
ಕೊಚ್ಚಿ, ಸೆಪ್ಟೆಂಬರ್ 7: ಕೊಚ್ಚಿಯಿಂದ ಅಬುಧಾಬಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಬೋಯಿಂಗ್ 737 (IX 415) ವಿಮಾನದ ಎಂಜಿನ್‌ನಲ್ಲಿ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ, ವಿಮಾನವನ್ನು ತುರ್ತಾಗಿ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ತಂದು ಸುರಕ್ಷಿತವಾಗಿ ಇಳಿಸಲಾಗಿದೆ. ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ಸಮಯಪ್ರಜ್ಞೆ ಮತ್ತು ನಿರ್ಧಾರದಿಂದಾಗಿ ಭಾರಿ ಅಪಾಯವೊಂದು ತಪ್ಪಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಕೊಚ್ಚಿಯಿಂದ ಹೊರಟು ಸುಮಾರು 50 ನಿಮಿಷಗಳ ನಂತರ, 36,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಎಂಜಿನ್-1 (Engine 1) ರಲ್ಲಿದ್ದ ಆಯಿಲ್ (Engine Oil) ವೇಗವಾಗಿ ಕಡಿಮೆಯಾಗುತ್ತಿರುವುದು ಪೈಲಟ್‌ಗಳ ಗಮನಕ್ಕೆ ಬಂದಿದೆ. ಎಂಜಿನ್ ಆಯಿಲ್ ಪ್ರೆಶರ್ ‘ಡೆಂಜರ್ ಜೋನ್’ (Danger Zone) ತಲುಪುತ್ತಿದ್ದಂತೆ, ಮುನ್ನೆಚ್ಚರಿಕೆಯ ಕ್ರಮವಾಗಿ ಪೈಲಟ್‌ಗಳು ತಕ್ಷಣವೇ ಎಂಜಿನ್-1 ಅನ್ನು ಆಫ್ (Shut Down) ಮಾಡಿ, ವಿಮಾನವನ್ನು ಕೊಚ್ಚಿಯತ್ತ ಹಿಂತಿರುಗಿಸಿದರು.
ಇದನ್ನೂ ಓದಿ: ವೈದ್ಯರ ಮೇಲೆ ಹಲ್ಲೆ ಎಸಗುವ ರಾಜಕಾರಣಿಗಳನ್ನು ಸುಮ್ಮನೆ ಬಿಡಬಾರದು, ಕಸ್ಟಡಿಗೆ ತೆಗೆದುಕೊಳ್ಳಬೇಕು: ಸುಪ್ರೀಂಕೋರ್ಟ್
ವಿಮಾನವು ಒಂದೇ ಎಂಜಿನ್ ಬೆಂಬಲದೊಂದಿಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು.
ಪ್ರಯಾಣಿಕರಿಗೆ ಅರಿವಿರಲಿಲ್ಲ: ಗಾಬರಿ ಉಂಟಾಗದಂತೆ ಪೈಲಟ್‌ಗಳು ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸಿದ್ದು, ವಿಮಾನ ಸುರಕ್ಷಿತವಾಗಿ ಇಳಿಯುವವರೆಗೂ ತಾಂತ್ರಿಕ ಸಮಸ್ಯೆಯ ಗಂಭೀರತೆಯ ಕುರಿತು ಪ್ರಯಾಣಿಕರಿಗೆ ಸುಳಿವು ಸಿಕ್ಕಿರಲಿಲ್ಲ.
ಇದನ್ನೂ ಓದಿ: ‘ಪ್ರತಿಯೊಬ್ಬರ ಮೇಲಿನ ಸಾತ್ವಿಕ ಪ್ರೇಮವೇ ಹಿಂದೂವಿನ ಮೂಲ ಸ್ವಭಾವ’: ಲಂಡನ್ನಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಸಂಸ್ಥೆಯ ತಾಂತ್ರಿಕ ತಂಡವು ವಿಮಾನದ ಎಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷ ಹಾಗೂ ಎಣ್ಣೆ ಸೋರಿಕೆಗೆ ಕಾರಣವೇನು ಎಂಬುದರ ಕುರಿತು ವಿವರವಾದ ತನಿಖೆ ಆರಂಭಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:04 pm, Mon, 7 September 26