Unparliamentary Words: ಲೋಕಸಭೆ ಸಚಿವಾಲಯದಿಂದ ಅಸಂಸದೀಯ ಪದಗಳ ಪಟ್ಟಿ ಬಿಡುಗಡೆ; ಈ ಪದಗಳನ್ನ ಬಳಕೆ ಮಾಡಿದರೆ ಕಲಾಪದಿಂದ ಹೊರಗೆ
ದೋಹ್ರಾ ಚರಿತ್ರ, ನಿಕಮ್ಮ, ನೌಟಂಕಿ, ದಿಂಡೋರಾ ಪೀಟ್ನಾ, ಬೆಹ್ರಿ ಸರ್ಕಾರ್ ಸೇರಿ ಹಲವು ಪದಗಳನ್ನ ಬಳಸುವಂತಿಲ್ಲ ಎಂದು ಲೋಕಸಭೆಯ ಸೆಕ್ರೆಟರಿಯೇಟ್ ತಿಳಿಸಿದೆ.
ದೆಹಲಿ: 2022ನೇ ಸಾಲಿನ ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18 ರಿಂದ ಆರಂಭವಾಗಲಿದ್ದು, ಲೋಕಸಭೆ ಸಚಿವಾಲಯ (Lok Sabha Secretariat) ಅಸಂಸದೀಯ ಪದಗಳ (Unparliamentary Words) ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿರುವ ಅಸಂಸದೀಯ ಪದಗಳನ್ನ ಬಳಸಿದರೆ ಕಲಾಪದಿಂದ ಹೊರ ಹಾಕುವ ಎಚ್ಚರಿಕೆಯನ್ನೂ ನೀಡಿದೆ. ಜುಮ್ಲಜೀವಿ, ಬಾಲ್ ಬುದ್ಧಿ, ಕೊವಿಡ್ ಸ್ಪ್ರೆಡ್ಡರ್, ಸ್ನೂಪ್ಗೇಟ್, ಅರಾಜಕತಾವಾದಿ, ಶಕುನಿ, ಸರ್ವಾಧಿಕಾರಿ, ತಾನಶಾ, ತಾನಶಾಹಿ, ಜೈಚಂದ್, ವಿನಾಶ್ ಪುರುಷ, ಖಾಲಿಸ್ತಾನಿ, ಖೂನ್ ಸೆ ಖೇತಿ, ದೋಹ್ರಾ ಚರಿತ್ರ, ನಿಕಮ್ಮ, ನೌಟಂಕಿ, ದಿಂಡೋರಾ ಪೀಟ್ನಾ, ಬೆಹ್ರಿ ಸರ್ಕಾರ್ ಸೇರಿ ಹಲವು ಪದಗಳನ್ನ ಬಳಸುವಂತಿಲ್ಲ ಎಂದು ಲೋಕಸಭೆಯ ಸೆಕ್ರೆಟರಿಯೇಟ್ ತಿಳಿಸಿದೆ.
ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿರುವ ಪದಗಳನ್ನ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬಳಸುವಂತಿಲ್ಲ. ಹೀಗೆ ಶಾಸಕಾಂಗ ಸಂಸ್ಥೆಗಳಲ್ಲಿ ಕಾಲಕಾಲಕ್ಕೆ ಕೆಲವು ಪದಗಳನ್ನ ಅಸಂಸದೀಯವೆಂದು ಘೋಷಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಮಾಜಿ ಕಾರ್ಪೊರೇಟರ್ ನಜೀಮಾ ಪತಿ ಹತ್ಯೆ, ಆಸ್ಪತ್ರೆಗೆ ಭೇಟಿ ನೀಡಿದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್
ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 380 ರ ಪ್ರಕಾರ, ಕಲಾಪದ ಸಂದರ್ಭದಲ್ಲಿ ಅಸಂಸದೀಯ ಪದಗಳನ್ನು ಬಳಸಿದರೆ ಸ್ಪೀಕರ್, ಅವರನ್ನು ಕಲಾಪದಿಂದ ಹೊರ ಹಾಕುತ್ತಾರೆ. ಈ ಬಗ್ಗೆ ಬಿಡುಗಡೆಯಾಗಿರುವ ಟಿಪ್ಪಣಿಯಲ್ಲಿ ಸೇರಿಸಲಾಗಿದೆ. ರಾಜ್ಯಸಭಾ ಅಧ್ಯಕ್ಷರು ಅಥವಾ ಲೋಕಸಭಾ ಸ್ಪೀಕರ್ ಅಧಿವೇಶನದ ವೇಳೆ ಸದನದಲ್ಲಿ ಮಾತನಾಡುವ ಮಾತುಗಳನ್ನು ಗಮನಿಸುತ್ತಾರೆ. ಕೆಲವೊಮ್ಮೆ ಸಭಾಪತಿಯವರು ಅಸಂಸದೀಯ ಪದಗಳನ್ನು ಹೊರಹಾಕಬಹುದು. ಆದರೆ ಸಭಾಪತಿಗೆ ಯಾವುದೇ ಪದಗಳ ನಿರ್ಬಂಧ ಇರುವುದಿಲ್ಲ.
ಇನ್ನು ಅಸಂಸದೀಯ ಎಂದು ಪಟ್ಟಿ ಮಾಡಿರುವ ಕೆಲವು ಇಂಗ್ಲಿಷ್ ಪದಗಳಲ್ಲಿ ಬ್ಲಡ್ಶೆಡ್, ಬ್ಲೆಡಿ, ಬಿಟ್ರೇಡ್, ಶೇಮ್ಡ್, ಅಬ್ಯುಸ್ಡ್, ಚೀಟೆಡ್, ಚಾಮ್ಚಾ, ಚಮಚ್ಗಿರಿ, ಚೇಲಾಸ್, ಭ್ರಷ್ಟ, ಕೋವಾರ್ಡ್, ಕ್ರಿಮಿನಲ್ ಮತ್ತು ಕ್ರೊಕೊಡೈಲ್ ಟಿಯರ್ಸ್ ಪದಗಳ ಮಾಡುವಂತಿಲ್ಲ.
ಜುಲೈ 18 ರಿಂದ ಆಗಸ್ಟ್ 12ರ ವರೆಗೆ ಮುಂಗಾರು ಅಧಿವೇಶನ: ಮುಂಗಾರು ಅಧಿವೇಶನ ಜುಲೈ 18 ರಿಂದ ಆರಂಭವಾಗಿ ಆಗಸ್ಟ್ 12 ರಂದು ಕೊನೆಗೊಳ್ಳಲಿದೆ ಎಂದು ಲೋಕಸಭೆಯ ಸಚಿವಾಲಯ ಈಗಾಗಲೇ ತಿಳಿಸಿದೆ. 11ನೇ ರಾಷ್ಟ್ರಪತಿ ಚುನಾವಣೆಯು ಮುಂಗಾರು ಅಧಿವೇಶನದ ಮೊದಲ ದಿನ ನಡೆಯಲಿದೆ, ನಂತರ ಜುಲೈ 21 ರಂದು ಮತ ಎಣಿಕೆ ನಡೆಯಲಿದೆ. ಜುಲೈ 25 ರಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನೂತನ ಅಧ್ಯಕ್ಷರು ಪ್ರಮಾಣ ವಚನ ಬೋಧಿಸಲಿದ್ದಾರೆ.
ಇದನ್ನೂ ಓದಿ: ಕಪಿಲಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆ! ನನ್ನ ಮಗನನ್ನು ಸಮಯ ನೋಡಿ ಕೊಲೆ ಮಾಡಿದ್ದಾರೆ ಎಂದ ಯುವಕನ ತಂದೆ
Published On - 11:10 am, Thu, 14 July 22