ಮನೆಮನೆಗೆ ಪಡಿತರ ತಲುಪಿಸುವ ಯೋಜನೆ ಕೈಬಿಟ್ಟ ಸರ್ಕಾರ: ಈಗಿರುವ ಪಡಿತರ ಅಂಗಡಿಗಳ ಮೂಲಕವೇ ರೇಷನ್ ವಿತರಣೆ
ಬಡ ಕುಟಂಬಗಳಿಗೆ ಏಪ್ರಿಲ್ 1ರಿಂದ ಪ್ರಾಯೋಗಿಕವಾಗಿ ಪೊರ್ಟಿಫೈಡ್ ರೈಸ್ ವಿತರಿಸಲಾಗುವುದು. ಮೊದಲಿಗೆ ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ವಿತರಣೆ ಮಾಡಲಾಗುವುದು. ಬಳಿಕ ರಾಜ್ಯಾದ್ಯಂತ ಪೊರ್ಟಿಫೈಡ್ ರೈಸ್ ವಿತರಣೆ ಮಾಡುತ್ತೇವೆ ಎಂದು ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಬೆಳಗಾವಿ: ಮನೆಮನೆಗೆ ಪಡಿತರ ತಲುಪಿಸುವ ಯೋಜನೆಯನ್ನು ಸರ್ಕಾರ(State Government) ಕೈಬಿಟ್ಟಿದೆ. ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಈ ಯೋಜನೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಈಗಿರುವ ಪಡಿತರ( Ration) ಅಂಗಡಿಗಳ ಮೂಲಕವೇ ಕರ್ನಾಟಕದಲ್ಲಿ ರೇಷನ್ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿಆಹಾರ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ(Umesh Katti) ಹೇಳಿದ್ದಾರೆ.
ಬಡ ಕುಟಂಬಗಳಿಗೆ ಏಪ್ರಿಲ್ 1ರಿಂದ ಪೊರ್ಟಿಫೈಡ್ ರೈಸ್ ವಿತರಣೆ
ಬಡ ಕುಟಂಬಗಳಿಗೆ ಏಪ್ರಿಲ್ 1ರಿಂದ ಪ್ರಾಯೋಗಿಕವಾಗಿ ಪೊರ್ಟಿಫೈಡ್ ರೈಸ್ ವಿತರಿಸಲಾಗುವುದು. ಮೊದಲಿಗೆ ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ವಿತರಣೆ ಮಾಡಲಾಗುವುದು. ಬಳಿಕ ರಾಜ್ಯಾದ್ಯಂತ ಪೊರ್ಟಿಫೈಡ್ ರೈಸ್ ವಿತರಣೆ ಮಾಡುತ್ತೇವೆ ಎಂದು ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ಕುರಿತು ಸಚಿವ ಕತ್ತಿ ಪ್ರಶಂಸೆ
ಬಜೆಟ್ನಲ್ಲಿ ಕೃಷಿಗೆ 8 ಸಾವಿರ ಕೋಟಿ ನೀಡಿ ರೈತ ಪರ ಬಜೆಟ್ ಮಂಡಿಸಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕರು ಬೋಗಸ್ ಬಜೆಟ್ ಎಂದಿದ್ದಾರೆ. ರಾಜ್ಯದಲ್ಲಿ ಜನ ಪರ ಬಜೆಟ್ ಸಿಎಂ ಮಂಡಿಸಿದ್ದಾರೆ. ರಾಜ್ಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಬಜೆಟ್ ಮಂಡಿಸಿದ್ದಾರೆ. ನೀರಾವರಿ ಯೋಜನೆಗೆ 25 ಸಾವಿರ ಕೋಟಿ ರೂಪಾಯಿಗಳ ಬಜೆಟ್ ನೀಡಲಾಗಿದೆ. ಹಿಡಕಲ್ ಜಲಾಶಯ ಅಭಿವೃದ್ಧಿ ಪಡಿಸಲು 148 ಕೋಟಿ ರೂಪಾಯಿ ನೀಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಸಾಲ ಮಾಡಿಲ್ಲ. ಸಿದ್ದರಾಮಯ್ಯ ಸರಕಾರದಲ್ಲಿ ಸಾಲ ಮಾಡಲಾಗಿದೆ. ಸಿದ್ದರಾಮಯ್ಯ ಸರಕಾರದಲ್ಲಿದ್ದ ಸಾಲ ಕೊರೊನಾ ಸಂದರ್ಭದಲ್ಲಿ ಆದ ಸಾಲ ತೀರಿಸುವ ಜವಾಬ್ದಾರಿ ಸರಕಾರದ ಮೇಲಿದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಮಂಡ್ಯದಲ್ಲಿ ಜಪ್ತಿ ಮಾಡಿದ್ದ ಪಡಿತರ ಅಕ್ಕಿ ರಾತ್ರೋರಾತ್ರಿ ಸಾಗಾಟ; ಪೊಲೀಸರ ವಿರುದ್ಧ ದೂರು ದಾಖಲು
Published On - 6:38 pm, Sat, 5 March 22