AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯದಲ್ಲಿ ಜಪ್ತಿ ಮಾಡಿದ್ದ ಪಡಿತರ ಅಕ್ಕಿ ರಾತ್ರೋರಾತ್ರಿ ಸಾಗಾಟ; ಪೊಲೀಸರ ವಿರುದ್ಧ ದೂರು ದಾಖಲು

ಡಿಸೆಂಬರ್ 8ರಂದು ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ರೈಸ್ ಮಿಲ್ ಮೇಲೆ ದಾಳಿ ನಡೆಸಿತ್ತು. ದಾಳಿ ಬಳಿಕ ರೈಸ್ ಮಿಲ್ ಸೀಜ್ ಮಾಡಿ ಪೊಲೀಸರ ಕಾವಲು ಹಾಕಲಾಗಿತ್ತು. ಅಕ್ಕಿ ಕಾವಲಿಗಾಗಿ ತಹಶೀಲ್ದಾರ್ ಪೊಲೀಸರನ್ನು ನಿಯೋಜಿಸಿದ್ದರು.

ಮಂಡ್ಯದಲ್ಲಿ ಜಪ್ತಿ ಮಾಡಿದ್ದ ಪಡಿತರ ಅಕ್ಕಿ ರಾತ್ರೋರಾತ್ರಿ ಸಾಗಾಟ; ಪೊಲೀಸರ ವಿರುದ್ಧ ದೂರು ದಾಖಲು
ಜಪ್ತಿ ಮಾಡಿದ್ದ ಪಡಿತರ ಅಕ್ಕಿ
TV9 Web
| Edited By: |

Updated on:Dec 12, 2021 | 10:08 AM

Share

ಮಂಡ್ಯ: ಜಪ್ತಿ ಮಾಡಿದ್ದ ಪಡಿತರ ಅಕ್ಕಿಯನ್ನು ರಾತ್ರೋರಾತ್ರಿ ಕಳ್ಳತನವಾಗಿ ಸಾಗಾಟ ಮಾಡಿರುವ ಆರೋಪ ಕೇಳಿಬಂದಿದೆ. ಪೊಲೀಸರೇ ವಾಹನಕ್ಕೆ ಅಕ್ಕಿ ಮೂಟೆ ತುಂಬಿಸಿ ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಂಡ್ಯ ಸಿಐ ಸಂತೋಷ್, ಪೂರ್ವ ಠಾಣೆ ಎಎಸ್ಐ ರವಿಕುಮಾರ್, ಪೊಲೀಸ್ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ. ಮಂಡ್ಯದ ಲಕ್ಷ್ಮಿ ದೇವಿ ರೈಸ್ ಮಿಲ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ 50 ಕೆಜಿ ತೂಕದ 525 ಮೂಟೆ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿತ್ತು.

ಡಿಸೆಂಬರ್ 8ರಂದು ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ರೈಸ್ ಮಿಲ್ ಮೇಲೆ ದಾಳಿ ನಡೆಸಿತ್ತು. ದಾಳಿ ಬಳಿಕ ರೈಸ್ ಮಿಲ್ ಸೀಜ್ ಮಾಡಿ ಪೊಲೀಸರ ಕಾವಲು ಹಾಕಲಾಗಿತ್ತು. ಅಕ್ಕಿ ಕಾವಲಿಗಾಗಿ ತಹಶೀಲ್ದಾರ್ ಪೊಲೀಸರನ್ನು ನಿಯೋಜಿಸಿದ್ದರು. ಗೋಡಾನ್ ಸೀಜ್ ನಂತರ ಪೊಲೀಸರು ಕೀಯನ್ನ ತಾವೇ ಇಟ್ಟುಕೊಂಡಿದ್ದರು. ಆದರೆ ಸೀಜ್ ಮಾಡಿದ್ದ ಅಕ್ಕಿಯನ್ನು ರಾತ್ರೋರಾತ್ರಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಪೊಲೀಸರು ತಾವೇ ಮುಂದೆ ನಿಂತು ವಶಪಡಿಸಿಕೊಂಡಿದ್ದ ಅಕ್ಕಿಯನ್ನ ತುಂಬಿ ಕಳುಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಪ್ರಕರಣದಲ್ಲಿ ರೈಸ್ ಮಿಲ್ ಮಾಲೀಕ ನಾಗರಾಜ್, ಎರಡು ಕ್ಯಾಂಟರ್ ವಾಹನ ಮಾಲೀಕರು, ಮಂಡ್ಯದ ಪೂರ್ವ ಠಾಣೆ ಪೊಲೀಸರ ವಿರುದ್ಧ ದೂರು ದಾಖಲಾಗಿದೆ.

ಗಾಂಜಾ ಜಪ್ತಿ ಕಾರಿನಲ್ಲಿ ಸಾಗಿಸುತ್ತಿದ್ದ 21.31 ಕೆಜಿ ಗಾಂಜಾವನ್ನು ಶಿವಮೊಗ್ಗದ ತುಂಗಾ ನಗರ ಪೊಲೀಸರು ಜಪ್ತಿ ಮಾಡಿದ್ದಾರೆ. ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪ ಕ್ರಾಸ್ ಬಳಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ದೌಲತ್, ಮುಜೀಬ್ ಖಾನ್, ಶೋಯೆಬ್, ಜಪುಲ್ಲಾ ಎಂಬುವವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ

ಟೊಯೊಟಾ ಹೈಲಕ್ಸ್ ಪಿಕ್-ಅಪ್ ಮುಂದಿನ ವರ್ಷದ ಜನೆವರಿಯಲ್ಲಿ ಭಾರತದ ರಸ್ತೆಗಳ ಮೇಲೆ ಕಾಣಿಸಿಕೊಳ್ಳಲಿದೆ

ಮುರಿದುಹೋದ ಸಂಬಂಧದಿಂದ ಪ್ರಪಂಚವೇನೂ ಮುಳುಗದು, ಅದರಿಂದ ಪಾಠ ಕಲಿತು ಜೀವನದಲ್ಲಿ ಮುಂದುವರಿಯಬೇಕು: ಡಾ ಸೌಜನ್ಯ ವಶಿಷ್ಠ

Published On - 9:18 am, Sun, 12 December 21