AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Agra Accident: ಸ್ಕಾರ್ಪಿಯೋ-ಟ್ರಕ್ ಮಧ್ಯೆ ಡಿಕ್ಕಿ, 8 ಜನರ ದುರ್ಮರಣ

ಆಗ್ರಾ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಗುರುವಾರ) ಬೆಳಗ್ಗೆ ಸ್ಕಾರ್ಪಿಯೋ ಮತ್ತು ಟ್ರಕ್ ಮಧ್ಯೆ ನಡೆದ ದುರ್ಘಟನೆಯಲ್ಲಿ 8 ಜನ ಮೃತಪಟ್ಟಿದ್ದಾರೆ ಹಾಗೂ ನಾಲ್ವರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Agra Accident: ಸ್ಕಾರ್ಪಿಯೋ-ಟ್ರಕ್ ಮಧ್ಯೆ ಡಿಕ್ಕಿ, 8 ಜನರ ದುರ್ಮರಣ
ಸ್ಕಾರ್ಪಿಯೋ ಮತ್ತು ಟ್ರಕ್ ಮಧ್ಯೆ ಡಿಕ್ಕಿ
ಆಯೇಷಾ ಬಾನು
|

Updated on: Mar 11, 2021 | 8:38 AM

Share

ಆಗ್ರಾ: ಸ್ಕಾರ್ಪಿಯೋ ಮತ್ತು ಟ್ರಕ್ ಮಧ್ಯೆ ಡಿಕ್ಕಿ ಸಂಭವಿಸಿದ್ದು 8 ಜನ ಮೃತಪಟ್ಟಿರುವ ಭೀಕರ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ನಡೆದಿದೆ. ಆಗ್ರಾ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಗುರುವಾರ) ಬೆಳಗ್ಗೆ ಸ್ಕಾರ್ಪಿಯೋ ಮತ್ತು ಟ್ರಕ್ ಮಧ್ಯೆ ನಡೆದ ದುರ್ಘಟನೆಯಲ್ಲಿ 8 ಜನ ಮೃತಪಟ್ಟಿದ್ದಾರೆ ಹಾಗೂ ನಾಲ್ವರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ವರದಿಗಳ ಪ್ರಕಾರ ಸ್ಕಾರ್ಪಿಯೋದಲ್ಲಿ 12 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಗಾಯಗೊಂಡಿರುವವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ತಿಳಿದು ಬಂದಿದೆ. ಅಪಘಾತಕ್ಕೀಡಾದ SUVಸ್ಕಾರ್ಪಿಯೋ ಜಾರ್ಖಂಡ್‌ನಲ್ಲಿ ನೋಂದಾಯಿಸಲಾಗಿದ್ದ ವಾಹನ ಎಂದು ತಿಳಿದು ಬಂದಿದೆ. ಆಗ್ರಾದ ಎಟ್ಮದ್ದುಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಕಾರವಾರ DySp ಅರವಿಂದ ಕಲಗುಜ್ಜಿ ವಾಹನಕ್ಕೆ ಓಮ್ನಿ ಡಿಕ್ಕಿ: ಅಡ್ಡ ಬಂದ ಮಗು ಬಚಾವು ಮಾಡಲು ಹೋಗಿ ನಡೆದ ಅಪಘಾತ