ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವ ದೆಹಲಿ ಸರ್ಕಾರದ ಯೋಜನೆಗೆ ತಡೆ ನೀಡಿದ ಹೈಕೋರ್ಟ್
ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರ ಪೀಠವು, ದೆಹಲಿ ಸರ್ಕಾರವು ಮತ್ತೊಂದು ಮನೆ ಬಾಗಿಲಿಗೆ ವಿತರಣಾ ಯೋಜನೆಯನ್ನು ತರಲು ಮುಕ್ತವಾಗಿದೆ. ಆದರೆ ಈ ಮನೆ ಬಾಗಿಲಿಗೆ ಯೋಜನೆಗೆ ಕೇಂದ್ರವು ಒದಗಿಸಿದ ಧಾನ್ಯಗಳನ್ನು ಬಳಸಲು ಸಾಧ್ಯವಿಲ್ಲ ಎಂದು ಹೇಳಿದೆ
ದೆಹಲಿ: ಎಎಪಿ (AAP) ಸರ್ಕಾರದ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಯಾದ ಮುಖಮಂತ್ರಿ ಘರ್ ಘರ್ ರೇಷನ್ ಯೋಜ್ನಾವನ್ನು( Mukhymantri Ghar Ghar Ration Yojna) ದೆಹಲಿ ಹೈಕೋರ್ಟ್ (Delhi high Court) ಗುರುವಾರ ರದ್ದುಗೊಳಿಸಿದೆ. ಈ ಯೋಜನೆಯನ್ನು ಪ್ರಶ್ನಿಸಿ ಪಡಿತರ ವಿತರಕರು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಹೈಕೋರ್ಟ್ ಪುರಸ್ಕರಿಸಿದೆ. ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರ ಪೀಠವು, ದೆಹಲಿ ಸರ್ಕಾರವು ಮತ್ತೊಂದು ಮನೆ ಬಾಗಿಲಿಗೆ ವಿತರಣಾ ಯೋಜನೆಯನ್ನು ತರಲು ಮುಕ್ತವಾಗಿದೆ. ಆದರೆ ಈ ಮನೆ ಬಾಗಿಲಿಗೆ ಯೋಜನೆಗೆ ಕೇಂದ್ರವು ಒದಗಿಸಿದ ಧಾನ್ಯಗಳನ್ನು ಬಳಸಲು ಸಾಧ್ಯವಿಲ್ಲ ಎಂದು ಹೇಳಿದೆ.ಅರ್ಜಿದಾರರಾದ ದೆಹಲಿ ಸರ್ಕಾರಿ ಪಡಿತರ ವಿತರಕರ ಸಂಘ ಮತ್ತು ದೆಹಲಿ ಪಡಿತರ ವಿತರಕರ ಒಕ್ಕೂಟದ ಅರ್ಜಿಗಳ ಕುರಿತು ವ್ಯಾಪಕ ವಿಚಾರಣೆ ನಡೆಸಿದ ನಂತರ ಹೈಕೋರ್ಟ್ ಜನವರಿ 10 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಬಡವರಿಗೆ ಪಡಿತರ ಕೊಡಲ್ಲ ಎಂದು ನ್ಯಾಯಬೆಲೆ ಅಂಗಡಿ (ಎಫ್‌ಪಿಎಸ್) ಮಾಲೀಕರು ಬೆದರಿಕೆ ಹಾಕುತ್ತಿದ್ದಾರೆ. ಬಡವರಿಗಾಗಿಗಿ ನಾವು ಯೋಜನೆ ತರುತ್ತಿದ್ದೇವೆ ಎಂದು ದೆಹಲಿ ಸರ್ಕಾರ ತಮ್ಮ ಯೋಜನೆಯನ್ನು ಸಮರ್ಥಿಸಿಕೊಂಡಿದೆ. ಯೋಜನೆಯ ಅನುಷ್ಠಾನದ ನಂತರ ನ್ಯಾಯಬೆಲೆ ಅಂಗಡಿಗಳು ಅಸ್ತಿತ್ವದಲ್ಲಿಲ್ಲ ಎಂಬ “ಸಂಪೂರ್ಣ ತಪ್ಪು ಕಲ್ಪನೆ” ಇದೆ ಎಂದು ಎಎಪಿ ಸರ್ಕಾರ ಈ ಹಿಂದೆ ಹೇಳಿತ್ತು.
ಆಂಧ್ರಪ್ರದೇಶ, ಹರ್ಯಾಣ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಕರ್ನಾಟಕದ ಬೆಂಗಳೂರು ರಾಜ್ಯಗಳು ಒಂದೇ ರೀತಿಯ ಮನೆ ಬಾಗಿಲಿಗೆ ವಿತರಣಾ ಯೋಜನೆಗಳನ್ನು ಹೊಂದಿವೆ ಎಂದು ದೆಹಲಿ ಸರ್ಕಾರ ಹೇಳಿದೆ. ಕೇಂದ್ರ ಸರ್ಕಾರದ ಸ್ಥಾಯಿ ಸಲಹೆಗಾರರಾದ ಮೋನಿಕಾ ಅರೋರಾ ಪ್ರತಿನಿಧಿಸುವ ಕೇಂದ್ರ ಸರ್ಕಾರ, ದೆಹಲಿ ಸರ್ಕಾರದ ಮನೆ ಬಾಗಿಲಿಗೆ ಪಡಿತರ ವಿತರಣಾ ಯೋಜನೆಯನ್ನು ವಿರೋಧಿಸಿದೆ. ಯಾವುದೇ ರಾಜ್ಯ ಸರ್ಕಾರವು ಎನ್‌ಎಫ್‌ಎಸ್‌ಎ ರಚನೆಯಲ್ಲಿ ಹಸ್ತಕ್ಷೇಪ ಮಾಡಲು ಮತ್ತು ಅದರ ರಚನೆಯನ್ನು ನಾಶಮಾಡಲು ನ್ಯಾಯಾಲಯವು ಅನುಮತಿಸಬಾರದು ಎಂದು ಹೇಳಿದೆ. ಎಫ್‌ಪಿಎಸ್ ಕಾಯಿದೆಯ ಅವಿಭಾಜ್ಯ ಅಂಗವಾಗಿದೆ ಎಂದು ಕೇಂದ್ರ ಈ ಹಿಂದೆ ಹೇಳಿತ್ತು.
ಎನ್‌ಎಫ್‌ಎಸ್‌ಎ ಪ್ರಕಾರ ಇದು ರಾಜ್ಯಗಳಿಗೆ ಆಹಾಕ ಧಾನ್ಯಗಳನ್ನು ನೀಡುತ್ತಿದ್ದು, ರಾಜ್ಯಗಳು ಭಾರತೀಯ ಆಹಾರ ನಿಗಮದ ಗೋಡೌನ್‌ನಿಂದ ಆಹಾರ ಧಾನ್ಯಗಳನ್ನು ತೆಗೆದುಕೊಂಡು ಫಲಾನುಭವಿಗಳಿಗೆ ವಿತರಿಸಲು ನ್ಯಾಯಬೆಲೆ ಅಂಗಡಿಗಳ ಬಾಗಿಲಿಗೆ ತಲುಪಿಸುತ್ತವೆ
ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯಗಳು ಅಥವಾ ಹಿಟ್ಟು ಪೂರೈಕೆಯನ್ನು ನಿಲ್ಲಿಸದಂತೆ ಅಥವಾ ಮೊಟಕುಗೊಳಿಸದಂತೆ ಎಎಪಿ ಸರ್ಕಾರಕ್ಕೆ ನಿರ್ದೇಶನ ನೀಡಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರದ ಮನವಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ನವೆಂಬರ್ 15, 2021 ರಂದು ನಿರಾಕರಿಸಿತ್ತು. ಕಳೆದ ವರ್ಷ ಸೆಪ್ಟೆಂಬರ್ 27 ರಂದು ದೆಹಲಿ ಸರ್ಕಾರವು ಎಲ್ಲಾ ನ್ಯಾಯಬೆಲೆ ಅಂಗಡಿ ಡೀಲರ್‌ಗಳಿಗೆ ತಮ್ಮ ಬಾಗಿಲಿಗೆ ಪಡಿತರವನ್ನು ಸ್ವೀಕರಿಸಲು ಆಯ್ಕೆ ಮಾಡಿದ ಪಡಿತರ ಚೀಟಿದಾರರ ವಿವರಗಳನ್ನು ತಿಳಿಸುವಂತೆ ಸೂಚನೆಗಳನ್ನು ನೀಡುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅದರ ನಂತರ ನ್ಯಾಯಬೆಲೆ ಅಂಗಡಿಗಳ ಡೀಲರ್‌ಗಳು ಇತರ ಯೋಜನೆಗೆ ಆಯ್ಕೆ ಮಾಡಿದ ಪಿಡಿಎಸ್ ಫಲಾನುಭವಿಗಳ ಪಡಿತರವನ್ನು ಪೂರೈಸುವ ಅಗತ್ಯವಿಲ್ಲ ಎಂದು ಅದು ಹೇಳಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:21 pm, Thu, 19 May 22