ಐಎಎಸ್​ ಪಾಸ್ ಆದ 8 ವರ್ಷಗಳ ಬಳಿಕ ಅಭ್ಯರ್ಥಿಗೆ ನಾಗರಿಕ ಸೇವೆಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್; ಏನಿದು ಪ್ರಕರಣ?

ಇದು ರಾಜಶೇಖರ್ ರೆಡ್ಡಿಯವರ ಕೊನೆಯ ಪ್ರಯತ್ನ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್​ ಕಳೆದ ವರ್ಷ ಅವರನ್ನು ವೈದ್ಯಕೀಯವಾಗಿ ಮರುಪರೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚಿಸಿತ್ತು. ಈ ಪರೀಕ್ಷೆಯಲ್ಲಿ ರಾಜಶೇಖರ್ ರೆಡ್ಡಿ 6 ವರ್ಷಗಳ ನಂತರ ವೈದ್ಯಕೀಯವಾಗಿ ಫಿಟ್ ಎಂದು ಘೋಷಿಸಲಾಯಿತು.

ಐಎಎಸ್​ ಪಾಸ್ ಆದ 8 ವರ್ಷಗಳ ಬಳಿಕ ಅಭ್ಯರ್ಥಿಗೆ ನಾಗರಿಕ ಸೇವೆಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್; ಏನಿದು ಪ್ರಕರಣ?
ಸುಪ್ರೀಂಕೋರ್ಟ್
Follow us
| Updated By: ಸುಷ್ಮಾ ಚಕ್ರೆ

Updated on:Jun 15, 2022 | 10:21 AM

ನವದೆಹಲಿ: 2014ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದ, ಆದರೆ ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (BMI) ಕಾರಣ ಅನರ್ಹ ಎಂದು ಘೋಷಿಸಲ್ಪಟ್ಟಿದ್ದ ವ್ಯಕ್ತಿಗೆ ಐಎಎಸ್ (IAS) ಅಧಿಕಾರಿಯಾಗಲು ಸುಪ್ರೀಂ ಕೋರ್ಟ್ (Supreme Court) ಅನುಮತಿ ನೀಡಿರುವ ವಿಚಿತ್ರವಾದ ಪ್ರಕರಣವೊಂದು ನಡೆದಿದೆ. ಐಎಎಸ್​ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 8 ವರ್ಷಗಳ ಬಳಿಕ ಆ ಅಭ್ಯರ್ಥಿಗೆ ನಾಗರಿಕೆ ಸೇವೆಗೆ ಸೇರ್ಪಡೆಯಾಗಲು ಅನುಮತಿ ನೀಡಲಾಗಿದೆ.

ಸುಪ್ರೀಂ ಕೋರ್ಟ್​​ ತನ್ನ 142ನೇ ವಿಧಿಯ ಅಧಿಕಾರವನ್ನು ಬಳಸಿದ್ದು, ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಂಟು ವರ್ಷಗಳ ನಂತರ ಐಎಎಸ್​ ಅಧಿಕಾರಿಯಾಗಲು ಅನುಮತಿ ನೀಡಲಾಗಿದೆ. ಕೆ. ರಾಜಶೇಖರ್ ರೆಡ್ಡಿ ಅವರು ತಮ್ಮ ಐದನೇ ಮತ್ತು ಕೊನೆಯ ಪ್ರಯತ್ನದಲ್ಲಿ CSE-2014ರಲ್ಲಿ ಪಾಸ್ ಆಗಿದ್ದರು. ಆದರೆ, ವೈದ್ಯಕೀಯ ಪರೀಕ್ಷೆ ವೇಳೆ ಅವರ ಬಿಎಂಐ 32 ಇತ್ತು ಎಂಬ ಕಾರಣಕ್ಕೆ ಅವರಿಗೆ ಐಎಎಸ್​ ಅಧಿಕಾರಿಯಾಗಲು ಅನುಮತಿ ನಿರಾಕರಿಸಲಾಗಿತ್ತು. ನಾಗರಿಕ ಸೇವೆಗಳಿಗೆ ಸೇರಲು ಅಭ್ಯರ್ಥಿಗೆ 30 ಅಥವಾ ಅದಕ್ಕಿಂತ ಕಡಿಮೆ BMIಯ ಕಡ್ಡಾಯ ಅವಶ್ಯಕತೆಯಿದೆ.

ಹೀಗಾಗಿ, ಅವರನ್ನು ‘ತಾತ್ಕಾಲಿಕವಾಗಿ ಅನರ್ಹ’ ವರ್ಗದ ಅಡಿಯಲ್ಲಿ ಇರಿಸಲಾಗಿತ್ತು. 2015ರ ಜುಲೈ 4ರಂದು ಅಂತಿಮ CSE-2014 ಪಟ್ಟಿಯು ಬಿಡುಗಡೆಯಾಗಿತ್ತು. 1,236 ಅಭ್ಯರ್ಥಿಗಳನ್ನು ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಯ ವಿವಿಧ ಸೇವೆಗಳಿಗೆ ನೇಮಕಾತಿಗಾಗಿ ಅವರ ಅರ್ಹತೆಯ ಕ್ರಮದಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ ಅದರಲ್ಲಿ ರಾಜಶೇಖರ್ ರೆಡ್ಡಿ ಅವರ ಹೆಸರನ್ನು ಸೇರಿಸಿರಲಿಲ್ಲ. ಆದರೆ, 2016ರ ಜನವರಿ 19ರಂದು ಪ್ರಕಟಿಸಲಾದ ಮೀಸಲು ಪಟ್ಟಿಯಲ್ಲಿ ರಾಜಶೇಖರ್ ರೆಡ್ಡಿ ಅವರ ಹೆಸರು ಕಾಣಿಸಿಕೊಂಡಿತ್ತು.

ಇದನ್ನೂ ಓದಿ
Image
ಅಮೆರಿಕಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಈಗ ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್
Image
Air Pollution: ವಾಯು ಮಾಲಿನ್ಯದಿಂದ 5 ವರ್ಷ ಕಡಿಮೆಯಾಗುತ್ತಿದೆ ಭಾರತೀಯರ ಜೀವಿತಾವಧಿ
Image
Viral Photo: ಈ ಜಿಲ್ಲಾಧಿಕಾರಿಯ 10ನೇ ತರಗತಿ ಅಂಕಪಟ್ಟಿ ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ

ಇದನ್ನೂ ಓದಿ: ವೇಶ್ಯಾವಾಟಿಕೆಯೂ ಒಂದು ವೃತ್ತಿ, ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವಂತಿಲ್ಲ; ಸುಪ್ರೀಂ ಕೋರ್ಟ್​ ಮಹತ್ವದ ಆದೇಶ

ಸಿಎಸ್‌ಇ ನಿಯಮಗಳ ಪ್ರಕಾರ, ಅಂತಹ ವರ್ಗಕ್ಕೆ ಸೇರಿದ ಅಭ್ಯರ್ಥಿಯು ಆರು ತಿಂಗಳೊಳಗೆ ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರವನ್ನು ಒದಗಿಸಬೇಕು. ರಾಜಶೇಖರ್ ರೆಡ್ಡಿ ಅವರು 2016ರ ಮಾರ್ಚ್ 9ರಂದು ಮರು ವೈದ್ಯಕೀಯ ಪರೀಕ್ಷೆಗೆ ಪ್ರಾತಿನಿಧ್ಯವನ್ನು ಸಲ್ಲಿಸಿದ್ದರು. ಇದು ನಿಗದಿತ ಆರು ತಿಂಗಳ ಗಡುವನ್ನು ಮೀರಿದ್ದರಿಂದ ಅದನ್ನು ತಿರಸ್ಕರಿಸಲಾಗಿತ್ತು.

ಇದು ರಾಜಶೇಖರ್ ರೆಡ್ಡಿಯವರ ಐದನೇ ಮತ್ತು ಕೊನೆಯ ಪ್ರಯತ್ನ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್​ ಕಳೆದ ವರ್ಷ ಏಪ್ರಿಲ್ 6ರಂದು ಅವರನ್ನು ವೈದ್ಯಕೀಯವಾಗಿ ಮರುಪರೀಕ್ಷೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. ವೈದ್ಯಕೀಯ ಮರು ಪರೀಕ್ಷೆಯಲ್ಲಿ ರಾಜಶೇಖರ್ ರೆಡ್ಡಿ 6 ವರ್ಷಗಳ ನಂತರ ವೈದ್ಯಕೀಯವಾಗಿ ಫಿಟ್ ಎಂದು ಘೋಷಿಸಲಾಯಿತು. ಮರು ವೈದ್ಯಕೀಯ ಫಿಟ್‌ನೆಸ್ ವರದಿಯನ್ನು ಆಧರಿಸಿ, ಕೇಂದ್ರ ಸರ್ಕಾರವು ರಾಜಶೇಖರ್ ರೆಡ್ಡಿ ಅವರನ್ನು ಮೂಲತಃ ಸಿಎಸ್‌ಇ, 2014ರಲ್ಲಿ ಪ್ರಕಟಿಸಿದ ಏಕೀಕೃತ ಮೀಸಲು ಪಟ್ಟಿಯಲ್ಲಿ ಅವರ ನಿಯೋಜನೆಯ ಪ್ರಕಾರ ನೇಮಕಾತಿಗೆ ಪರಿಗಣಿಸಬಹುದು ಎಂದು ನಿರ್ದೇಶಿಸುವುದು ಸೂಕ್ತವೆಂದು ಸುಪ್ರೀಂ ಕೋರ್ಟ್​ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:19 am, Wed, 15 June 22

Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ