ಬಿಜೆಪಿಯ ‘ಬುಲ್ಡೋಜರ್’ ತಡೆಯುವ ಶಕ್ತಿ ಯಾರಿಗಿದೆ?: ಅಖಿಲೇಶ್ ಯಾದವ್

| Updated By: ನಯನಾ ರಾಜೀವ್

Updated on: Jun 15, 2022 | 10:16 AM

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸರ್ಕಾರವು ಕೈಗೊಂಡ ಬುಲ್ಡೋಜರ್ ಕ್ರಮವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿರೋಧಿಸಿದ್ದಾರೆ.

ಬಿಜೆಪಿಯ ಬುಲ್ಡೋಜರ್ ತಡೆಯುವ ಶಕ್ತಿ ಯಾರಿಗಿದೆ?: ಅಖಿಲೇಶ್ ಯಾದವ್
Akhilesh Yadav
Follow us on

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸರ್ಕಾರವು ಕೈಗೊಂಡ ಬುಲ್ಡೋಜರ್ ಕ್ರಮವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿರೋಧಿಸಿದ್ದಾರೆ.  ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಅವರು,  ಸಂವಿಧಾನ ಹಾಗೂ ಕಾನೂನು ಬಿಜೆಪಿಯ ಬುಲ್ಡೋಜರ್​ನ್ನು ತಡೆಯಬಹುದೇ ಎಂದು ಪ್ರಶ್ನಿಸಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಅಧಿಕಾರಿಗಳು ಕೆಡವಿದ ಮನೆ ಜಾವೇದ್ ಮೊಹಮ್ಮದ್‌ಗೆ ಸೇರಿದ್ದಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಪ್ರವಾದಿ ಮುಹಮ್ಮದ್ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಅವರುರ ನಗರದಲ್ಲಿ ಹಿಂಸಾಚಾರ ನಡೆದಿದ್ದು, ಜಾವೇದ್ ಮೊಹಮ್ಮದ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿತ್ತು. ಒಂದೊಮ್ಮೆ ಮನೆ ಅಕ್ರಮವಾಗಿದೆ ಎಂದಾದರೆ ಇಷ್ಟು ವರ್ಷ ಆ ಮನೆಯಿಂದ ತೆರಿಗೆಯನ್ನೇಕೆ ಸರ್ಕಾರ ಪಡೆಯುತ್ತಿತ್ತು ತೆರಿಗೆ ಪಡೆಯುವ ಸಂದರ್ಭದಲ್ಲಿ ಸರ್ಕಾರ ಏಕೆ ಮೌನವಾಗಿತ್ತು ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ಓದಿ

ಆರೋಪಿ ಮನೆ ಮಾಲೀಕನಲ್ಲ

ಆರೋಪಿಯು ಮನೆಯ ಮಾಲೀಕನಲ್ಲ, ಈ ಮನೆಯು ಹೆಂಡತಿಯ ಹೆಸರಿನಲ್ಲಿದೆ ಎಂದು ಪತ್ರಿಕೆಗಳು ಹೇಳುತ್ತಿವೆ. ಹಾಗಾದರೆ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತದೆಯೇ ಎಂಬುದು ಪ್ರಶ್ನೆ. ಮತ್ತು ಮನೆಯ ಮೇಲೆ ಬುಲ್ಡೋಜರ್ ಓಡಿಸಿ ನಿರ್ನಾಮ ಮಾಡಿದ ಅಧಿಕಾರಿಗಳು ಅದನ್ನು ಮರುನಿರ್ಮಾಣ ಮಾಡುತ್ತಾರೆಯೇ? ಎಂದು ಸರ್ಕಾರವನ್ನು ಕೇಳಿದ್ದಾರೆ.

ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆ ಕುರಿತು ಅಖಿಲೇಶ್ ಯಾದವ್ ಮಾತನಾಡಿ “ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ, ನಿಜವಾದ ಹಿಂದೂ ಯಾವುದೇ ಧರ್ಮದ ಬಗ್ಗೆ ಏನನ್ನೂ ಹೇಳುವುದಿಲ್ಲ, ಅವರು ಯಾರನ್ನೂ ಅವಮಾನಿಸುವುದಿಲ್ಲ, ಸಂವಿಧಾನವು ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ, ಕಾನೂನು ಅನುಮತಿಸುವುದಿಲ್ಲ ಎಂದರು.

ಪ್ರಶ್ನೆಗಳಿಗೆ ಬಿಜೆಪಿಯಿಂದ ಉತ್ತರವಿಲ್ಲ

ಮೂಲಭೂತ ಪ್ರಶ್ನೆಗಳಿಗೆ ಉತ್ತರವಿಲ್ಲದ ಕಾರಣ ಬಿಜೆಪಿ ಮತ್ತು ನಾಯಕರು ಇಂತಹ ಹಾದಿ ಹಿಡಿಯುತ್ತಿದ್ದಾರೆ ಎಂದರು. ಜಾವೇದ್ ಮೊಹಮ್ಮದ್ ಪ್ರಯಾಗ್‌ರಾಜ್‌ನ ಪ್ರಸಿದ್ಧ ರಾಜಕಾರಣಿಯಾಗಿದ್ದು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದೊಂದಿಗೆ ಸಂಬಂಧ ಹೊಂದಿದ್ದಾರೆ. ಶುಕ್ರವಾರದ ಪ್ರತಿಭಟನೆಯ ಮಾಸ್ಟರ್ ಮೈಂಡ್ ಎಂದು ಆರೋಪಿಸಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಇಲ್ಲಿ ವಕೀಲರ ಗುಂಪೊಂದು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದು, ಮನೆ ಜಾವೇದ್ ಅವರ ಪತ್ನಿ ಹೆಸರಲ್ಲಿರುವುದರಿಂದ ಮನೆ ಕೆಡವಿರುವುದು ಕಾನೂನಿಗೆ ವಿರುದ್ಧವಾಗಿದೆ. ಈ ಹಿಂದೆ ಕೆಡವುವ ಬಗ್ಗೆ ಯಾವುದೇ ಸೂಚನೆ ಬಂದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಘಟನೆ ಏನು?
ಇದೀಗ ಬಿಜೆಪಿಯಿಂದ ಅಮನಾತುಗೊಂಡಿರುವ ವಕ್ತಾರೆ ನೂಪುರ್ ಶರ್ಮಾ ಟಿವಿ ಶೋ ಒಂದರಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದರು.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 10:10 am, Wed, 15 June 22