Air India: ಏರ್​ಇಂಡಿಯಾದ 470 ವಿಮಾನಗಳಿಗೆ 6,500ಕ್ಕೂ ಹೆಚ್ಚು ಪೈಲಟ್​ಗಳ ಅಗತ್ಯವಿದೆ: ವರದಿ

ಮುಂಬರುವ ವರ್ಷಗಳಲ್ಲಿ ಏರ್​ಬಸ್ ಮತ್ತು ಬೋಯಿಂಗ್​ನಿಂದ 470 ವಿಮಾನಗಳನ್ನು ನಿರ್ವಹಿಸಲು ಏರ್ ಇಂಡಿಯಾಗೆ 6,500ಕ್ಕೂ ಹೆಚ್ಚು ಪೈಲಟ್​ಗಳು ಬೇಕಾಗುತ್ತಾರೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

Air India: ಏರ್​ಇಂಡಿಯಾದ 470 ವಿಮಾನಗಳಿಗೆ 6,500ಕ್ಕೂ ಹೆಚ್ಚು ಪೈಲಟ್​ಗಳ ಅಗತ್ಯವಿದೆ: ವರದಿ
ಏರ್ ಇಂಡಿಯಾ

Updated on: Feb 17, 2023 | 10:25 AM

ಮುಂಬರುವ ವರ್ಷಗಳಲ್ಲಿ ಏರ್​ಬಸ್ ಮತ್ತು ಬೋಯಿಂಗ್​ನಿಂದ 470 ವಿಮಾನಗಳನ್ನು ನಿರ್ವಹಿಸಲು ಏರ್ ಇಂಡಿಯಾಗೆ 6,500ಕ್ಕೂ ಹೆಚ್ಚು ಪೈಲಟ್​ಗಳು ಬೇಕಾಗುತ್ತಾರೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಫ್ಲೀಟ್ ಮತ್ತು ಕಾರ್ಯಾಚರಣೆಗಳನ್ನು ವಿಸ್ತರಿಸಲು ಬಯಸುತ್ತಿರುವ ವಿಮಾನಯಾನ ಸಂಸ್ಥೆಯು 370 ವಿಮಾನಗಳನ್ನು ಖರೀದಿಸುವ ಆಯ್ಕೆಯನ್ನು ಒಳಗೊಂಡಿರುವ ಒಟ್ಟು 840 ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಆರ್ಡರ್ ಮಾಡಿದೆ. ಇದು ಯಾವುದೇ ಏರ್​ಲೈನ್​ನಿಂದ ಅತಿದೊಡ್ಡ ವಿಮಾನ ಆರ್ಡರ್ ಇದಾಗಿದೆ.

ಪ್ರಸ್ತುತ, ಏರ್ ಇಂಡಿಯಾ ತನ್ನ 113 ವಿಮಾನಗಳ ಫ್ಲೀಟ್​ ಅನ್ನು ನಿರ್ವಹಿಸಲು ಸುಮಾರು 1,600 ಪೈಲಟ್​ಗಳನ್ನು ಹೊಂದಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಅತಿ ದೀರ್ಘಾವಧಿಯ ವಿಮಾನಗಳು ರದ್ದಾದ ಅಥವಾ ವಿಳಂಬವಾಗುವ ಸಾಧ್ಯತೆ ಇದೆ.
ಏರ್​ಲೈನ್​ನ ಎರಡು ಅಂಗಸಂಸ್ಥೆಗಳು-ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಮತ್ತು ಏರ್​ಏಷ್ಯಾ ಇಂಡಿಯಾ- ಒಟ್ಟಿಗೆ ತಮ್ಮ 54 ವಿಮಾನಗಳನ್ನು ಹಾರಿಸಲು ಸುಮಾರು 850 ಪೈಲಟ್​ಗಳನ್ನು ಹೊಂದಿದ್ದರೆ ಜಂಟಿ ಉದ್ಯಮ ವಿಸ್ತಾರಾ 600ಕ್ಕೂ ಹೆಚ್ಚು ಪೈಲಟ್​ಗಳನ್ನು ಹೊಂದಿದೆ. ಎರಡನೆಯದು 53 ವಿಮಾನಗಳ ಫ್ಲೀಟ್ ಅನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಮತ್ತಷ್ಟು ಓದಿ: Air India: ಏರ್ ಇಂಡಿಯಾ ಭರ್ಜರಿ ಡೀಲ್; ಫ್ರಾನ್ಸ್, ಅಮೆರಿಕದಿಂದ ದಾಖಲೆ ಸಂಖ್ಯೆಯಲ್ಲಿ ವಿಮಾನ ಖರೀದಿ

ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್​ಪ್ರೆಸ್​, ವಿಸ್ತಾರಾ ಹಾಗೂ ಏರ್​ ಏಷ್ಯಾ ಒಟ್ಟಾಗಿ 220 ವಿಮಾನಗಳ ಸಂಯೋಜಿತ ಫ್ಲೀಟ್​ ಅನ್ನು ನಿರ್ವಹಿಸಲು 3000 ಪೈಲಟ್​ಗಳನ್ನು ಹೊಂದಿವೆ. ಏರ್ ಇಂಡಿಯಾ ಈ 40 ಎ350 ಅನ್ನು ತನ್ನ ಅತಿ ದೀರ್ಘ ಪ್ರಯಾಣದ ಮಾರ್ಗಗಳು ಅಥವಾ 16 ಗಂಟೆಗಳ ಕಾಲ ಹಾರಾಟ ನಡೆಸುವ ವಿಮಾನಗಳಿಗಾಗಿ ಪ್ರಮುಖವಾಗಿ ತೆಗೆದುಕೊಳ್ಳುತ್ತಿದೆ. ಪ್ರತಿ 30 ವಿಮಾನಕ್ಕೆ 15 ಕಮಾಂಡರ್​ಗಳು ಮತ್ತು 15 ಮೊದಲ ಅಧಿಕಾರಿಗಳು ಅಂದರೆ ಅಂದರೆ ಎ350ಗಳಿಗೆ ಸುಮಾರು 1200 ಪೈಲಟ್​ಗಳು ಬೇಕಾಗುತ್ತಾರೆ.

ಒಂದು ಬೋಯಿಂಗ್​ 777ಗೆ 26 ಪೈಲಟ್​ಗಳ ಅಗತ್ಯವಿದೆ. ವಿಮಾನಯಾನವು ಅಂತಹ 10 ವಿಮಾನಗಳನ್ನು ಸೇರಿಸಿದರೆ, ಅದಕ್ಕೆ 260 ಪೈಲಟ್​ಗಳು ಪೈಲಟ್​ಗಳು ಬೇಕಾಗುತ್ತಾರೆ ಆದರೆ 20 ಬೋಯಿಂಗ್ 787ಗೆ ಸುಮಾರು 400 ಪೈಲಟ್​ಗಳು ಬೇಕಾಗುತ್ತಾರೆ, ಅಂತಹ ಪ್ರತಿ ವಿಮಾನಕ್ಕೆ 20 ಪೈಲಟ್​ಗಳು ಬೇಕಾಗುತ್ತಾರೆ, 10 ಮೊದಲ ಕಮಾಂಡರ್​ಗಳು ಮತ್ತು 10 ಅಧಿಕಾರಿಗಳು ಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us