AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾಂಗ ಪ್ರಯಾಣಿಕರಿಗೆ ವಿಮಾನಯಾನ ನಿರಾಕರಿಸುವಂತಿಲ್ಲ; ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎನಿಂದ ಸುತ್ತೋಲೆ

ನಾಗರಿಕ ವಿಮಾನಯಾನ ನಿಯಂತ್ರಕ DGCA ಇತ್ತೀಚೆಗೆ ವಿಮಾನಯಾನ ಸಂಸ್ಥೆಗಳಿಗೆ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು ದಿವ್ಯಾಂಗ ಪ್ರಯಾಣಿಕರಿಗೆ ವಿಮಾನಯಾನ ನಿರಾಕರಿಸುವಂತಿಲ್ಲ ಎಂದು ಹೇಳಿದೆ.

ದಿವ್ಯಾಂಗ ಪ್ರಯಾಣಿಕರಿಗೆ ವಿಮಾನಯಾನ ನಿರಾಕರಿಸುವಂತಿಲ್ಲ; ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎನಿಂದ ಸುತ್ತೋಲೆ
ಇಂಡಿಗೊ (ಸಾಂಧರ್ಬಿಕ ಚಿತ್ರ)
TV9 Web
| Updated By: ವಿವೇಕ ಬಿರಾದಾರ|

Updated on:Jun 03, 2022 | 10:04 PM

Share

ನವದೆಹಲಿ: ನಾಗರಿಕ ವಿಮಾನಯಾನ ನಿಯಂತ್ರಕ (DGCA) ಇತ್ತೀಚೆಗೆ ವಿಮಾನಯಾನ ಸಂಸ್ಥೆಗಳಿಗೆ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಮಾರ್ಗಸೂಚಿ ಪ್ರಕಾರ ವಿಮಾನಯಾನದ ಸಮಯದಲ್ಲಿ ದಿವ್ಯಾಂಗ (handicapped) ಪ್ರಯಾಣಿಕರ ಆರೋಗ್ಯವು ಹದಗೆಡುವ ಸಾಧ್ಯತೆಯಿದೆ ಎಂದು ವಿಮಾನಯಾನ ಸಂಸ್ಥೆಯು ಭಾವಿಸಿದರೆ, ವಿಮಾನ ನಿಲ್ದಾಣದಲ್ಲಿ ವೈದ್ಯರನ್ನು ಸಂಪರ್ಕಿಸಿ ಮತ್ತು ಫ್ಲೈಯರ್‌ಗೆ ಬೋರ್ಡಿಂಗ್​ನ್ನು ನಿರಾಕರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಸೂಕ್ತವಾದ ಮಾಹಿತಿ ತೆಗೆದುಕೊಳ್ಳಬೇಕು ಎಂದು ಡಿಜಿಸಿಎ ಶುಕ್ರವಾರ ತಿಳಿಸಿದೆ.

ದಿವ್ಯಾಂಗ ಮಗುವೊಂದು ರಾಂಚಿ-ಹೈದರಾಬಾದ್​ಗೆ ಪ್ರಯಾಣಿಸಲು ಮುಂದಾಗಿದ್ದಾಗ ಇಂಡಿಗೋ (Indigo)  ವಿಮಾನಯಾನ ಸಂಸ್ಥೆ ಅವರನ್ನು ತೆಡೆದಿತ್ತು. ಹೀಗಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇಂಡಿಗೋ ವಿಮಾನಯಾನ ಸಂಸ್ಥೆಗೆ ₹ 5 ಲಕ್ಷ ದಂಡ ವಿಧಿಸಿದೆ ಎಂದು ಹೇಳಿದೆ.

ಈ ಪ್ರಕರಣದ ನಂತರ ಡಿಜಿಸಿಎ  ಭವಿಷ್ಯದಲ್ಲಿ ಅಂತಹ ಸಂದರ್ಭಗಳನ್ನು ತಪ್ಪಿಸಲು ತನ್ನದೇ ಆದ ನಿಯಮಗಳನ್ನು ಮರುಪರಿಶೀಲಿಸುವುದಾಗಿ ಹೇಳಿದೆ, ಬೋರ್ಡಿಂಗ್ ನಿರಾಕರಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಪ್ರಯಾಣಿಕರ ಆರೋಗ್ಯದ ಬಗ್ಗೆ ವಿಮಾನ ನಿಲ್ದಾಣದ ವೈದ್ಯರ ಲಿಖಿತ ಅಭಿಪ್ರಾಯವನ್ನು ವಿಮಾನಯಾನ ಸಂಸ್ಥೆಗಳು ಕಡ್ಡಾಯವಾಗಿ ತೆಗೆದುಕೊಳ್ಳುತ್ತದೆ.

ಶುಕ್ರವಾರ DGCA ಮಾರ್ಗಸೂಚಿ ಹೊರಡಿಸಿದ್ದು, “ವಿಮಾನಯಾನವು ದಿವ್ಯಾಂಗದ ಆಧಾರದ ಮೇಲೆ ಯಾವುದೇ ವ್ಯಕ್ತಿಯ ಸಾಗಣೆಯನ್ನು ನಿರಾಕರಿಸುವುದಿಲ್ಲ.” ಆದಾಗ್ಯೂ, ಅಂತಹ ಪ್ರಯಾಣಿಕನ ಆರೋಗ್ಯವು ವಿಮಾನದಲ್ಲಿ ಹದಗೆಡಬಹುದು ಎಂದು ವಿಮಾನಯಾನ ಸಂಸ್ಥೆಯು ಗ್ರಹಿಸಿದರೆ, ಹೇಳಲಾದ ಪ್ರಯಾಣಿಕರನ್ನು ವೈದ್ಯರು ಪರೀಕ್ಷಿಸಬೇಕಾಗುತ್ತದೆ. ಅವರು ವೈದ್ಯಕೀಯ ಸ್ಥಿತಿಯನ್ನು ಮತ್ತು ಪ್ರಯಾಣಿಕರು ಪ್ರಯಾಣಿಸಲು ಯೋಗ್ಯರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸುತ್ತಾರೆ. ವೈದ್ಯಕೀಯ ಅಭಿಪ್ರಾಯವನ್ನು ಪಡೆದ ನಂತರ, ವಿಮಾನಯಾನ ಸಂಸ್ಥೆಯು ಸೂಕ್ತ ಕರೆಯನ್ನು ತೆಗೆದುಕೊಳ್ಳುತ್ತದೆ, ”ಎಂದು ಅದು ಉಲ್ಲೇಖಿಸಿದೆ.

ಜುಲೈ 2 ರೊಳಗೆ ಕರಡು ನಿಯಮಗಳ ಬಗ್ಗೆ ತಮ್ಮ ಅಭಿಪ್ರಯಾ ತಿಳಿಸಲು ನಿಯಂತ್ರಕರು ಸಾರ್ವಜನಿಕರನ್ನು ಕೇಳಿದ್ದಾರೆ. ನಂತರ ಅದು ಅಂತಿಮ ನಿಯಮಗಳನ್ನು ಹೊರಡಿಸುತ್ತದೆ.

ಘಟನೆಯ ನಂತರ ಇಂಡಿಗೋ ಸಿಇಒ ರೊನೊಜೋಯ್ ದತ್ತಾ ಅವರು ಮೇ 9 ರಂದು ವಿಷಾದ ವ್ಯಕ್ತಪಡಿಸಿದ್ದರು ಮತ್ತು ವಿಶೇಷ ಸಾಮರ್ಥ್ಯ ಹೊಂದಿರುವ ಮಗುವಿಗೆ ಎಲೆಕ್ಟ್ರಿಕ್ ಗಾಲಿಕುರ್ಚಿ ಖರೀದಿಸಲು ಮುಂದಾಗಿದ್ದರು. ಕಠಿಣ ಪರಿಸ್ಥಿತಿಯಲ್ಲಿ ಏರ್‌ಲೈನ್ ಸಿಬ್ಬಂದಿ ಅತ್ಯುತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ದತ್ತಾ ಹೇಳಿದ್ದರು.

ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮೇ 9 ರಂದು ಟ್ವಿಟರ್‌ನಲ್ಲಿ ರಾಂಚಿ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದರು.

Published On - 10:04 pm, Fri, 3 June 22

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!