‘ಸಾರ್ವಜನಿಕರು, ಸರ್ಕಾರಗಳು ಮೈಮರೆತಿದ್ದರಿಂದಲೇ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದ್ದು’-ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಕೊರೊನಾ ವೈರಸ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ದೇಶ ಒಗ್ಗಟ್ಟಿನಿಂದ ಇರಬೇಕು. ಇಡೀ ದೇಶಕ್ಕೆ ಪರೀಕ್ಷೆ ಎದುರಾದಾಗ ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕೊವಿಡ್ 19 ಸೋಂಕು ಮೊದಲ ಅಲೆ ಸ್ವಲ್ಪ ನಂತರ ಸಾರ್ವಜನಿಕರು, ಆಡಳಿತಗಳು, ಸರ್ಕಾರಗಳೆಲ್ಲ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಇಂದು ಈ ಪರಿಸ್ಥಿತಿ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮ ಮರೆತಿದ್ದರಿಂದಲೇ ಎರಡನೇ ಅಲೆ ಇಷ್ಟು ತೀವ್ರವಾಯಿತು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಅಷ್ಟೇ ಅಲ್ಲ, ಈ ಹೊತ್ತಲ್ಲಿ ಜನ ಧೃತಿಗೆಡದೆ, ಸಕಾರಾತ್ಮಕತೆಯಿಂದ ಕೊರೊನಾ ವೈರಸ್ ವಿರುದ್ಧ ಹೋರಾಡಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
ಅವರ ಉಪನ್ಯಾಸ ಮಾಲಿಕೆ ಅನಿಯಮಿತಿ ಸಕಾರಾತ್ಮಕತೆ ಬಗ್ಗೆ ಮಾತನಾಡಿದ ಅವರು, ಕೊರೊನಾ ವೈರಸ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ದೇಶ ಒಗ್ಗಟ್ಟಿನಿಂದ ಇರಬೇಕು. ಇಡೀ ದೇಶಕ್ಕೆ ಪರೀಕ್ಷೆ ಎದುರಾದಾಗ ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಬೇಕು. ಒಬ್ಬರೆಡೆಗೆ ಇನ್ನೊಬ್ಬರು ಬೆರಳು ತೋರಿಸುವುದರಲ್ಲೇ ಕಾಲ ಕಳೆಯಬಾರದು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಇನ್ನು ದೇಶದಲ್ಲಿ ಕೊರೊನಾದ ಮೂರನೇ ಅಲೆ ಬರುವ ಬಗ್ಗೆಯೂ ತಜ್ಞರು ಹೇಳುತ್ತಿದ್ದಾರೆ. ಆದರೆ ಯಾರೂ ಅದರ ಬಗ್ಗೆ ಹೆದರಬಾರದು. ಸೋಂಕಿನ ಎದುರು ಕಲ್ಲುಬಂಡೆಯಂತೆ ದೃಢವಾಗಿ ನಿಲ್ಲಬೇಕು.. ಜಗ್ಗಬಾರದು ಎಂದು ತಿಳಿಸಿದ್ದಾರೆ. ಅಲ್ಲದೆ, ಯಾವೊಂದು ಸಂದರ್ಭದಲ್ಲಿಯೂ ನಮ್ಮ ಧೈರ್ಯವನ್ನು ಕಳೆದುಕೊಳ್ಳಬಾರದು ಎಂಬ ಸಲಹೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: ವಿಚಿತ್ರ ಕಾಯಿಲೆ ಹಾಗೂ ನಿರುದ್ಯೋಗಕ್ಕೆ ರೋಸಿಹೋದ ಕಿರುತೆರೆ ನಟಿ; ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ