ಪ್ರೇಯಸಿ ಒತ್ತಡಕ್ಕೆ ಪತ್ನಿಯನ್ನು ಕೊಲೆಗೈದ ಬಿಜೆಪಿ ನಾಯಕ ರೋಹಿತ್ ಸೈನಿ
ಪ್ರೇಯಸಿ ಒತ್ತಡದಿಂದ ಬಿಜೆಪಿ ನಾಯಕ ರೋಹಿತ್ ಸೈನಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಅಜ್ಮೀರ್‌ನಲ್ಲಿ ನಡೆದಿದೆ. ರೋಹಿತ್ ಸೈನಿ ತನ್ನ ಗೆಳತಿ ರಿತು ಸೈನಿಯ ಮಾತು ಕೇಳಿ ಪತ್ನಿಯನ್ನು ಹತ್ಯೆ ಮಾಡಿ ಈಗ ಜೈಲು ಸೇರಿದ್ದಾರೆ. ಆಗಸ್ಟ್ 10 ರಂದು ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದ ಈ ಹತ್ಯೆಯನ್ನು ಆರಂಭದಲ್ಲಿ ದರೋಡೆ ಎಂದು ಬಿಂಬಿಸಲಾಗಿತ್ತು, ಆದರೆ ಪೊಲೀಸರು ಒಂದು ದಿನದೊಳಗೆ ಪಿತೂರಿಯನ್ನು ಬಯಲು ಮಾಡಿದರು.ಆಗಸ್ಟ್ 10 ರಂದು ಸಂಜು ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.

ಅಜ್ಮೀರ್, ಆಗಸ್ಟ್ 17: ಪ್ರೇಯಸಿ ಒತ್ತಡದಿಂದ ಬಿಜೆಪಿ ನಾಯಕ ರೋಹಿತ್ ಸೈನಿ ಪತ್ನಿಯನ್ನು ಕೊಲೆ(Murder) ಮಾಡಿರುವ ಘಟನೆ ಅಜ್ಮೀರ್‌ನಲ್ಲಿ ನಡೆದಿದೆ. ರೋಹಿತ್ ಸೈನಿ ತನ್ನ ಗೆಳತಿ ರಿತು ಸೈನಿಯ ಮಾತು ಕೇಳಿ ಪತ್ನಿಯನ್ನು ಹತ್ಯೆ ಮಾಡಿ ಈಗ ಜೈಲು ಸೇರಿದ್ದಾರೆ. ಆಗಸ್ಟ್ 10 ರಂದು ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದ ಈ ಹತ್ಯೆಯನ್ನು ಆರಂಭದಲ್ಲಿ ದರೋಡೆ ಎಂದು ಬಿಂಬಿಸಲಾಗಿತ್ತು, ಆದರೆ ಪೊಲೀಸರು ಒಂದು ದಿನದೊಳಗೆ ಪಿತೂರಿಯನ್ನು ಬಯಲು ಮಾಡಿದರು.ಆಗಸ್ಟ್ 10 ರಂದು ಸಂಜು ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.
ರೋಹಿತ್ ಸೈನಿ ತನ್ನ ಮೊದಲ ಹೇಳಿಕೆಯಲ್ಲಿ, ದರೋಡೆಕೋರರು ತನ್ನ ಪತ್ನಿಯನ್ನು ಕೊಂದು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.ಪೊಲೀಸರು ರೋಹಿತ್ ಸೈನಿಯ ಗೆಳತಿ ರಿತು ಸೈನಿಯನ್ನೂ ಬಂಧಿಸಿದ್ದಾರೆ.
ರೋಹಿತ್ ಸ್ವತಃ ತನ್ನ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡರು ಮತ್ತು ಈ ಕೃತ್ಯವು ಆಕಸ್ಮಿಕವಲ್ಲ ಆದರೆ ತನ್ನ ಗೆಳತಿಯ ಪ್ರಭಾವದಿಂದ ಪೂರ್ವಯೋಜಿತ ಕೊಲೆ ಎಂದು ಹೇಳಿದ್ದಾರೆ. ರೋಹಿತ್ ಮತ್ತು ರಿತು ಹಲವಾರು ವರ್ಷಗಳಿಂದ ಸಂಬಂಧದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಸಂಜು ಅವರಿಬ್ಬರ ಮಧ್ಯೆ ಗೋಡೆಯಂತಿದ್ದರು. ಹೀಗಾಗಿ ಹೇಗಾದರೂ ಮಾಡ ಆಕೆಯನ್ನು ತನ್ನ ಜೀವನದಿಂದ ದೂರವಾಗುವಂತೆ ಮಾಡಬೇಕು ಎಂದು ರೋಹಿತ್ಗೆ ಒತ್ತಡ ಹಾಕಿ ರಿತು ಈ ಕೊಲೆ ಮಾಡಿಸಿದ್ದಾಳೆ. ಪ್ರಕರಣವನ್ನು 24 ಗಂಟೆಗಳ ಒಳಗೆ ಭೇದಿಸಲಾಯಿತು.
ಮತ್ತಷ್ಟು ಓದಿ: ಬಿಹಾರ: ಲವರ್ ಜತೆ ಸೇರಿ ಗಂಡನನ್ನು ಕೊಂದ ಪತ್ನಿ, ರಾಜಾ ರಘುವಂಶಿ ಹತ್ಯೆ ನೆನಪಿಸುವ ಮತ್ತೊಂದು ಘಟನೆ
ಮತ್ತೊಂದು ಘಟನೆ ದೆಹಲಿಯ (Delhi Crime) ಕರವಾಲ್ ನಗರದಲ್ಲಿ ಆಘಾತಕಾರಿ ಘಟನೆ (Shocking News) ನಡೆದಿದ್ದು, ಒಬ್ಬ ವ್ಯಕ್ತಿ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಯನ್ನು ಪ್ರದೀಪ್ ಎಂದು ಗುರುತಿಸಲಾಗಿದೆ ಈತ ತನ್ನ ಪತ್ನಿ ಜಯಶ್ರೀ ಮತ್ತು ಐದು ಮತ್ತು ಏಳು ವರ್ಷದ ಪುತ್ರಿಯರನ್ನು ಕೊಂದಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ, ದಂಪತಿಯ ನಡುವೆ ಜಗಳವಾಗಿದ್ದು, ನಂತರ ಪ್ರದೀಪ್ ಈ ಕೊಲೆ ಮಾಡಿದ್ದಾರೆ.
ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರದೀಪ್ ಬಂಧನಕ್ಕೆ ಹುಡುಕಾಟ ಆರಂಭಿಸಿದ್ದಾರೆ. ಇದರ ಜೊತೆಗೆ, 3 ಜನರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. “ದೆಹಲಿಯ ಕರವಾಲ್ ನಗರ ಪ್ರದೇಶದಲ್ಲಿ ಪ್ರದೀಪ್ ಎಂಬ ವ್ಯಕ್ತಿ ತನ್ನ ಪತ್ನಿ, 5 ಮತ್ತು 7 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಕೊಂದಿದ್ದಾರೆ. ಬಳಿಕ ಅವರು ತಲೆಮರೆಸಿಕೊಂಡಿದ್ದಾರೆ” ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




