ಯುಎಸ್ ಪ್ರವಾಸದಿಂದ ಹಿಂದಿರುಗಿದ ನಂತರ ಕಮಲ್ ಹಾಸನ್​​ಗೆ ಕೊರೊನಾ ಪಾಸಿಟಿವ್

Kamal Haasan ಅಮೆರಿಕ ಪ್ರವಾಸದಿಂದ ಹಿಂದಿರುಗಿದ ನಂತರ ಸ್ವಲ್ಪ ಕೆಮ್ಮು ಕಾಣಿಸಿಕೊಂಡಿತ್ತು. ನಂತರ ಕೊವಿಡ್ ಪರೀಕ್ಷೆಗೊಳಗಾಗಿದ್ದು ಕೊರೊನಾ ಪಾಸಿಟಿವ್ ಆಗಿದೆ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

ಯುಎಸ್ ಪ್ರವಾಸದಿಂದ ಹಿಂದಿರುಗಿದ ನಂತರ ಕಮಲ್ ಹಾಸನ್​​ಗೆ ಕೊರೊನಾ ಪಾಸಿಟಿವ್
ಕಮಲ್ ಹಾಸನ್ (ಸಂಗ್ರಹ ಚಿತ್ರ)

ಚೆನ್ನೈ: ನಟ-ರಾಜಕಾರಣಿ ಕಮಲ್ ಹಾಸನ್ (Kamal Haasan )ಅವರಿಗೆ  ಕೊವಿಡ್-19 (Covid-19)  ದೃಢಪಟ್ಟಿದೆ . ಈ ಬಗ್ಗೆ ಅವರೇ ಟ್ವೀಟ್  ಮಾಡಿದ್ದಾರೆ. ಅಮೆರಿಕ ಪ್ರವಾಸದಿಂದ ಹಿಂದಿರುಗಿದ ನಂತರ  ಸ್ವಲ್ಪ ಕೆಮ್ಮು ಕಾಣಿಸಿಕೊಂಡಿತ್ತು. ನಂತರ  ಕೊವಿಡ್ ಪರೀಕ್ಷೆಗೊಳಗಾಗಿದ್ದು ಕೊರೊನಾ ಪಾಸಿಟಿವ್ ಆಗಿದೆ ಎಂದು ಅವರು ಹೇಳಿದ್ದಾರೆ. ಕಮಲ್ ಹಾಸನ್ ಆಸ್ಪತ್ರೆಯಲ್ಲಿ ಸ್ವತಃ ಐಸೋಲೇಟ್ ಆಗಿದ್ದಾರೆ. “ಸಾಂಕ್ರಾಮಿಕ ರೋಗವು ಇನ್ನೂ ಕೊನೆಗೊಂಡಿಲ್ಲ” ಎಲ್ಲರೂ ಕಾಳಜಿ ವಹಿಸುವಂತೆ ಅವರು ಅಭಿಮಾನಿಗಳಿಗೆ ಹೇಳಿದ್ದಾರೆ. ಕಮಲ್ ಹಾಸನ್ ಅವರ ಅಭಿಮಾನಿಗಳು ಅವರ ಪೋಸ್ಟ್‌ಗೆ ಶೀಘ್ರವಾಗಿ ಗುಣವಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಇದೀಗ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲಾಗಿರುವ ನಂತರ ಬಿಗ್ ಬಾಸ್ ತಮಿಳು ಸೀಸನ್ 5 ಅನ್ನು ಯಾರು ನಡೆಸುತ್ತಾರೆ ಎಂದು ಕೆಲವರು ಕೇಳುತ್ತಿದ್ದಾರೆ.

ಕಮಲ್ ಹಾಸನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಎರಡು ವಾರಗಳ ನಂತರ ಅವರಿಗೆ ಕೊರೊನಾ ದೃಢಪಟ್ಟಿದೆ. ಕಮಲ್ ಅವರ ಹುಟ್ಟುಹಬ್ಬದ ಮುನ್ನಾದಿನದಂದು, ಅವರ ಮುಂಬರುವ ಚಿತ್ರ ವಿಕ್ರಮ್‌ನ ತಯಾರಕರು ಅದರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್, ಕಮಲ್ ಹಾಸನ್ ಅವರ 232 ನೇ ಚಿತ್ರವಾಗಿದೆ. ಹಾಸನ್ ಕೂಡ ಟ್ವಿಟರ್​​ನಲ್ಲಿ ವಿಕ್ರಮ್ ಫಸ್ಟ್ ಲುಕ್ ಶೇರ್ ಮಾಡಿದ್ದಾರೆ. ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ ಅವರು “ಕಮಲ್ ಹಾಸನ್ ಸರ್ ಅವರಿಗೆ ನನ್ನಿಂದ ಒಂದು ಸಣ್ಣ ಉಡುಗೊರೆ. ಜನ್ಮದಿನದ ಶುಭಾಶಯಗಳು ಉಲಗನಾಯಗನ್” ಎಂದು ಬರೆದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಕಮಲ್ ಹಾಸನ್ ಹೊಸ ಟೀಸರ್‌ನ ಲಿಂಕ್ ಅನ್ನು ಲಗತ್ತಿಸಿ “ಪ್ರೀತಿಗೆ ಧನ್ಯವಾದಗಳು, ಲೋಕೇಶ್” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಇಬ್ಬರು ಸ್ಟಾರ್​ ನಟರ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ ಕಮಲ್​ ಹಾಸನ್​

Click on your DTH Provider to Add TV9 Kannada