ದೆಹಲಿ: “ಸರ್” ಬಳಕೆಯನ್ನು ಕೈಬಿಡುವಂತೆ ಶಿವಸೇನಾ (ShivSena) ಸಂಸದೆ ಪ್ರಿಯಾಂಕಾ ಚತುರ್ವೇದಿ(Priyanka Chaturvedi) ಮನವಿ ಮಾಡಿದ ನಂತರ ಸಂಸತ್ತಿನ ಪ್ರಶ್ನೆಗಳಿಗೆ ಉತ್ತರಗಳಿಗೆ ಇನ್ನು ಮುಂದೆ ಲಿಂಗ ತಟಸ್ಥ ಪದಗಳನ್ನು ಬಳಸಲಾಗುವುದು. ಪ್ರಿಯಾಂಕಾ ಕಳೆದ ತಿಂಗಳು ಸಂಸದೀಯ ವ್ಯವಹಾರಗಳ ಸಚಿವರಿಗೆ ಪತ್ರ ಬರೆದಿದ್ದುಸಂಸತ್‌ನಲ್ಲಿ ಎತ್ತಲಾದ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಲಾಗಿದೆ, ಉತ್ತರವು ನಕಾರಾತ್ಮಕವಾಗಿರುವ ಸಂದರ್ಭಗಳಲ್ಲಿ No Sir ಎಂಬ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಸಂಸದೆ ಆಗಿ ಪ್ರಜಾಪ್ರಭುತ್ವದ ದೇಗುಲವೆಂಬ ಸಂಸತ್ತಿನಲ್ಲಿ ಲಿಂಗ ಬೇಧವಿಲ್ಲದ ಪದ ಬಳಸಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದರು. ಇಂದು, ಮಹಾರಾಷ್ಟ್ರ ಸಂಸದೆ ಸೆಪ್ಟೆಂಬರ್ 20 ರಂದು ರಾಜ್ಯಸಭಾ ಸಚಿವಾಲಯದಿಂದ ಪಡೆದ ಉತ್ತರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹೀಗೆ ಹೇಳಲಾಗಿದೆ “ಸದನದ ಎಲ್ಲಾ ಪ್ರಕ್ರಿಯೆಗಳನ್ನು (ಸಂಸದೀಯ ಪ್ರಶ್ನೆಗಳಿಗೆ ಉತ್ತರಗಳನ್ನು ಒಳಗೊಂಡಂತೆ) ಸಭಾಪತಿಗೆ ತಿಳಿಸಲಾಗುತ್ತದೆ. ಆದಾಗ್ಯೂ, ರಾಜ್ಯಸಭೆಯ ಮುಂದಿನ ಅಧಿವೇಶನದಿಂದ ಲಿಂಗ-ತಟಸ್ಥ ಉತ್ತರಗಳನ್ನು ಒದಗಿಸಲು ಸಚಿವಾಲಯಗಳಿಗೆ ತಿಳಿಸಲಾಗುವುದು. ಏತನ್ಮಧ್ಯೆ ಪ್ರಸ್ತುತ ಸಭಾಪತಿ ಪುರುಷರಾಗಿದ್ದು, ಸಭಾಪತಿ ಸ್ಥಾನವನ್ನು ಮಹಿಳೆ ಅಲಂಕರಿಸಿದಾಗ ಅಲ್ಲಿ ಮೇಡಂ ಪದ ಬಳಕೆಯಾಗುತ್ತೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
Small step, big difference. Thank the Rajya Sabha Secretariat for correcting the anomaly in parliament question responses from ministries to women MPs. Henceforth the replies will be gender neutral from the ministries. pic.twitter.com/1m0hxBGmvn
— Priyanka Chaturvedi?? (@priyankac19) September 21, 2022
ಅದೇನೇ ಇರಲಿ, ಈಗ ಲೋಕಸಭೆಯಲ್ಲೂ ಅದೇ ಲಿಂಗ-ತಟಸ್ಥ ನಿಯಮಗಳನ್ನು ಅನುಸರಿಸಬೇಕು ಎಂದು ಹೇಳಲಾಗಿದೆ. ನಮ್ಮ ಸಂವಿಧಾನವು ಸಮಾನತೆಯ ತತ್ವವನ್ನು ಆಧರಿಸಿದೆ. ಇದು ಒಂದು ಸಣ್ಣ ಬದಲಾವಣೆಯಂತೆ ಕಂಡರೂ, ಸಂಸತ್ತಿನ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ಅವರ ಪ್ರಾತಿನಿಧ್ಯವನ್ನು ನೀಡುವಲ್ಲಿ ಇದು ಬೃಹತ್ ಹೆಜ್ಜೆ ಎಂದು ಚತುರ್ವೇದಿ ಹೇಳಿದ್ದಾರೆ.
Published On - 9:27 pm, Wed, 21 September 22