ಕೆಡವಲಾದ ಮೂರೂ ದೇವಾಲಯಗಳನ್ನು ಮರು ನಿರ್ಮಿಸಲಾಗುವುದು; ಅಲ್ವಾರ್ ಜಿಲ್ಲಾಡಳಿತ ಘೋಷಣೆ

ಕೆಡವಲಾದ ಮೂರೂ ದೇವಾಲಯಗಳನ್ನು ಮರು ನಿರ್ಮಿಸಲಾಗುವುದು; ಅಲ್ವಾರ್ ಜಿಲ್ಲಾಡಳಿತ ಘೋಷಣೆ
ನೆಲಸಮವಾದ ರಾಜಸ್ಥಾನದ ದೇವಸ್ಥಾನ

ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಮೂರು ದೇವಾಲಯಗಳು ಮತ್ತು ಕೆಲವು ಅಂಗಡಿಗಳನ್ನು ಈ ವಾರದ ಆರಂಭದಲ್ಲಿ ಕೆಡವಲಾಗಿತ್ತು.

TV9kannada Web Team

| Edited By: Sushma Chakre

Apr 23, 2022 | 3:51 PM

ಜೈಪುರ: ರಾಜಸ್ಥಾನದ ರಾಜ್‌ಗಢದಲ್ಲಿ ಅತಿಕ್ರಮ ಮಾಡಿಕೊಂಡ ಜಾಗವನ್ನು ತೆರವುಗೊಳಿಸುವ ಅಭಿಯಾನದಲ್ಲಿ ಕೆಡವಲಾದ ಎಲ್ಲಾ ಮೂರು ದೇವಾಲಯಗಳನ್ನು ಪುನರ್‌ನಿರ್ಮಿಸಲಾಗುವುದು ಎಂದು ಅಲ್ವಾರ್ (Alwar) ಜಿಲ್ಲಾಡಳಿತ ಘೋಷಿಸಿದೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಮೂರು ದೇವಾಲಯಗಳು (Hindu Temples) ಮತ್ತು ಕೆಲವು ಅಂಗಡಿಗಳನ್ನು ಈ ವಾರದ ಆರಂಭದಲ್ಲಿ ಕೆಡವಲಾಗಿತ್ತು. ರಾಜ್‌ಗಢ ಪಟ್ಟಣದಲ್ಲಿ ರಸ್ತೆಯನ್ನು ವಿಸ್ತರಿಸುವ ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿ ಅಧಿಕಾರಿಗಳು ಈ ಕ್ರಮವನ್ನು ತೆಗೆದುಕೊಂಡಿದ್ದಾಗಿ ವಿವರಿಸಿದ್ದಾರೆ.

ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ದೇವಾಲಯಗಳ ಧ್ವಂಸ ಪ್ರಕರಣದ ಆರೋಪವನ್ನು ವ್ಯಾಪಾರ ಮಾಡಿಕೊಂಡಿವೆ. ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಧ್ವಂಸದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದರೆ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ ಇದು ಕೇಸರಿ ಪಕ್ಷದ ನೇತೃತ್ವದ ನಗರದ ಪುರಸಭೆಯ ನಿರ್ಧಾರ ಎಂದು ಟೀಕಿಸಿದ್ದಾರೆ.

ರಾಜಸ್ಥಾನದ ಅಲ್ವಾರ್‌ನಲ್ಲಿ 300 ವರ್ಷಗಳಷ್ಟು ಹಳೆಯದಾದ ಶಿವನ ದೇವಾಲಯವನ್ನು ಕೆಡವಿದ ನಂತರ ಭಾರೀ ವಿವಾದ ಸೃಷ್ಟಿಯಾಗಿತ್ತು. ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅತಿಶಿ ಅವರು ದೆಹಲಿಯ ಶ್ರೀನಿವಾಸಪುರಿ ಪ್ರದೇಶದಲ್ಲಿ ದೇವಾಲಯವನ್ನು ಕೆಡವಲು ಕೇಂದ್ರ ಸರ್ಕಾರ ಹೊರಡಿಸಿದ ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.

ಯಾವುದೇ ಅನುಮತಿಯಿಲ್ಲದೆ ಸರ್ಕಾರಿ ಭೂಮಿಯಲ್ಲಿ ಧಾರ್ಮಿಕ ಕಟ್ಟಡ ನಿರ್ಮಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಏಳು ದಿನಗಳೊಳಗೆ ಭೂಮಿಯನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ಕಟ್ಟಡವನ್ನು ನೆಲಸಮಗೊಳಿಸಲಾಗುವುದು ಎಂದು ಪತ್ರದಲ್ಲಿ ಆದೇಶಿಸಲಾಗಿದೆ. ಏಪ್ರಿಲ್ 17 ಮತ್ತು ಏಪ್ರಿಲ್ 18ರಂದು ಅತಿಕ್ರಮಣ ವಿರೋಧಿ ಆಂದೋಲನವನ್ನು ನಡೆಸಲಾಯಿತು. ದೇವಸ್ಥಾನವನ್ನು ಕೆಡವುವ ಸಂದರ್ಭದಲ್ಲಿ ಯಾವುದೇ ಕಾನೂನು ನಿಯಮವನ್ನು ಮೀರಲಾಗಿಲ್ಲ ಮತ್ತು ಯಾವುದೇ ಪ್ರತಿಭಟನೆ ನಡೆದಿಲ್ಲ ಎಂದು ಡಿಎಂ ಹೇಳಿದ್ದಾರೆ.

ದೆಹಲಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ನಡೆಸಲಾದ ಅತಿಕ್ರಮಣ ವಿರೋಧಿ ಅಭಿಯಾನಗಳ ವಿವಾದದ ನಡುವೆ, ಶನಿವಾರ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಗೋಶಾಲೆಯನ್ನು ಕೆಡವಲಾಗಿತ್ತು. ಸಿಕರ್‌ನ ಬಿಜೆಪಿ ಸಂಸದ ಸ್ವಾಮಿ ಸುಮೇಧಾನಂದ ಸರಸ್ವತಿ, ಇತರ ಬಿಜೆಪಿ ನಾಯಕರೊಂದಿಗೆ ರಾಜ್‌ಗಢದಲ್ಲಿ ಧ್ವಂಸಗೊಳಿಸುವ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ವಾರದ ಆರಂಭದಲ್ಲಿ ಒಟ್ಟು 3 ದೇವಾಲಯಗಳು ಮತ್ತು ಕೆಲವು ಅಂಗಡಿಗಳನ್ನು ಕೆಡವಲಾಗಿತ್ತು. ಅಧಿಕಾರಿಗಳು ಪಟ್ಟಣದಲ್ಲಿ ರಸ್ತೆಯನ್ನು ವಿಸ್ತರಿಸುವ ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿ ಕ್ರಮವನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ 300 ವರ್ಷ ಹಳೆಯ ಶಿವನ ದೇವಸ್ಥಾನ ನೆಲಸಮ; ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

Mangalore Dargah: ಮಂಗಳೂರಿನಲ್ಲಿ ದರ್ಗಾ ನವೀಕರಣದ ವೇಳೆ ಹಿಂದೂ ಶೈಲಿಯ ದೇವಸ್ಥಾನ ಪತ್ತೆ!

Follow us on

Related Stories

Most Read Stories

Click on your DTH Provider to Add TV9 Kannada