ಕೊಚ್ಚಿ: ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಉದ್ಯೋಗಿಗಳ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರತಿಫಲ ನೀಡುವುದಾದರೆ ಮಾಲೀಕರು ಚಿನ್ನದ ನಾಣ್ಯ ಅಥವಾ ಇನ್ನೇನಾದರೂ ಉಡುಗೊರೆ ನೀಡುತ್ತಾರೆ. ಆದರೆ ಕೇರಳದಲ್ಲಿ ರಿಟೇಲ್ ಚೈನ್ ಮಾಲೀಕರು ಇತ್ತೀಚೆಗೆ ತಮ್ಮ ವಿಶ್ವಾಸಾರ್ಹ ಸಿಬ್ಬಂದಿಗೆ ಸುಮಾರು ₹ 45 ಲಕ್ಷ ಮೌಲ್ಯದ ಹೊಚ್ಚಹೊಸ ಬೆನ್ಜ್ ಜಿಎಲ್‌ಎ ಕ್ಲಾಸ್ 220 ಡಿ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಕೇರಳದಲ್ಲಿ(Kerala) ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ರಿಟೇಲ್ ವ್ಯಾಪಾರಿ myG ಮಾಲೀಕ ಎಕೆ ಶಾಜಿ ತನ್ನ ಸಿಬ್ಬಂದಿಗೆ ಆ ಉಡುಗೊರೆ ನೀಡಿದ್ದಾರೆ. ಅವರ ‘ಪ್ರತಿಭಾನ್ವಿತ’ ಸಿಬ್ಬಂದಿ ಸಿಆರ್ ಅನೀಶ್, ಅವರು 22 ವರ್ಷಗಳಿಂದ ಅವರಿಗೆ ಆಸರೆಯ ಆಧಾರಸ್ತಂಭ”. ಮೈಜಿ ಸ್ಥಾಪನೆಯಾಗುವ ಮೊದಲೇ ತಮ್ಮ ಉದ್ಯೋಗದಾತರೊಂದಿಗೆ ಸಂಬಂಧ ಹೊಂದಿದ್ದ ಅನೀಶ್, ಸಂಸ್ಥೆಯ ಮಾರ್ಕೆಟಿಂಗ್, ನಿರ್ವಹಣೆ ಮತ್ತು ವ್ಯಾಪಾರ ಅಭಿವೃದ್ಧಿ ಘಟಕಗಳು ಸೇರಿದಂತೆ ಕಂಪನಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಪ್ರಸ್ತುತ myG ಯ ಮುಖ್ಯ ವ್ಯಾಪಾರ ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ. ಶಾಜಿ ಅವರು ಹಂಚಿಕೊಂಡ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ, ಅವರು ತಮ್ಮ ವಿಶ್ವಾಸಾರ್ಹ ಸಿಬ್ಬಂದಿಗೆಪ್ರಶಂಸೆ ವ್ಯಕ್ತಪಡಿಸಿದ್ದು ಅವರಿಗೆ ತುಂಬಾ ಧನ್ಯವಾದಗಳು ಎಂದಿದ್ದಾರೆ.
ನಾನು myG ಅನ್ನು ಪ್ರಾರಂಭಿಸುವ ಮೊದಲು ಅನಿ ಕಳೆದ 22 ವರ್ಷಗಳಿಂದ ನನ್ನೊಂದಿಗೆ ಇದ್ದಾನೆ. ಅವನು ನನಗೆ ಬಲವಾದ ಸ್ತಂಭ ಮತ್ತು ಆಧಾರಸ್ತಂಭ. ಅವರು ನನ್ನನ್ನು ಎಂದಿಗೂ ನಿರಾಶೆಗೊಳಿಸಿಲ್ಲ. ಅವರ ಸಹೋದರ ವಾತ್ಸಲ್ಯ ಮತ್ತು ಅಪಾರವಾದ ಗಮನ ಮತ್ತು ಕೆಲಸದ ಕಡೆಗೆ ಸಮರ್ಪಣೆ ನನಗೆ ತುಂಬಾ ಬೆಂಬಲ ನೀಡಿತು. ನಾನು ಅನೀಶ್ ಅವರನ್ನು ಪಾಲುದಾರ ಎಂದು ಪರಿಗಣಿಸುತ್ತೇನೆ ಮತ್ತು ಉದ್ಯೋಗಿ ಅಲ್ಲ” ಎಂದು ಶಾಜಿ ಇನ್ ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.
ಶಾಜಿ ಅವರು ತಮ್ಮ ಉದ್ಯೋಗಿಗೆ ಕಾರನ್ನು ಉಡುಗೊರೆಯಾಗಿ ನೀಡಿರುವುದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ, ಅವರು ತಮ್ಮ ಆರು ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಅವರ ನೀಡುವ ದೊಡ್ಡ ಮಟ್ಟದ ಉಡುಗೊರೆಗಳಲ್ಲಿ ಉದ್ಯೋಗಿಗಳಿಗೆ ವಿದೇಶ ಪ್ರವಾಸವೂ ಇದೆ.
ಇದನ್ನೂ ಓದಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಿವಾಸಕ್ಕೆ ನುಗ್ಗಲು ಯತ್ನಿಸಿದ ವ್ಯಕ್ತಿ ಪೊಲೀಸರ ವಶಕ್ಕೆ