ಕಪಿಲಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆ! ನನ್ನ ಮಗನನ್ನು ಸಮಯ ನೋಡಿ ಕೊಲೆ ಮಾಡಿದ್ದಾರೆ ಎಂದ ಯುವಕನ ತಂದೆ

ಮಗ ನಾಪತ್ತೆಯಾಗಿರುವ ಬಗ್ಗೆ ಮಾತನಾಡಿದ ಅಬ್ದುಲ್ ಕರೀಂನ ತಂದೆ ಮುನಾವರ್ ಪಾಷಾ, ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ನನ್ನ ಮಗ ಚಪ್ಪಲಿ ಬಿಡದೆ, ಬಟ್ಟೆ ಬಿಚ್ಚದೆ ನೀರಿಗೆ ಬಿದ್ದಿದ್ದಾನೆ.

ಕಪಿಲಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆ! ನನ್ನ ಮಗನನ್ನು ಸಮಯ ನೋಡಿ ಕೊಲೆ ಮಾಡಿದ್ದಾರೆ ಎಂದ ಯುವಕನ ತಂದೆ
ಅಬ್ದುಲ್ ಕರೀಂ, ಯುವಕನಿಗಾಗಿ ಶೋಧಕಾರ್ಯ ಮುಂದುವರೆಯುತ್ತಿದೆ
TV9kannada Web Team

| Edited By: sandhya thejappa

Jul 14, 2022 | 10:56 AM

ಮೈಸೂರು: ಕಪಿಲಾ ನದಿಯಲ್ಲಿ (Kabini River) ಈಜಲು (Swim) ಹೋಗಿದ್ದ ಯುವಕ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹೆಜ್ಜಿಗೆ ಗ್ರಾಮದ ಬಳಿ ಸಂಭವಿಸಿದೆ. ಹೆಜ್ಜಿಗೆ ಗ್ರಾಮದ ಸೇತುವೆಯಿಂದ ಮೂವರು ಯುವಕರು ನದಿಗೆ ಹಾರಿದ್ದರು. ಮೂವರಲ್ಲಿ ಇಬ್ಬರು ಈಜಿ ದಡ ಸೇರಿದ್ದಾರೆ. ಆದರೆ ಓರ್ವ ನಾಪತ್ತೆಯಾಗಿದ್ದಾನೆ. ಅಬ್ದುಲ್ ಕರೀಂ ನೀರು ಪಾಲಾಗಿರುವ ಯುವಕ. ಅಬ್ದುಲ್ ಕರೀಂಗಾಗಿ ಹೊಳೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಇನ್ನು ಅಬ್ದುಲ್ ಕರೀಂನ ತಂದೆ, ನನ್ನ ಮಗನನ್ನು ಸಮಯ ನೋಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಗ ನಾಪತ್ತೆಯಾಗಿರುವ ಬಗ್ಗೆ ಮಾತನಾಡಿದ ಅಬ್ದುಲ್ ಕರೀಂನ ತಂದೆ ಮುನಾವರ್ ಪಾಷಾ, ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ನನ್ನ ಮಗ ಚಪ್ಪಲಿ ಬಿಡದೆ, ಬಟ್ಟೆ ಬಿಚ್ಚದೆ ನೀರಿಗೆ ಬಿದ್ದಿದ್ದಾನೆ. ಮಗನ ಜೊತೆಯಲ್ಲಿದ್ದವರೇ ಕೊಲೆ ಮಾಡಲು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು. ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಇಂದು ಆರ್​ಎಸ್​ಎಸ್​-ಬಿಜೆಪಿ ಸಮನ್ವಯ ಸಭೆ: ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಆಯ್ದ ಪದಾಧಿಕಾರಿಗಳು ಭಾಗಿ

ಕಬಿನಿ ಜಲಾನಯ ಇಂದಿನ ನೀರಿನ ಮಟ್ಟ ಹೀಗಿದೆ: ಕೇರಳದ ವಯನಾಡು, ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಇಂದಿನ ಒಳಹರಿವು 32,615 ಕ್ಯೂಸೆಕ್. ಜಲಾಶಯದ ಹೊರಹರಿವು 34,8755 ಕ್ಯೂಸೆಕ್. ಕಬಿನಿ ಜಲಾಶಯ 84 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 81.66 ಅಡಿ. ಕಬಿನಿ ಜಲಾಶಯ ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇಂದು 18.03 ಟಿಎಂಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ

ಇದನ್ನೂ ಓದಿ: ಮಾಜಿ ಕಾರ್ಪೊರೇಟರ್ ಪತಿ ಆಯೂಬ್​​​ ಖಾನ್ ಕೊಲೆಗೆ ಟ್ವಿಸ್ಟ್: ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಕಾರಣ ಬಹಿರಂಗ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada