ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ; ಹಿಂದೂ ದೇವರನ್ನು ಅಣಕಿಸಿದ್ದ ಅಜ್ಮೇರ್​​ ಚಿಸ್ತಿ ಮಗ ಆದಿಲ್​​ ಯೂ ಟರ್ನ್

| Updated By: ರಶ್ಮಿ ಕಲ್ಲಕಟ್ಟ

Updated on: Jul 14, 2022 | 1:00 PM

ಭಗವಾನ್ ವಿಷ್ಣುವಿನ ಅವತಾರ ತರ್ಕಬದ್ಧವಲ್ಲದ್ದು. ಭಗವಾನ್ ಹನುಮಾನ್ ಅಥವಾ ಗಣೇಶನ ಅಸ್ತಿತ್ವವನ್ನು ನೂಪುರ್ ಶರ್ಮಾ ಯಾವ ರೀತಿ ಸಮರ್ಥಿಸಿಕೊಳ್ಳುತ್ತಾರೆ? ಹನುಮಾನ್ ಅಥವಾ ಗಣೇಶನ ಅಸ್ತಿತ್ವವನ್ನು ನೂಪುರ್ ಶರ್ಮಾ ಸಾಬೀತು ಮಾಡಲಿ ಎಂದು ಚಿಸ್ತಿ ಸವಾಲೆಸೆದಿದ್ದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ; ಹಿಂದೂ ದೇವರನ್ನು ಅಣಕಿಸಿದ್ದ ಅಜ್ಮೇರ್​​ ಚಿಸ್ತಿ ಮಗ ಆದಿಲ್​​ ಯೂ ಟರ್ನ್
ಸಯ್ಯದ್ ಆದಿಲ್ ಚಿಸ್ತಿ
Follow us on

ಜೈಪುರ್: ಹಿಂದೂ ದೇವರನ್ನು ಮತ್ತು ನಂಬಿಕೆಗಳನ್ನು ಅಣಕಿಸಿದ್ದ ಸರವರ ಚಿಸ್ತಿಯ ಮಗ ಸಯ್ಯದ್ ಆದಿಲ್ ಚಿಸ್ತಿ (Syed Aadil Chishti) ನಾನು ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಆ ಮಾತು ಹೇಳಿಲ್ಲ ಎಂದಿದ್ದಾರೆ. ನಾನು ನೂಪುರ್ ಶರ್ಮಾ (Nupur Sharma) ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದೆ ಅಷ್ಟೇ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ನನ್ನ ವಿಡಿಯೊವನ್ನು ಎಡಿಟ್ ಮಾಡಿ ಅದನ್ನು ಮಾಧ್ಯಮಗಳು ಪ್ರಸಾರ ಮಾಡಿವೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಚಿಸ್ತಿ  ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಅವರು 33 ಕೋಟಿ ಹಿಂದೂ ದೇವತೆಗಳ ಅಸ್ತಿತ್ವ ಬಗ್ಗೆ ಪ್ರಶ್ನಿಸಿದ್ದಾರೆ. ಭಗವಾನ್ ವಿಷ್ಣುವಿನ ಅವತಾರ ತರ್ಕಬದ್ಧವಲ್ಲದ್ದು. ಭಗವಾನ್ ಹನುಮಾನ್ ಅಥವಾ ಗಣೇಶನ ಅಸ್ತಿತ್ವವನ್ನು ನೂಪುರ್ ಶರ್ಮಾ ಯಾವ ರೀತಿ ಸಮರ್ಥಿಸಿಕೊಳ್ಳುತ್ತಾರೆ? ಹನುಮಾನ್ ಅಥವಾ ಗಣೇಶನ ಅಸ್ತಿತ್ವವನ್ನು ನೂಪುರ್ ಶರ್ಮಾ ಸಾಬೀತು ಮಾಡಲಿ ಎಂದು ಚಿಸ್ತಿ ಸವಾಲೆಸೆದಿದ್ದರು. ಅಜ್ಮೇರ್ ಶರೀಫ್ ದರ್ಗಾದ ಖಾದಿಮ್ ಸಯ್ಯದ್ ಸರವರ್ ಚಿಸ್ತಿ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ ಎರಡು ದಿನಗಳ ನಂತರ ಆದಿಲ್ ಚಿಸ್ತಿಯ ಈ ಹೇಳಿಕೆ ಬಂದಿದೆ. ಪ್ರವಾದಿ ಮೊಹಮ್ಮದ್​​ಗೆ ( Prophet Muhamad) ಅವಹೇಳನ ಮಾಡಿದರೆ ಇಡೀ ಭಾರತವೇ ನಡುಗುತ್ತದೆ, ಇದು ಶಿರಚ್ಛೇದ ಕೃತ್ಯಗಳಲ್ಲಿ ನಿಲ್ಲುವುದಿಲ್ಲ ಎಂದು ಅವರು ಹೇಳಿದ್ದರು. ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಇಬ್ಬರು ಮುಸ್ಲಿಮರು ಶಿರಚ್ಛೇದ ಮಾಡಿದ ಬೆನ್ನಲ್ಲೇ  ಚಿಸ್ತಿಯ ಈ ಹೇಳಿಕೆ ಬಂದಿತ್ತು.

ಪ್ರವಾದಿ ಮೊಹಮ್ಮದ್ ಗೆ ಅವಮಾನ ಮಾಡಿದರೆ ಮುಸ್ಲಿಮರು ಚಳವಳಿ ಆರಂಭಿಸುತ್ತಾರೆ ಇದು ಭಾರತವನ್ನು ನಡುಗಿಸುತ್ತದೆ ಎಂದು ಅಂಜುಮಾನ್ ಕಮಿಟಿಯ ಕಾರ್ಯದರ್ಶಿ ಆಗಿರುವ ಚಿಸ್ತಿ ಹೇಳಿದ್ದರು. ಸರವರ್ ಚಿಸ್ತಿ ಮತ್ತು ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಜ್ಮೇರ್ ಡೆಪ್ಯುಟಿ ಮೇಯರ್ ನೀರಜ್ ಜೈನ್ ಬುಧವಾರ ಹೇಳಿದ್ದಾರೆ.

ಇದನ್ನೂ ಓದಿ
Unparliamentary Words: ಲೋಕಸಭೆ ಸಚಿವಾಲಯದಿಂದ ಅಸಂಸದೀಯ ಪದಗಳ ಪಟ್ಟಿ ಬಿಡುಗಡೆ; ಈ ಪದಗಳನ್ನ ಬಳಕೆ ಮಾಡಿದರೆ ಕಲಾಪದಿಂದ ಹೊರಗೆ
ಸಾಹಿತಿ, ಕಾದಂಬರಿಕಾರ ಬಿಎಲ್ ವೇಣುಗೆ ಮತ್ತೆ ಜೀವ ಬೆದರಿಕೆ
ಹಿಂದೂ ಧರ್ಮವನ್ನು ಬಿಜೆಪಿ ಗುತ್ತಿಗೆ ತೆಗೆದುಕೊಂಡಿದೆಯೇ?: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್​: ಬೆದರಿಕೆ ಬಂದರೆ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಿ

ಪ್ರಚೋದನಾಕಾರಿ ಭಾಷಣ ಮಾಡಿದ ನಂತರ ಚಿಸ್ತಿ ರಾಜಸ್ಥಾನದಲ್ಲಿ ನಡೆದ ಶಾಂತಿ ಸಮಾಧಾನ ಬಯಸುವ  ರ್ಯಾಲಿಯಲ್ಲಿ ಭಾಗವಹಿಸಿದ್ದು ಹಿಂದೂ ಮತ್ತು ಮುಸ್ಲಿಮರು ಶಾಂತಿಯಿಂದ ಸಹಬಾಳ್ವೆ ನಡೆಸಬೇಕು ಎಂದು ಮನವಿ ಮಾಡಿದ್ದರು. ದೇಶದಲ್ಲಿ ಶಾಂತಿ ಮತ್ತು  ಸಾಮರಸ್ಯವನ್ನು ನೋಡಲು ನಾನು ಬಯಸುತ್ತೇನೆ. ಎರಡೂ ಸಮುದಾಯದ ಜನರು ಶಾಂತ, ಸಾಮರಸ್ಯದಿಂದ ಬಾಳಬೇಕು ಎಂದು ಅವರು ಹೇಳಿದ್ದರು.

Published On - 12:46 pm, Thu, 14 July 22