ಮರಳು ಸಾಗಿಸ್ತಿದ್ದ ಟಿಪ್ಪರ್ ಹರಿದು ಬೈಕ್ ಸವಾರ ಸಾವು; ಅಪಘಾತ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ

ಮರಳು ಸಾಗಿಸ್ತಿದ್ದ ಟಿಪ್ಪರ್ ಹರಿದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜೇವರ್ಗಿ ಹೊರವಲಯದಲ್ಲಿ ನಡೆದಿದೆ. ಜೇವರ್ಗಿ ಪಟ್ಟಣದ ನಿವಾಸಿ ಮಶಾಕ್‌(35) ಮೃತ ಬೈಕ್​ ಸವಾರ.

  • TV9 Web Team
  • Published On - 23:30 PM, 6 Mar 2021
ಮರಳು ಸಾಗಿಸ್ತಿದ್ದ ಟಿಪ್ಪರ್ ಹರಿದು ಬೈಕ್ ಸವಾರ ಸಾವು; ಅಪಘಾತ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ
ಮೃತ ಬೈಕ್​ ಸವಾರ ಮಶಾಕ್‌ (ಎಡ); ಸ್ಥಳೀಯರಿಂದ ಪ್ರತಿಭಟನೆ (ಬಲ)

ಕಲಬುರಗಿ: ಮರಳು ಸಾಗಿಸ್ತಿದ್ದ ಟಿಪ್ಪರ್ ಹರಿದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜೇವರ್ಗಿ ಹೊರವಲಯದಲ್ಲಿ ನಡೆದಿದೆ. ಜೇವರ್ಗಿ ಪಟ್ಟಣದ ನಿವಾಸಿ ಮಶಾಕ್‌(35) ಮೃತ ಬೈಕ್​ ಸವಾರ. ಇನ್ನು, ಅಪಘಾತ ಖಂಡಿಸಿ ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ ಸಹ ನಡೆಸಲಾಯಿತು. ಕಲಬುರಗಿ-ಬೆಂಗಳೂರು ರಸ್ತೆಯಲ್ಲಿ ಸ್ಥಳೀಯರು ಸಂಚಾರ ತಡೆದು ಧರಣಿ ನಡೆಸಿದರು. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್​ಗೆ ಲಾರಿ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು
ಬೈಕ್​ಗೆ ಲಾರಿ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ ಬಳಿ ಸಂಭವಿಸಿದೆ. ದೊಡ್ಡಬಳ್ಳಾಪುರದ ನಾಗೇಶ್, ನಾರಾಯಣಸ್ವಾಮಿ ಮೃತ ದುರ್ದೈವಿಗಳು. ಚಿಂತಾಮಣಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಖಾಸಗಿ ಬಸ್ ಪಲ್ಟಿ: 8 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ
ಖಾಸಗಿ ಬಸ್ ಪಲ್ಟಿ, 8 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮೈಲನಹಳ್ಳಿಯಲ್ಲಿ ನಡೆದಿದೆ. ಚಾಲಕನ‌ ನಿಯಂತ್ರಣ ತಪ್ಪಿ‌ ಬಸ್ ಪಲ್ಟಿಯಾಗಿದೆ. ಖಾಸಗಿ ಬಸ್‌ನಲ್ಲಿ 20 ಜನರು ಪ್ರಯಾಣಿಸುತ್ತಿದ್ದರು. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್​ಮೇಲ್ ಆರೋಪ: ಮಹಿಳೆ ಬಂಧನ