Ahmedabad Plane Crash: ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದ್ರು

ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾದ AI-171 ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದ್ದು, 242 ಜನರು ಪ್ರಯಾಣಿಸುತ್ತಿದ್ದರು. ಈ ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ. ಲಂಡನ್​ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆಗುವಾಗ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಯಿತು. ಪ್ರಯಾಣಿಕರ ಪಟ್ಟಿಯಲ್ಲಿ ವಿಜಯ್ ರೂಪಾನಿ ಹೆಸರಿದ್ದು, ಅವರು ಪ್ರಯಾಣಿಸಿದ್ದರೇ ಇಲ್ಲವೇ ಎನ್ನುವ ಖಚಿತ ಮಾಹಿತಿ ಲಭ್ಯವಾಗಿಲ್ಲ.

Ahmedabad Plane Crash: ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದ್ರು
ವಿಜಯ್ ರೂಪಾನಿ
Updated By: Digi Tech Desk

Updated on: Jun 12, 2025 | 3:49 PM

ಅಹಮದಾಬಾದ್, ಜೂನ್ 12: ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾದ AI-171 ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದೆ. 242 ಜನರು ಪ್ರಯಾಣಿಸುತ್ತಿದ್ದರು. ಈ ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನಲಾಗಿದೆ. ಲಂಡನ್​​ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆಗುವಾಗ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಯಿತು. ಪ್ರಯಾಣಿಕರ ಪಟ್ಟಿಯಲ್ಲಿ ವಿಜಯ್ ರೂಪಾನಿ ಹೆಸರಿದೆ. ಟಿಕೆಟ್ ಮಾಹಿತಿ ಕೂಡ ಈಗ ಲಭ್ಯವಾಗಿದೆ.

ವಿಮಾನ ಮಧ್ಯಾಹ್ನ 1.17 ಕ್ಕೆ ಟೇಕ್ ಆಫ್ ಆಗಿತ್ತು. ವಿಮಾನ ನಿಲ್ದಾಣದ ಬಳಿಯ ಸರಕು ಕಚೇರಿಯಲ್ಲಿ ಅಪಘಾತ ಸಂಭವಿಸಿದ್ದು, ಇದರಿಂದಾಗಿ ಕಟ್ಟಡವೂ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ವಿಮಾನದಲ್ಲಿದ್ದ 242 ಜನರಲ್ಲಿ ಇಬ್ಬರು ಪೈಲಟ್‌ಗಳು ಮತ್ತು 2 ಮಕ್ಕಳು ಸೇರಿದಂತೆ 8 ಸಿಬ್ಬಂದಿ ಇದ್ದರು. ವಿಮಾನದ ಪೈಲಟ್‌ನ ಹೆಸರು ಸುಮಿತ್ ಸಭರ್ವಾಲ್ ಎಂದು ಹೇಳಲಾಗುತ್ತಿದೆ. ವಿಮಾನ ಟೇಕ್ ಆಫ್ ಆದ ಕೇವಲ 1 ನಿಮಿಷದಲ್ಲಿ ಅಪಘಾತಕ್ಕೀಡಾಗಿದೆ. ಅದರ ವಿಡಿಯೋ ಕೂಡ ಹೊರಬಿದ್ದಿದೆ. ಆಕಾಶದಲ್ಲಿ 625 ಅಡಿ ಎತ್ತರ ತಲುಪಿದ ತಕ್ಷಣ ವಿಮಾನ ಹೇಗೆ ಪತನಗೊಂಡಿತು ಎಂಬುದನ್ನು ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ.

ವಿಜಯ್ ರೂಪಾನಿ ಸೀಟ್ ಸಂಖ್ಯೆ 2-ಡಿಯಲ್ಲಿ ಕುಳಿತಿದ್ದರು. ಟಿಕೆಟ್ ದೃಢೀಕರಿಸಲಾಗಿದೆ. ಅವರ ಸೀಟ್ ನಂಬರ್ 11 ಜಿ. ಮೂಲಗಳ ಪ್ರಕಾರ,  ವಿಜಯ್ ರೂಪಾನಿ ಅವರ ಪತ್ನಿ ಬ್ರಿಟನ್‌ನಲ್ಲಿದ್ದರು. ಅವರ ಪತ್ನಿ 6 ತಿಂಗಳು ಅಲ್ಲಿದ್ದರು. ಅವರನ್ನು ಮರಳಿ ಕರೆತರಲು ವಿಜಯ್ ರೂಪಾನಿ ಲಂಡನ್‌ಗೆ ಹೋಗುತ್ತಿದ್ದರು. ನಂತರ ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆಗುವಾಗ ವಿಮಾನ ಅಪಘಾತಕ್ಕೀಡಾಯಿತು. ಈ ಅಪಘಾತ ಅಹಮದಾಬಾದ್‌ನ ಮೇಘನಿನಗರ ಪ್ರದೇಶದ ಬಳಿ ಸಂಭವಿಸಿದೆ. ಟೇಕ್ ಆಫ್ ಆಗುವ ಸಮಯದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ.

1956ರಲ್ಲಿ ಇಂದಿನ ಮೈನ್​ಮಾರ್​ ದೇಶದ ರಂಗೂನ್​ನಲ್ಲಿ ಜೈನ್ ಬನಿಯಾ ಸಮುದಾಯದಲ್ಲಿ ಜನಿಸಿದ ವಿಜಯ್ ರೂಪಾನಿ ಅವರ ಕುಟುಂಬ ಮುಂದೆ ಗುಜರಾತಿನ ರಾಜ್​ಕೋಟ್​ಗೆ ವಲಸೆ ಬಂತು. ಬಿಎ ಎಲ್ಎಲ್​ಬಿ ಪದವೀಧರರು. ಅವರ ತಂದೆ ರಮಣಿಕ್ಲಾಲ್ ರೂಪಾನಿ ತಾಯಿ ಮಾಯಾಬೆನ್. ವಿದ್ಯಾರ್ಥಿ ಜೀವನದಿಂದಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಕ್ರಿಯ ಸದಸ್ಯರಾಗಿ ಕೆಲಸ ಮಾಡಿದ ಅವರು, ಇಸವಿ ಸನ್ 1971ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಮತ್ತಷ್ಟು ಓದಿ:
ಅಹಮದಾಬಾದ್​ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ

ಅಲ್ಲದೇ ಸ್ಟಾಕ್ ಬ್ರೋಕರ್ ಆಗಿಯೂ ಅವರು ಷೇರುಪೇಟೆಯಲ್ಲಿ ಕೆಲಸ ಮಾಡಿದ್ದರು.ವಿಜಯ್ ರೂಪಾನಿ ಪಕ್ಷ ಮತ್ತು ಸಂಘಟನೆಯ ತತ್ವ ಸಿದ್ಧಾಂತಗಳಿಗೆ ನಿಷ್ಠಾವಂತ ಕಾರ್ಯಕರ್ತ. 1976ರಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ನಡೆಸಿದ ಹೋರಾಟ ಅವರಿಗೆ 11 ತಿಂಗಳ ಜೈಲುವಾಸದ ರುಚಿಯನ್ನೂ ಉಣಬಡಿಸಿತು. 1978ರಿಂದ 1981ರವರೆಗೆ ಆರ್ಎಸ್ಎಸ್ನ ಪ್ರಚಾರಕ್ ಜವಾಬ್ದಾರಿಯನ್ನು ನಿರ್ವಹಿಸಿದ ವಿಜಯ್ ರೂಪಾನಿಗೆ 2006ರಲ್ಲಿ ಗುಜರಾತ್ ಪ್ರವಾಸೋದ್ಯಮ ಅಭಿವೃದ್ಧಿಯ ಜವಾಬ್ದಾರಿಯನ್ನೂ ಬಿಜೆಪಿ ನೀಡಿತು.

2006ರಲ್ಲಿ ರಾಜ್​ಕೋಟ್ ಪಾಲಿಕೆ ಕಾರ್ಪೋರೇಟರ್, ಮೇಯರ್ ಆಗಿ ಆಯ್ಎಕಯಾದ ಅವರಿಗೆ ಬಿಜೆಪಿ ರಾಜ್ಯಸಭೆಯ ಸದಸ್ಯ ಸ್ಥಾನವನ್ನು ನೀಡಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:08 pm, Thu, 12 June 25