ಬೇಲೂರು ಚೆನ್ನಕೇಶವ ದೇವಾಲಯ ಆವರಣದಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡದಂತೆ ನಿಷೇಧ
ಇವರಿಬ್ಬರು ತಮಗೆ ಗೊತ್ತಿರುವ ಕಲೆಯ ಮೂಲಕ ತಮ್ಮ ಅಸಮಾಧಾನವನ್ನು ಹೇಳಿಕೊಳ್ಳುತ್ತಿದ್ದಾರೆ ಮತ್ತು ಸಂಬಂಧಪಟ್ಟವರ ಗಮನವನ್ನು ತಮ್ಮಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಮುಸ್ಲಿಂ ಸಮುದಾಯದ (Muslim community) ವ್ಯಾಪಾರಿಗಳಿಗೆ ಹಿಂದೂ ಜಾತ್ರೆಗಳಲ್ಲಿ (temple fairs), ದೇವಸ್ಥಾನದ ಆವರಣಗಳಲ್ಲಿ ಮಳಿಗೆ ಹಾಕದಂತೆ ವ್ಯಾಪಾರ ಮಾಡದಂತೆ ತಡೆಯುವುದು ಮುಂದುವರಿದಿದೆ. ಮೊದಲು ಜಾತ್ರೆಗಳಿಂದ ಅವರಿಗೆ ನಿಷೇಧ ಹೇರಲಾಯಿತು. ಈಗ ದೇವಸ್ಥಾನ ಆವರಣಗಳಲ್ಲಿ (temple premises) ಅವರು ವ್ಯಾಪಾರ ಮಾಡುವುದನ್ನು ಪ್ರತಿಬಂಧಿಸಲಾಗಿದೆ. ಮಾಧ್ಯಮಗಳಲ್ಲಿ ಪ್ರತಿದಿನ ಈ ಕುರಿತಾದ ವರದಿಗಳು ಬಿತ್ತರವಾಗುತ್ತಿವೆ. ಹಾಸನ ಜಿಲ್ಲೆಯ ಬೇಲೂರು ಚೆನ್ನಕೇಶವ ದೇವಾಲಯ ಯಾರಿಗೆ ಗೊತ್ತಿಲ್ಲ? ಬಹಳ ಪ್ರಸಿದ್ಧವಾದ ದೇವಾಲಯ ಇದು. ದೇವಾಲಯದ ಆವರಣದಲ್ಲಿ ದಶಕಗಳಿಂದ ಒಂದಷ್ಟು ಮುಸ್ಲಿಂ ವ್ಯಾಪಾರಿಗಳು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು. ಅವರಿಗೆ ಈ ವ್ಯಾಪಾರವೊಂದೇ ಅದಾಯದ ಮೂಲ. ಅದರೆ, ಅವರನ್ನು ಅಲ್ಲಿ ವ್ಯಾಪಾರ ಮಾಡುವಂತಿಲ್ಲ ಎಂದು ಆವರಣದಿಂದ ಹೊರಗೆ ಕಳಿಸಲಾಗಿದೆ.
ದೇವಸ್ಥಾನ ಆಡಳಿತ ಮಂಡಳಿಯ ನಿರ್ಧಾರ ಈ ವ್ಯಾಪಾರಿಗಳಿಗೆ ಆಘಾತವನ್ನುಂಟು ಮಾಡಿದೆ. ಹಾಗಾಗಿ ಅವರು, ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿನೂತನ ಶೈಲಿಯಲ್ಲಿ ತಮ್ಮ ನೋವನ್ನು ತೋಡಿಕೊಳ್ಳುತ್ತಾ ಪ್ರತಿಭಟನೆ ನಡೆಸಿದರು. ಅವರಲ್ಲಿ ಇಬ್ಬರಿಗೆ ಸಂಗೀತದ ಉತ್ತಮ ಜ್ಞಾನವಿದೆ, ಒಬ್ಬರು ಪಿಟೀಲು ವಾದಕರು, ಮತ್ತೊಬ್ಬರು ಕೊಳಲೂದುತ್ತಾರೆ.
ಇವರಿಬ್ಬರು ತಮಗೆ ಗೊತ್ತಿರುವ ಕಲೆಯ ಮೂಲಕ ತಮ್ಮ ಅಸಮಾಧಾನವನ್ನು ಹೇಳಿಕೊಳ್ಳುತ್ತಿದ್ದಾರೆ ಮತ್ತು ಸಂಬಂಧಪಟ್ಟವರ ಗಮನವನ್ನು ತಮ್ಮಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕೊಳಲೂದುವ ವ್ಯಕ್ತಿ ದಿವಂಗತ ಡಾ ಪುನೀತ್ ರಾಜಕುಮಾರ ಅವರ ಚಿತ್ರದ ‘ಬೊಂಬೆ ಹೇಳುತೈತೆ ನೀನೇ ರಾಜಕುಮಾರ…’ ಹಾಡನ್ನು ನುಡಿಸುತ್ತಾರೆ. ಜಿಲ್ಲಾಧಿಕಾರಿಗಳು ಅವರ ಮನವಿಗೆ ಹೇಗೆ ಸ್ಪಂದಿಸಿದರು ಅಂತ ಗೊತ್ತಿಲ್ಲ ಮಾರಾಯ್ರೇ.
ಇದನ್ನೂ ಓದಿ: ಪತ್ನಿ ಬಗ್ಗೆ ಜೋಕ್ ಮಾಡಿದ್ದಕ್ಕೆ ಆಸ್ಕರ್ ವೇದಿಕೆ ಮೇಲೆ ನಟನ ಕೆನ್ನೆಗೆ ಬಾರಿಸಿದ ವಿಲ್ ಸ್ಮಿತ್; ವಿಡಿಯೋ ವೈರಲ್