Sunil Jakhar ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸುನಿಲ್ ಜಾಖರ್ ಬಿಜೆಪಿಗೆ ಸೇರ್ಪಡೆ
ನಾನು ಕಾಂಗ್ರೆಸ್‌ನೊಂದಿಗೆ 50 ವರ್ಷಗಳ ಹಳೆಯ ಸಂಬಂಧವನ್ನು ಹೊಂದಿದ್ದೇನೆ, ನನ್ನ ಕುಟುಂಬವು 1972 ರಿಂದ ಮೂರು ತಲೆಮಾರುಗಳಿಂದ ಪಕ್ಷದಲ್ಲಿದೆ. ನಾನು ಅದನ್ನು ಕುಟುಂಬ ಎಂದು ಪರಿಗಣಿಸಿದ್ದೇನೆ", ಯಾವುದೇ ವೈಯಕ್ತಿಕ ವಿವಾದದಿಂದ ಕಾಂಗ್ರೆಸ್ ತೊರೆದಿಲ್ಲ....
ಕಳೆದ ವಾರ ಕಾಂಗ್ರೆಸ್ ಪಕ್ಷಕ್ಕೆ ದಿಢೀರ್ ರಾಜೀನಾಮೆಯನ್ನು ಘೋಷಿಸಿದ ಪಂಜಾಬ್ (Punjab) ಕಾಂಗ್ರೆಸ್ ಮಾಜಿ ಮುಖ್ಯಸ್ಥ ಸುನಿಲ್ ಜಾಖರ್ (Sunil Jakhar)ಬಿಜೆಪಿ ಸೇರಿದ್ದಾರೆ.ಕಾಂಗ್ರೆಸ್ ತೊರೆದ ಐದು ದಿನಗಳ ನಂತರ ಗುರುವಾರ ಜಾಖರ್ ಬಿಜೆಪಿಗೆ (BJP) ಸೇರ್ಪಡೆ ಆಗಿದ್ದಾರೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರ ಸಮ್ಮುಖದಲ್ಲಿ ಸುನಿಲ್ ಜಾಖರ್ ನವದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಜಾಖರ್, 50 ವರ್ಷಗಳ ಹಿಂದಿನ ಪಕ್ಷವನ್ನು ತೊರೆಯುವುದು ನನಗೆ ಸುಲಭವಲ್ಲ. ಮೂರು ತಲೆಮಾರುಗಳಿಂದ ನಮ್ಮ ಕುಟುಂಬ ಆ ಪಕ್ಷಕ್ಕೆ ಸೇವೆ ಸಲ್ಲಿಸಿತ್ತು ಎಂದಿದ್ದಾರೆ. ನನ್ನ ನಿರ್ಗಮನದ ನಿರ್ಧಾರವು ವೈಯಕ್ತಿಕ ಸಮಸ್ಯೆಗಳಿಂದಲ್ಲ, ಆದರೆ ಪಂಜಾಬ್‌ನಲ್ಲಿ ‘ರಾಷ್ಟ್ರೀಯತೆ’, ‘ಸೋದರತ್ವ’ ಮತ್ತು ‘ಏಕತೆ’ಯಂತಾ ಸಮಸ್ಯೆಗಳಿಂದಾಗಿದೆ ಎಂದಿದ್ದಾರೆ. ನವಜೋತ್ ಸಿಂಗ್ ಸಿಧುಗೆ ದಾರಿ ಮಾಡಿಕೊಡಲು ಕಳೆದ ವರ್ಷ ಜುಲೈನಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಅಧ್ಯಕ್ಷ ಸ್ಥಾನವನ್ನು ತೊರೆದ 68 ವರ್ಷದ ಜಾಖರ್ ಈ ಹಿಂದೆ ಹಲವಾರು ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದರು.
“ಕುಟುಂಬ” ಎಂದು ಕರೆದ ಕಾಂಗ್ರೆಸ್‌ನೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದ ಜಾಖರ್, ಪಕ್ಷವು ಪಂಜಾಬ್ ಅನ್ನು ಶೇಕಡಾವಾರು ಆಗಿ ಪರಿಗಣಿಸುವುದು ಮತ್ತು ಜಾತಿಯ ಮೇಲೆ ಜನರನ್ನು ವಿಭಜಿಸಲು ಸಾಧ್ಯವಿಲ್ಲ ಎಂದು ಸೂಚಿಸಿದ ಕಾರಣ ನನ್ನನ್ನು ಮೂಲೆಗುಂಪು ಮಾಡಲಾಗಿದೆ ಎಂದು ಹೇಳಿದರು. “ನೀವು ಸುನಿಲ್ ಜಾಖರ್ ಅವರನ್ನು ಪಕ್ಷದ ಹುದ್ದೆಯಿಂದ ತೆಗೆದುಹಾಕಬಹುದು. ಆದರೆ ಅವರನ್ನು ಮೌನಗೊಳಿಸಲು ಸಾಧ್ಯವಿಲ್ಲ” ಎಂದು ನಡ್ಡಾ ಅವರೊಂದಿಗೆ ವೇದಿಕೆ ಹಂಚಿಕೊಂಡ ಜಾಖರ್ ಹೇಳಿದ್ದಾರೆ.
“ನಾನು ಕಾಂಗ್ರೆಸ್‌ನೊಂದಿಗೆ 50 ವರ್ಷಗಳ ಹಳೆಯ ಸಂಬಂಧವನ್ನು ಹೊಂದಿದ್ದೇನೆ, ನನ್ನ ಕುಟುಂಬವು 1972 ರಿಂದ ಮೂರು ತಲೆಮಾರುಗಳಿಂದ ಪಕ್ಷದಲ್ಲಿದೆ. ನಾನು ಅದನ್ನು ಕುಟುಂಬ ಎಂದು ಪರಿಗಣಿಸಿದ್ದೇನೆ”, ಯಾವುದೇ ವೈಯಕ್ತಿಕ ವಿವಾದದಿಂದ ಕಾಂಗ್ರೆಸ್ ತೊರೆದಿಲ್ಲ. ಕಾಂಗ್ರೆಸ್‌ನಲ್ಲಿ ಜಾತಿಬೇಧವಿದೆ, ಆದರೆ ಬಿಜೆಪಿಯಲ್ಲಿ ಎಲ್ಲರಿಗೂ ಸಮಾನತೆ ಇದೆ ಎಂದಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಗದ್ದುಗೆಗೇರಿ ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿದಿತ್ತು. ಪ್ರಸ್ತುತ, ಸೋನಿಯಾ ಗಾಂಧಿ ನೇತೃತ್ವದ ಸಂಘಟನೆಯು ಕೇವಲ ಛತ್ತೀಸಗಢ ಮತ್ತು ರಾಜಸ್ಥಾನದಲ್ಲಿ ಮಾತ್ರ ಅಧಿಕಾರದಲ್ಲಿದೆ.
Former Congress leader Shri @sunilkjakhar joins BJP in presence of BJP National President Shri @JPNadda at party headquarters in New Delhi. #JoinBJP pic.twitter.com/LuS44MgieK
— BJP (@BJP4India) May 19, 2022
ಬುಧವಾರ, ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ್ ಪಟೇಲ್ ಕೂಡ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 2:51 pm, Thu, 19 May 22