- TV9 Kannada Karnataka News ಕಾರವಾರ DySp ಅರವಿಂದ ಕಲಗುಜ್ಜಿ ವಾಹನಕ್ಕೆ ಓಮ್ನಿ ಡಿಕ್ಕಿ: ಅಡ್ಡ ಬಂದ ಮಗು ಬಚಾವು ಮಾಡಲು ಹೋಗಿ ನಡೆದ ಅಪಘಾತ
ಕಾರವಾರ DySp ಅರವಿಂದ ಕಲಗುಜ್ಜಿ ವಾಹನಕ್ಕೆ ಓಮ್ನಿ ಡಿಕ್ಕಿ: ಅಡ್ಡ ಬಂದ ಮಗು ಬಚಾವು ಮಾಡಲು ಹೋಗಿ ನಡೆದ ಅಪಘಾತ
ಕಾರವಾರದಿಂದ ಮುಂಡಗೋಡಿಗೆ ಡಿವೈಎಸ್ಪಿ ಅರವಿಂದ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ವಾಹನಕ್ಕೆ ಅಡ್ಡ ಬಂದ ಮಗುವನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ.

Updated on: Mar 08, 2021 | 2:10 PM
ಕಾರವಾರ: ಕಾರವಾರ DYSP ಪಿ. ಅರವಿಂದ ಕಲಗುಜ್ಜಿ ಅವರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಓಮಿನಿ ಕಾರು ಡಿಕ್ಕಿ ಹೊಡೆದ ಪರಿಣಾಮ DYSP ಪಿ. ಅರವಿಂದ ಕಲಗುಜ್ಜಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ.
ಕಾರವಾರದಿಂದ ಮುಂಡಗೋಡಿಗೆ ಡಿವೈಎಸ್ಪಿ ಅರವಿಂದ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ವಾಹನಕ್ಕೆ ಅಡ್ಡ ಬಂದ ಮಗುವನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ಓಮ್ನಿ ಕಾರು ರಸ್ತೆಯಲ್ಲಿಯೇ ಉರುಳಿ ಬಿದ್ದಿದೆ. ಕಾರು ನೆಲಕ್ಕುರಳಿದ್ದರಿಂದಾಗಿ ಓಮ್ನಿಯಲ್ಲಿದ್ದ 5 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮರಳು ಸಾಗಿಸ್ತಿದ್ದ ಟಿಪ್ಪರ್ ಹರಿದು ಬೈಕ್ ಸವಾರ ಸಾವು; ಅಪಘಾತ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More