತ್ತಿದ್ದ ಮಹಿಳೆ ಏಕಾಏಕಿ ಕೆಳಗೆ ಬಿದ್ದು ಸಾವು
ಶಿಮ್ಲಾ ಜಿಲ್ಲೆಯ ಥಿಯೋಗ್ ಛೈಲಾ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ನಂತರ ಟ್ರಕ್ ಪಲ್ಟಿಯಾಗಿದೆ ಎಂದು ಶಿಮ್ಲಾದ ಪೊಲೀಸ್ ಅಧೀಕ್ಷಕ ಸಂಜೀವ್ ಕುಮಾರ್ ಗಾಂಧಿ ಅವರು ಎಎನ್‌ಐಗೆ ತಿಳಿಸಿದ್ದಾರೆ.
ಟ್ರಕ್ ನರಕಂದದಿಂದ ರಾಜ್‌ಗಢ-ಸೋಲನ್ ಮೂಲಕ ಹಿಮಾಚಲದ ಹೊರಗಿನ ಮಾರುಕಟ್ಟೆಗೆ ತೆರಳುತ್ತಿತ್ತು, ಆದರೆ ಚಾಲಕನ ದೋಷದಿಂದಾಗಿ ಅದು ತಪ್ಪಾಗಿ ಛೈಲಾ ಬಜಾರ್ ಕಡೆಗೆ ತಿರುಗಿತು. ಬ್ರೇಕ್ ಕೈಕೊಟ್ಟು ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:56 am, Wed, 9 August 23