Aero India 2023: ಏರ್‌ ಶೋಗೆ ದಿನಾಂಕ ಫಿಕ್ಸ್ , ಆತಿಥ್ಯ ವಹಿಸಲಿರುವ ಯಲಹಂಕ ಏರ್ ಫೋರ್ಸ್

2023ನೇ ಸಾಲಿನ ಬೆಂಗಳೂರು ಏರ್‌ ಶೋಗೆ ಕೇಂದ್ರ ರಕ್ಷಣಾ ಸಚಿವಾಲಯವು ,ಮುಹೂರ್ತ ಫಿಕ್ಸ್ ಮಾಡಿದ್ದು, ಯಲಹಂಕ ಏರ್ ಫೋರ್ಸ್ ಆತಿಥ್ಯ ವಹಿಸಲಿದೆ.

Aero India 2023: ಏರ್‌ ಶೋಗೆ ದಿನಾಂಕ ಫಿಕ್ಸ್ , ಆತಿಥ್ಯ ವಹಿಸಲಿರುವ ಯಲಹಂಕ ಏರ್ ಫೋರ್ಸ್
Aero India 2023
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 27, 2022 | 8:36 PM

ಬೆಂಗಳೂರು: ಕೇಂದ್ರ ರಕ್ಷಣಾ ಸಚಿವಾಲಯವು ಏರೋ ಇಂಡಿಯಾದ ಬಹುನಿರೀಕ್ಷಿತ 14ನೇ ಆವೃತ್ತಿ ಬೆಂಗಳೂರು ಏರ್‌ಶೋಗೆ (Aero India 2023)  ದಿನಾಂಕ ನಿಗದಿ ಮಾಡಿದೆ. ಮುಂದಿನ ವರ್ಷ ಅಂದ್ರೆ 2023ರ ಫೆಬ್ರವರಿ 13ರಿಂದ 17ರವರೆಗೆ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶ ನಡೆಯಲಿದೆ. ಕೇಂದ್ರ ರಕ್ಷಣಾ ಇಲಾಖೆಯು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ಅತಿದೊಡ್ಡ ಪ್ರದರ್ಶನ ಇದಾಗಿದ್ದು, ಏರ್​ ಶೋ ಪ್ರದರ್ಶನ ಸಿಲಿಕಾನ್ ಸಿಟಿ ಬೆಂಗಳೂರಿನ ಹೆಗ್ಗಳಿಕೆಲ್ಲೊಂದಾಗಿದೆ.

ಕೇಂದ್ರ ರಕ್ಷಣಾ ಸಚಿವಾಲಯದ ಭಾಗವಾದ ‘ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಜೇಷನ್’ ವತಿಯಿಂದ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಇದರಲ್ಲಿ ಭಾರತೀಯ ಏರೋಸ್ಪೇಸ್ ಉದ್ಯಮದ ಹಲವಾರು ತಯಾರಕರು ಮತ್ತು ಸೇವಾ ಪೂರೈಕೆದಾರರು ಭವಿಷ್ಯದ ಗ್ರಾಹಕರನ್ನು ಭೇಟಿ ಮಾಡುತ್ತಾರೆ. ಏರೋಸ್ಪೇಸ್ ಉದ್ಯಮ ಬೆಳೆವಣಿಗೆಗೆ ಈ ಏರೋ ಇಂಡಿಯಾ ಪ್ರದರ್ಶನ ಉತ್ತಮ ವೇದಿಕೆಯೂ ಆಗಿದೆ.

ಹಲವು ದೇಶ, ವಿದೇಶ ಯುದ್ಧ ವಿಮಾನಗಳ ಮೈನವಿರೇಳಿಸುವ ಹಲವು ವೈಶಿಷ್ಟ್ಯಗಳೊಂದಿಗೆ 14ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಬಾನಂಗಳಲ್ಲಿ ಬಣ್ಣದ ಹಕ್ಕಿಗಳ ಚಿತ್ತಾರ, ಅದ್ಬುತ ದೃಶ್ಯದ ವೈಮಾನಿಕ ಪ್ರದರ್ಶನ ನೋಡುವುದೇ ಕಣ್ಣಿಗೆ ಹಬ್ಬ. ಹಾಗಾಗಿ ಈ ಬಾರಿಯ ಬೆಂಗಳೂರು ಏರ್ ಶೋ ಮಿಸ್ ಮಾಡಿಕೊಳ್ಳಬೇಡಿ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:12 pm, Sun, 27 November 22